ಯಲಬುರ್ಗಾ—ಶ್ರಾವಣಮಾಸದಲ್ಲಿ ಅನೇಕ ಹಬ್ಬಗಳು ಇದ್ದರೂ ಶ್ರೀ ಕ್ರಷ್ಣ ಜನ್ಮಾಷ್ಟಮಿ ತನ್ನದೆ ಆದ ಮಹತ್ವವನ್ನು ಪಡೆದಿದೆ. ಪ್ರತಿಯೊಬ್ಬರು ಮನೆಮನೆಯಲ್ಲಿ ತಮ್ಮ ಮಕ್ಕಳನ್ನು ರಾಧಾಕ್ರಷ್ಣನ ರೂಪದಲ್ಲಿ ಶ್ರಂಗರಿಸಿ ಸಂಭ್ರಮಿಸುತ್ತಾರೆ ಎಂದು ಪಟ್ಟಣ ಪಂಚಾಯತ ಸದಸ್ಯರಾದ ಡಾ! ನಂದಿತಾ ದಾನರಡ್ಡಿ ಹೇಳಿದರು
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕ್ರಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಳಿದು ಹೋಗುವ ಧೈವಿ ಸಂಸ್ಕ್ರತಿಯನ್ನ ಪುನರ ಜಾಗ್ರತಿ ಮಾಡಲು ಪ್ರಸ್ತುತ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ನ್ಯಾಯವಾದಿಗಳಾದ ಅಕ್ಕಮಹಾದೇವಿ ಪಾಟೀಲರವರು ಶಿಕ್ಷಕರ ಮಹತ್ವದ ಕುರಿತು ಮಾತನಾಡುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ತಮ್ಮದೆ ಆದ ಮೌಲ್ಯಗಳ ಮುಖಾಂತರ ಕಟ್ಟಲು ಶ್ರಮಿಸಿದ್ದಾರೆ ಎಂದರು.
ಬ್ರ.ಕು. ಉಮಾ ಅಕ್ಕನವರಿಗೆ ಈಶ್ವರಿ ಪರಿವಾರದವರು ಇದೇ ಸಂದರ್ಭದಲ್ಲಿ ಗುರು ವಂದನೆಯನ್ನು ಸಮರ್ಪಿಸಿದರು.
ಅನೇಕ ಮಕ್ಕಳು ರಾಧಾ ಕ್ರಷ್ಣನ ವೇಷಧಾರಿಗಳಾಗಿ ಎಲ್ಲರ ಗಮನ ಸೆಳೆದರು.
ಇನ್ನರವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಚೆನ್ನಮ್ಮ ಪಾಟೀಲˌ ಪ.ಪಂ.ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ ಮಲಕಸಮುದ್ರ ˌ ರಾಯಚೂರಿನ ಅನ್ನಪೂರ್ಣ ಹಿರೇಮಠ ˌ ಸಿದ್ದಯ್ಯ ಕೊಣ್ಣೂರುˌ ಮಹಾಗುಂಡಪ್ಪ ಕಟಗೇರಿˌ ಮುತ್ತಯ್ಯ ಮಲಕಸಮುದ್ರˌ ಶಿವಕುಮಾರ ನಿಡಗುಂದಿ ಇನ್ನೀತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶೀಲ್ಪಾ ಬಾಗಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.