This is the title of the web page
This is the title of the web page

Please assign a menu to the primary menu location under menu

State

ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ ರಡಿ ನೋಂದಣಿಗೊಂಡ ಸಂಘ-ಸಂಸ್ಥೆಗಳ ನವೀಕರಣ


ಗದಗ ಸೆಪ್ಟೆಂಬರ್ ೧೨: ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ ರಡಿ ನೋಂದಣಿಯಾದ ಸಂಘ-ಸಂಸ್ಥೆಗಳು ೦೫ ವರ್ಷಗಳಿಗೂ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ-ಸಂಸ್ಥೆಗಳನ್ನು ಸದಸ್ಯರ ಹಿತದೃಷ್ಟಿಯಿಂದ ಈ ಕೆಳಕಂಡ ಷರತ್ತಿಗೊಳ್ಳಪಟ್ಟು ದಿನಾಂಕ ೩೦-೦೬-೨೦೨೪ ರ ಅಂತ್ಯದವರೆಗೆ ಫೈಲಿಂಗ್‌ಗೆ ಅನುಮತಿಯನ್ನು ನೀಡಿದೆ.
೦೫ ವರ್ಷಗಳಿಗೆ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಬಾಕಿ ಇರುವ ಸಂಘ-ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.೩೦೦೦/- ಹೆಚ್ಚುವರಿ ದಂಡ ಪಾವತಿಸಿ ಫೈಲಿಂಗ್ ಮಾಡಿಕೊಳ್ಳತಕ್ಕದ್ದು. ಈ ಅವಕಾಶವು ದಿನಾಂಕ ೩೦-೦೬-೨೦೨೪ ರ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ ಗದಗ ಜಿಲ್ಲೆಯಲ್ಲಿ ನೋಂದಾಯಿತ ಎಲ್ಲ ಸಂಘ-ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಲು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘ/ ಸಂಸ್ಥೆಗಳ ಜಿಲ್ಲಾ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply