This is the title of the web page
This is the title of the web page

Please assign a menu to the primary menu location under menu

Local News

ಏ.೧೦ ರಿಂದ ರೇಣುಕಾದೇವಿ ಜಾತ್ರಾ ಮಹೋತ್ಸವ


ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. ೧೦ ರಿಂದ ೧೨ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
ದಿ. ೧೦ ರಂದು ಸಾಯಂಕಾಲ ೪ ಗಂಟೆಗೆ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮಂಗಳವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳುವುದು. ರಾತ್ರಿ ೯ ಗಂಟೆಗೆ ಶ್ರೀ ಕರಣಿ ಮಲಕಾರಿಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಗೋಕಾಕ ಇವರಿಂದ ಅಮೋಘಸಿದ್ದೇಶ್ವರ ಮಾರ್ಗದಲ್ಲಿ, ಶ್ರೀ ಬೀರಲಿಂಗೇಶ್ವರ ಗಾಯನ ಸಂಘ ಬರಗಿ ಇವರಿಂದ ಶ್ರೀ ಮಾಳಿಂಗೇಶ್ವರ ಮಾರ್ಗದಲ್ಲಿ ಡೊಳ್ಳಿನ ಪದಗಳು ಜರುಗುವವು.
ದಿ. ೧೧ ರಂದು ಬೆಳಿಗ್ಗೆ ಶ್ರೀದೇವಿಗೆ ಅಭಿಷೇಕ, ನಂತರ ಸಕಲ ವಾದ್ಯಮೇಳದೊಂದಿಗೆ ಮುತ್ತೆöÊದೆಯರ ಆರತಿ, ಅಂಬಲಿ-ಕೊಡಗಳೊಂದಿಗೆ ಶ್ರೀದೇವಿ ಪಲ್ಲಕ್ಕಿಯ ಮೆರವಣಿಯು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀದೇವಿ ದೇವಸ್ಥಾನ ತಲುಪುವುದು. ಮಧ್ಯಾಹ್ನ ೧೨ ಗಂಟೆಗೆ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ. ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಪ್ರಸಾದ ಜರುಗಲಿದೆ. ಸಾಯಂಕಾಲ ೬ ಗಂಟೆಗೆ ಚಿಕ್ಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ೮ ಗಂಟೆಗೆ ಶ್ರೀಫಲಗಳ ಲೀಲಾವು, ೯ ಗಂಟೆಗೆ ಪ್ರತೀಕ್ಷಾ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ದಿ. ೧೨ ರಂದು ಮುಂಜಾನೆ ೯ ಗಂಟೆಗೆ ದೇವರ ಪಲ್ಲಕ್ಕಿಗಳನ್ನು ತಮ್ಮ-ತಮ್ಮ ದೇವಸ್ಥಾನಗಳಿಗೆ ಮರಳಿ ಕಳಿಸುವ ಮೂಲಕ ಸಂಪನ್ನಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಜಾತ್ರಾ ಕಮೀಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply