ಬೆಳಗಾವಿ, ಮಾ.೩೦ ಚನ್ನಮ್ಮನ ಕಿತ್ತೂರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸನ್ ೨೦೨೩, ೨೪ ಸಾಲಿಗೆ ಆಸ್ತಿ ತೆರಿಗೆ ಮೇಲೆ ಆಸ್ತಿ ಮಾಲೀಕರಿಗೆ, ವಸತಿ ಮತ್ತು ವಾಸೇತರ ಕಟ್ಟಡಗಳಿಗೆ ೩%, ವಾಣಿಜ್ಯ ಕಟ್ಟಡಗಳಿಗೆ ೩% , ಖಾಲಿ ನಿವೇಶಗಳಿಗೆ ೩% , ಕೈಗಾರಿಕೆಗಳಿಗೆ ೩ % ರಷ್ಟು ದರ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕರಣೆ ಮಾಡಿದ ತರದಲ್ಲಿ ೨೦೨೩-೨೪ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ಸಕಾಲದಲ್ಲಿ ಆಸ್ತಿ ತೆರಿಗೆ ನೀರಿನಕರ ಟೆಂಡರ್ ಲೈಸೆನ್ಸ್ ಭರಣ ಮಾಡಿ ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಲು ಕೋರಲಾಗಿದೆ.
ಸೂಚನೆಗಳು:
ಏಪ್ರಿಲ್. ೧, ೨೦೨೩ ರಿಂದ ಏಪ್ರಿಲ್. ೩೦,೨೦೨೩ ರ ವರೆಗೆ ೫% ರಿಯಾಯಿತಿ, ಮೇ.೧, ೨೦೨೩ ರಿಂದ ಜೂನ್. ೩೦,೨೦೨೩ ರವರಿಗೆ ದಂಡರಹಿತ ಪಾವತಿ, ಜುಲೈ. ೧ ,೨೦೨೩ ರಿಂದ ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳು ೨% ರಷ್ಟು ದಂಡ ವಿಧಿಸಲಾಗುವುದು ಎಂದು ಚ.ಕಿತ್ತೂರು ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿಗಳು ಹಾಗೂ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಣೆ
ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಣೆ
Suresh30/03/2023
posted on