ಬೆಳಗಾವಿ:ಕಿತ್ತೂರ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್ 4)ದಿಂದ ಇಂಚಲ ಕ್ರಾಸ ಬಳಿ ಬರುವ ಬೆಳಗಾವಿ-ರಾಯಚೂರ ರಸ್ತೆವರೆಗೂ ಹೈವೇ ರಸ್ತೆ ನಿರ್ಮಿಸುವ ಬಗ್ಗೆ ಹಾಗೂ ಮಲಪ್ರಭಾ ನದಿಗೆ ಅಡ್ಡಲಾಗಿ ಸಂಗೊಳ್ಳಿ ಹತ್ತಿರ ನಿರ್ಮಿಸುತ್ತಿರುವ ರಾಯಣ್ಣ ಸೇತುವೆ ಕಾಮಗಾರಿ ವಿಳಂಬ ಕುರಿತು ಮತ್ತು ಆನಂದಾಶ್ರಮಕ್ಕೆ ಸಾಂಸ್ಕೃತಿಕ ಭವನ/ಯಾತ್ರಿ ನಿವಾಸ ನಿರ್ಮಿಸುವಂತೆ ಗದಗನಲ್ಲಿ ಪ್ರವಾಸದಲ್ಲಿರುವ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಕೆ ಪಾಟೀಲರವರಿಗೆ ಬೇವಿನಕೊಪ್ಪ ದ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿಯವರು ಹಾಗೂ ಅವರ ನಿಯೋಗ ಮನವಿ ಅರ್ಪಿಸಿ ಈ ಎಲ್ಲ ಕಾರ್ಯಗಳನ್ನು ಆದಷ್ಟು ಬೇಗ ಮಾಡಿಸಿಕೊಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಸಚಿವರಿಗೆ ಅಭಿನಂದನಾ ಪತ್ರ ಸಲ್ಲಿಸಿ ಸತ್ಕರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಯಣ್ಣ ಸೇತುವೆ ನಿರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ವಾಮೀಜಿಯವರು ಸ್ಮರಿಸಿದರು.
ಈ ಎಲ್ಲ ಕಾರ್ಯಕ್ಕೆ ಕಾರಣೀಭೂತರಾದ ನಿವೃತ್ತ ಅಧೀಕ್ಷಕ ಇಂಜನೀಯರ್ ಶ್ರೀ ರಮೇಶ ಜಂಗಲ ಹಾಗೂ ಮಲಪ್ರಭಾ ಮುಖ್ಯ ಇಂಜನಿಯರ ಶ್ರೀ ಅಶೋಕ ವಾಸನದ,ಶ್ರೀ ರಮೇಶ ಕೋಲಕಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸನಗೌಡ ಕಾಮನಗೌಡರ ಡಾ. ಶಿವನಗೌಡ ಪಾಟೀಲ, ನಿತ್ಯಾನಂದ ಸೇವಾ ಸಮಿತಿಯಶ್ರೀ ಫಕ್ಕೀರಪ್ಪ ಹಸರನ್ನವರ.ಹಾಗೂ ಶ್ರೀ ಮಲ್ಲಿಕಾರ್ಜುನ ಪೂಜೇರ ಉಪಸ್ಥಿತರಿದ್ದರು.
#HKPatil
#AnandAshram