ಬೆಳಗಾವಿ,ಅ.೧೧ : ವಿಶಾಲ ಸಟವಾಜಿ ಗಾಯಕವಾಡ ಬೆಳಗಾವಿ ಸದಾಶಿವ ನಗರ ಇವರಿಂದ ೪ ಲಕ್ಷ ೯೨ ಸಾವಿರ ಬಾಂಡ್ ಮೊತ್ತವು ಬಾಕಿ ಇರುವುದರಿಂದ, ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ನ್ಯಾಯಾಲಯವು ಆದೇಶ ನೀಡಿದೆ.
ಮೊತ್ತದ ವಸೂಲಾತಿಗಾಗಿ ಬಾಕೀದಾರರ ಮಾಲ್ಕೀಯ ಬೆಳಗಾವಿ ಶಹರದ ಸಿಟಿಎಸ್ ನಂ.೪೮೫೯ಬಿ/೨೯ಎ ಆಸ್ತಿಯನ್ನು ಅಕ್ಟೋಬರ್ ೧೯ ರಂದು ಮುಂಜಾನೆ ೧೧ ಗಂಟೆಗೆ ಬೆಳಗಾವಿ ತಹಸೀಲ್ದಾರ್ ಇವರಿಂದ ಅಧಿಕಾರ ಪಡೆದ ಅಧಿಕಾರಿಯ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವುದರ ಮೂಲಕ ವಸೂಲಾತಿ ಕೈಗೊಳ್ಳಲಾಗುವುದು. ಆಸಕ್ತಿಯುಳ್ಳ ವ್ಯಕ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ತಹಸೀಲ್ದಾರ ಅವರ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಕಂದಾಯ ಇಲಾಖೆ : ಅ.೧೯ ರಂದು ಆಸ್ತಿ ಬಹಿರಂಗ ಹರಾಜು ಪ್ರಕ್ರಿಯೆ
More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023