ಬೆಳಗಾವಿ,ಅ.೧೦ : ಅಪ್ಜಲ್ ನಜರತಸಾಬ ಕಾಗಜಿ ಬೆಳಗಾವಿ ಹೊಸೂರು ತಂಬಿಟಗಾರ ಗಲ್ಲಿ ಇವರಿಂದ ೩ ಲಕ್ಷ ಬಾಂಡ್ ಮೊತ್ತವು ಬಾಕಿ ಇರುವುದರಿಂದ, ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ನ್ಯಾಯಾಲಯವು ಆದೇಶ ನೀಡಿದೆ.
ಮೊತ್ತದ ವಸೂಲಾತಿಗಾಗಿ ಬಾಕೀದಾರರ ಮಾಲ್ಕೀಯ ಬೆಳಗಾವಿ ಶಹರದ ಸಿಟಿಎಸ್ ನಂ.೧೬೫/ಬಿ೧ ಆಸ್ತಿಯನ್ನು ಅಕ್ಟೋಬರ್ ೧೩ ರಂದು ಮುಂಜಾನೆ ೧೧ ಗಂಟೆಗೆ ಬೆಳಗಾವಿ ತಹಸೀಲ್ದಾರ್ ಇವರಿಂದ ಅಧಿಕಾರ ಪಡೆದ ಅಧಿಕಾರಿಯ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವುದರ ಮೂಲಕ ವಸೂಲಾತಿ ಕೈಗೊಳ್ಳಲಾಗುವುದು. ಆಸಕ್ತಿಯುಳ್ಳ ವ್ಯಕ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ತಹಸೀಲ್ದಾರ ಅವರ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಕಂದಾಯ ಇಲಾಖೆ : ಬಹಿರಂಗ ಹರಾಜು ಪ್ರಕ್ರಿಯೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023