This is the title of the web page
This is the title of the web page

Please assign a menu to the primary menu location under menu

Local News

ಗ್ರಾಮರಕ್ಷಕ ದಳಪತಿಗಳಿಗೆ ಗೌರವಧನ ನೀಡುವಂತೆ ಮನವಿ


ಬೆಳಗಾವಿ ; ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ರಕ್ಷಕ ಪೊಲೀಸ್ ದಳಪತಿಗಳಿಗೆ ಗೌರವಧನವನ್ನು £Ãಡುವಂತೆ ಕರ್ನಾಟಕ ರಾಜ್ಯ ಗ್ರಾಮ ರಕ್ಷಕ ಪೊಲೀಸ್ ದಳ ಪತಿಗಳ ಸಂಘದ ರಾಜ್ಯಾಧ್ಯಕ್ಷರಾದ ಸಿಎಸ್ ಪಾಟೀಲ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ .
ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ದಳಪತಿಗಳ ಸಂಘದ £ಯೋಗವು ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮನವಿ ಅರ್ಪಿಸಿತು .
ಗ್ರಾಮರಕ್ಷಕ ದಳ ಪತಿಗಳಿಗೆ ಗೌರವ ಧನವನ್ನು £Ãಡುವ ಕುರಿತು ಕಳೆದ ಹಲವು ದಶಕಗಳಿಂದ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಆದರೆ ಈವರೆಗೂ ತಮ್ಮ ಬೇಡಿಕೆ ಈಡೇರಿಲ್ಲ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ .
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಿಗೂ ಮನವಿ £Ãಡಲಾಗಿತ್ತು ಅದಕ್ಕೂ ಮುನ್ನ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರಿಗೂ ಮನವಿ £Ãಡಲಾಗಿತ್ತು ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಮನವಿ £Ãಡಲಾಗಿತ್ತು .
ಆಗ ನಮ್ಮ ಬೇಡಿಕೆ ಈಡೇರಿಸುವ ಕುರಿತು ಉಭಯ ಮುಖ್ಯಮಂತ್ರಿಗಳಿಂದ ಆಶ್ವಾಸನೆ ದೊರಕಿತ್ತು ದುರ್ದೈವದಿಂದ ಕೊನೆಯ ಹಂತದಲ್ಲಿ ಸರ್ಕಾರಗಳು ಬದಲಾದ ಕಾರಣ ನಮ್ಮ ಬೇಡಿಕೆ ಈಡೇರದೆ ನೆನೆಗುದಿಗೆ ಬಿತ್ತು ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಮನವಿಯೊಂದನ್ನು ಸಲ್ಲಿಸಲಾಗಿತು.ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಗ್ರಾಮರಕ್ಷಕ ದಳ ಪತಿಗಳ ಪರವಾಗಿ ತೀರ್ಪನ್ನು £Ãಡಿ ಗ್ರಾಮರಕ್ಷಕ ದಳಪತಿಗಳಿಗೆ ಗೌರವಧನವನ್ನು £ಗದಿಪಡಿಸುವಂತೆ ಆದೇಶವನ್ನು £Ãಡಿತ್ತು .ನ್ಯಾಯಾಲಯದ ಆದೇಶದ ಪ್ರತಿಯನ್ನು ಸರ್ಕಾರಕ್ಕೆ £Ãಡಿದಾಗ ಸರ್ಕಾರ ಕೂಡ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ £Ãಡಿತ್ತು ಆದರೆ ಈವರೆಗೂ ಅದು ಜಾರಿಯಾಗಿಲ್ಲ ಎಂದು ಸಿ ಎಸ್ ಪಾಟೀಲ್ ಅವರು ಹೇಳಿದ್ದಾರೆ .
ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ ಕೂಡ ಹನ್ನೊಂದು ಇಲಾಖೆಗಳ ಅಡಿಯಲ್ಲಿ ಬರುವ ದಿನಗೂಲಿಗಳಿಗೆ ಗೌರವ ಧನವನ್ನು £ಗದಿಪಡಿಸುವ ಕುರಿತು ಸರ್ಕಾರಕ್ಕೆ £ರ್ದೇಶನ £Ãಡಿತ್ತು ಆ ಹನ್ನೊಂದು ಇಲಾಖೆಗಳ ಪೈಕಿ ಗ್ರಾಮರಕ್ಷಕ ದಳಪತಿಗಳು ಕೂಡ ಒಳಗೊಳ್ಳುತ್ತಾರೆ ಎಂದು ಸಿಎಸ್ ಪಾಟೀಲ್ ಹೇಳಿದ್ದಾರೆ .
ಹಣ ವಸೂಲಿ ಮಾಡುವ ಕಿಡಿಗೇಡಿಗಳ ವಿರುದ್ಧ ಎಚ್ಚರಿಕೆ ;
ಸರ್ಕಾರದಿಂದ ಗೌರವ ಧನ ಕೊಡಿಸುವುದಾಗಿ ಕೆಲವು ಕಿಡಿಗೇಡಿಗಳು ಗ್ರಾಮರಕ್ಷಕ ದಳಪತಿಗಳಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ ಇಂಥವರಿಂದ ದೂರ ಇರುವಂತೆ ಗ್ರಾಮರಕ್ಷಕ ದಳಪತಿಗಳಿಗೆ ಸೂಚನೆ £Ãಡಿರುವ ಸಿ ಎಸ್ ಪಾಟೀಲ್ ಅವರು ಯಾರಾದರೂ ಬಂದು ದಳಪತಿಗಳ ಹತ್ತಿರ ದುಡ್ಡು ಕೇಳಿದರೇ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ಧಾರೆ.ಹಾಗೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು £Ãಡುವಂತೆ ಅವರು ಹೇಳಿದ್ದಾರೆ .
ಕರ್ನಾಟಕ ರಾಜ್ಯ ಗ್ರಾಮ ರಕ್ಷಕ ದಳ ಪತಿಗಳ ಸಂಘ ಒಂದೇ ಇದ್ದು ಅದೇ ಅಧಿಕೃತ ಸಂಘವಾಗಿದೆ ಎಂದವರು ಹೇಳಿದ್ದಾರೆ .


Leave a Reply