This is the title of the web page
This is the title of the web page

Please assign a menu to the primary menu location under menu

State

ದಿಂಗಾಲೇಶ್ವರ ಸ್ವಾಮೀಜಿಯವರಿಗೆ ವಿಶೇಷ ಭದ್ರತೆ ನೀಡಲು ಮನವಿ


ಗದಗ್ ; ಜಿಲ್ಲೆ ಶಿರಹಟ್ಟಿ ನಗರದ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ವಿಶೇಷ ಭದ್ರತೆ ಪಡೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿರಹಟ್ಟಿ ತಾಲೂಕು ಅಧ್ಯಕ್ಷರಾದ ಬಸವರಾಜ್ ವಡವಿ ಇವರ ನೇತೃತ್ವದಲ್ಲಿ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ಒಂದು ವಾರದಿಂದ ಶಿರಹಟ್ಟಿಯ ಫಕೀರೇಶ್ವರ ಮಠದ ಸುತ್ತಮುತ್ತ ಮೂರು ಜನ ಅಪರಿಚರಿತರು ಮಧ್ಯರಾತ್ರಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದು, ಇದನ್ನು ಮಠದ ಸಿಬ್ಬಂದಿಗಳು ಗಮನಿಸಿ ಹಿಡಿಯಲು ಹೋದಾಗ ಅಲ್ಲಿಂದ ಪರಾರಿಯಾದ ಘಟನೆ ಜರುಗಿದ್ದು, ಇದರಿಂದ ಶ್ರೀಮಠದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ರಾಜ್ಯದಲ್ಲಿ ಸಮಾಜ ಚಿಂತಕರು ಸಾಹಿತಿಗಳು ಕನ್ನಡಪರ ಹೋರಾಟಗಾರರು ಹಾಗೂ ಅನೇಕ ಮಠಗಳ ಶ್ರೀಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ವಿಚಾರಧಾರೆಯಿಂದ ಸಮಾಜದಲ್ಲಿ ಕ್ರಾಂತಿಕಾರಿ ಸುಧಾರಣೆಗಳಾಗಿವೆ. ಆದರೆ ಇತ್ತೀಚೆಗೆ ಜೈನ ಮುನಿಗಳ ಹತ್ಯೆ ಅಂತಹ ಘಟನೆಯಿಂದ ಸರ್ಕಾರ ಎಚ್ಚರವಹಿಸಿ ಗಣ್ಯರಿಗೆ  ರಕ್ಷಣೆ ನೀಡುವಲ್ಲಿ ಹೆಚ್ಚು ಹೊತ್ತು ನೀಡಬೇಕಾಗಿದೆ. ಸಾಧು ಸಂತ ಮುನಿಗಳು ಗಣ್ಯರು ಮುಕ್ತವಾಗಿ ಸಮಾಜದ ಕೆಲಸಕಾರ್ಯಗಳನ್ನು ಮಾಡಲು ಅವಕಾಶ ಸಿಗಬೇಕು. ಆದ್ದರಿಂದ ಶಿರಹಟ್ಟಿ ನಗರದ ಭಾವೈಕ್ಯತೆಯ ಹಾಗೂ ಮನುಕುಲದ ಏಕತೆ ಸಾರುವ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಅವರಿಗೆ ವಿಶೇಷ ಭದ್ರತಾ ಪಡೆ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದೇವೇಂದ್ರ ಶಿಂದೆ, ನಗರ ಘಟಕದ ಅಧ್ಯಕ್ಷರಾದ ಇಮ್ತಿಯಾಜ್ ಪಟವೇಗಾರ, ಉಪಾಧ್ಯಕ್ಷರಾದ ಅನ್ವರ್ ಬರದ್ವಾಡ, ಶಾರುಖ್ ಮಸೂತಿ ಮುಂತಾದವರು ಭಾಗಿಯಾಗಿದ್ದರೂ.

Leave a Reply