ಬೆಳಗಾವಿ ; ಬೆಳಗಾವಿಯ ನೀವೃತ್ತ ಮುಖ್ಯೋಪಾಧ್ಯಾಯ , ಹಿರಿಯ ಸಾಹಿತಿ , ಪತ್ರಕರ್ತ ಪುಂಡಲೀಕ ಪಾಟೀಲ ಅವರು ಇಂದು (ಶನಿವಾರ) ನಿಧನರಾಗಿದ್ದಾರೆ.
ವಯೋಸಹಜ ನಿಶ್ಯಕ್ತಿಯಿಂದ ಬಳಲುತ್ತಿದ್ದ ಅವರಿಗೆ ನಿಧನ ಕಾಲಕ್ಕೆ ಅವರಿಗೆ ೮೮ ವರ್ಷ ವಯಸ್ಸಾಗಿತ್ತು, ಅವರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರಿಯರು ಒಬ್ಬ ಪತ್ರನನ್ನು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.
೩೦ ಕ್ಕೂ ಅಧಿಕ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದ ಅವರು ಹಲವು ಸನ್ಮಾನಗಳಿಗೆ ಭಾಜನರಾಗಿದ್ದರು.ಬೀದಿ ನಾಟಕಗಳನ್ನು ಆಡಿ ಜಿಲ್ಲಾಡಳಿತದಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.ಅವರು ಬೆಳಗಾವಯ ಜನಸಾಹಿತ್ಯ ಪೀಠದ ಅಧ್ಯಕ್ಷರೂ ಆಗಿದ್ದರು.
“ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘ ” ಮತ್ತು ” ಕರ್ನಾಟಕ ಪತ್ರಕರ್ತರ ಸಂಘ ” ದ ಪರವಾಗಿ ಶೃದ್ಧಾಂಜಲಿ ಸಲ್ಲಿಸಲಾಗುತ್ತಿದೆ, ಪುಂಡಲೀಕ ಪಾಟೀಲ ಅವರ ನಿಧನದಿಂದ ಅವರ ಕುಟುಂಬದವರಿಗಾದ ದುಖ:ದಲ್ಲಿ “ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘ ” ಮತ್ತು ” ಕರ್ನಾಟಕ ಪತ್ರಕರ್ತರ ಸಂಘ ” ಭಾಗಿಯಾಗಿದೆ.
Gadi Kannadiga > State > ನೀವೃತ್ತ ಶಿಕ್ಷಕ, ಸಾಹಿತಿ, ಪತ್ರಕರ್ತ ಪುಂಡಲೀಕ ಪಾಟೀಲ ನಿಧನ