ಬೆಳಗಾವಿ, ಸೆ.೦೧ : “ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ಸರಳವಾಗಿದೆ. ಸರಕಾರಿ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ತ್ವರಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಾಲಮಿತಿಯಲ್ಲಿ ಒದಗಿಸಬೇಕು” ಎಂದು ನಿವೃತ್ತ ಮಾಹಿತಿ ಆಯುಕ್ತರಾದ ಡಾ.ಶೇಖರ್ ಸಜ್ಜನ ಹೇಳಿದರು.ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ನಿಯಮಗಳು ಮತ್ತು ಅಧಿನಿಯಮಗಳ ಕುರಿತು ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಸೆ.೧) ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಕಾಯ್ದೆಯನ್ನು ಸರಿಯಾಗಿ ಅರ್ಥೆöÊಸಿಕೊಂಡು ಕಾರ್ಯನಿರಗವಹಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಮಾಹಿತಿ ಲಭ್ಯವಿಲ್ಲದಿದ್ದರೆ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ತಿಳಿಸಬೇಕು.
ಮಾಹಿತಿ ಹಕ್ಕು ಅಧಿನಿಯಮದ ಕುರಿತು ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಡ್ಡಾಯವಾಗಿ ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ.ದೇಶದಲ್ಲಿ ಪ್ರತಿವರ್ಷ ಅಂದಾಜು ೫೦ ಲಕ್ಷ ಹಾಗೂ ಕರ್ನಾಟಕ ರಾಜ್ಯದಲ್ಲಿ ಐದು ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಅದರಲ್ಲಿ ಶೇ.೩ ರಷ್ಟು ಮೇಲ್ಮನವಿ ಸಲ್ಲಿಕೆಯಾಗುತ್ತಿವೆ.
ಸರಕಾರಿ ಕಚೇರಿಗಳಲ್ಲಿ ಶೇ. ೪೦ ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದ ಮಾಹಿತಿ ಹಕ್ಕುಗಳ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಡಾ.ಸಜ್ಜನರ ಹೇಳಿದರು.ಭೌತಿಕವಾಗಿ ಅಥವಾ ಎಲೆಕ್ಟಾö್ರನಿಕ್ ರೂಪದಲ್ಲಿ ಲಭ್ಯವಿರುವ ಮಾಹಿತಿಯನ್ನು ಅದು ಇರುವಂತಹ ಮಾದರಿಯಲ್ಲಿ ಮಾತ್ರ ನೀಡಬಹುದಾಗಿದೆ. ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ನೀಡವಂತಿಲ್ಲ; ಯಾವುದೇ ರೀತಿಯ ಅಭಿಪ್ರಾಯ ಗಳನ್ನು ನೀಡುವಂತಿಲ್ಲ.ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಿರಸ್ಕರಿಸಬಹುದಾಗಿದೆ. ಅರ್ಜಿಗಳನ್ನು ತಿರಸ್ಕರಿಸಿದಾಗ ಐಪಿಓ ಹಿಂದಿರುಗಿಸುವಂತಿಲ್ಲ.
ನಿಯಮಾವಳಿ ಅನುಸಾರ ಎ.ಬಿ.ಸಿ.ಡಿ.ಇ. ಕೆಟಗರಿ ಪ್ರಕಾರ ಸರಕಾರಿ ದಾಖಲೆಗಳನ್ನು ಸಂರಕ್ಷಿಸಿಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಅರ್ಜಿದಾರರಿಗೆ ನೀಡುವ ಅಗತ್ಯವಿರುವುದಿಲ್ಲ.
ಅರ್ಜಿದಾರರು ಯಾವುದೇ ಅಧಿಕಾರಿಗಳಿಗೆ ನಿರ್ದೇಶನ, ಸಲಹೆ, ಮಾರ್ಗದರ್ಶನ ನೀಡಲು ಅಥವಾ ಪ್ರಶ್ನೆ ಕೇಳಲು ಅವಕಾಶವಿಲ್ಲ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಬೇಕಾಗಿಲ್ಲ. ವೆಬ್ ಸೈಟ್ ನಲ್ಲಿರುವುದು ಅಧಿಕೃತ ಮಾಹಿತಿಯೇ ಆಗಿರುವುದರಿಂದ ದೃಢೀಕರಿಸುವ ಅವಶ್ಯಕತೆ ಇರುವುದಿಲ್ಲ.
ಒಂದು ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ೧೫೦ ಶಬ್ದಗಳಲ್ಲಿ ಮಾತ್ರ ಕೇಳಬಹುದು. ಕಲಂ ೨ಜೆ ಪ್ರಕಾರ ಕಚೇರಿಯ ದಾಖಲೆಗಳ ಪರಿವೀಕ್ಷಣೆಗೆ ಅವಕಾಶವಿದ್ದು, ಪ್ರತಿ ಅರ್ಧ ಗಂಟೆಗೆ ೧೦ ರೂಪಾಯಿಗಳಂತೆ ಶುಲ್ಕ ಆಕರಿಸಬಹುದು.
ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ತಮ್ಮ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕು. ಪತಿ ಪತ್ನಿಯ ಅಥವಾ ಪತ್ನಿಯು ಪತಿಯ ವೇತನ ಅಥವಾ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬಹುದು. ಆದರೆ ವೇತನಪತ್ರವು ವೈಯಕ್ತಿಕ ಮಾಹಿತಿಯನ್ನು ಹೊಂದಿರುವುದರಿಂದ ಅದನ್ನು ನೀಡುವಂತಿಲ್ಲ. ಕಲಂ ೪(೧) ಎ ಪ್ರಕಾರ ಪ್ರತಿಯೊಂದು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಮಾಹಿತಿಯನ್ನು ಪ್ರದರ್ಶಿಸಬೇಕು. ಮಾಹಿತಿ ಹಕ್ಕು ಅರ್ಜಿಗಳ ಸ್ವೀಕೃತಿ ಹಾಗೂ ಮಾಹಿತಿಯನ್ನು ಒದಗಿಸಿರುವ ದಿನಾಂಕ ಮತ್ತಿತರ ಮಾಹಿತಿಯನ್ನು ಒಳಗೊಂಡಿರುವ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
ಕಲಂ ೬(೩) ರ ಅಡಿಯಲ್ಲಿ ’ಅರ್ಜಿಯನ್ನೇ’ ಐದು ದಿನಗಳ ಒಳಗಾಗಿ ಸಂಬಂಧಿಸಿದವರಿಗೆ ವರ್ಗಾಯಿಸಬೇಕು. ಒಂದು ವೇಳೆ ಮಾಹಿತಿ ಯಾವ ಇಲಾಖೆಯಲ್ಲಿದೆ ಅಥವಾ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾರು ಎಂಬುದು ಗೊತ್ತಿಲ್ಲದಿದ್ದರೆ ಅರ್ಜಿಯನ್ನು ಅರ್ಜಿದಾರನಿಗೆ ಹಿಂದಿರುಗಿಸಬಹುದು.ಮಾಹಿತಿಯನ್ನು ಕೇಳಿರುವ ಅರ್ಜಿದಾರನು ಅದಕ್ಕೆ ತಗಲುವ ಶುಲ್ಕವನ್ನು ೯೦ ದಿನಗಳ ಒಳಗಾಗಿ ಭರಿಸಬೇಕು. ಅರ್ಜಿದಾರ ಹಣ ತುಂಬಿದ ೨೧ ದಿನಗಳ ಒಳಗಾಗಿ ನಿಗದಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಮಾಹಿತಿಯನ್ನು ನೀಡುವುದು ವಿಳಂಬವಾದರೆ ದಂಡ ತೆರಬೇಕಾಗುತ್ತದೆ ಎಂದು ನಿವೃತ್ತ ಮಾಹಿತಿ ಆಯುಕ್ತರಾದ ಡಾ.ಡಾ.ಶೇಖರ ಸಜ್ಜನವರ ಹೇಳಿದರು.ನೌಕರರ ಸೇವಾವಹಿ, ವೇತನಪತ್ರ, ಉಳಿತಾಯ, ದಂಡನೆ ಮತ್ತಿತರ ಮಾಹಿತಿಯನ್ನು ನೀಡುವಂತಿಲ್ಲ. ನೌಕರರ ವೈಯಕ್ತಿಕ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನೀಡಲು ಅವಕಾಶವಿರುವುದಿಲ್ಲ.
ಅದೇ ರೀತಿ ಯಾವುದೇ ಮೂರನೇ ವ್ಯಕ್ತಿಯ ಮಾಹಿತಿಯನ್ನು ನೀಡಬಹುದು; ಆದರೆ ಸಂಬಂಧಿಸಿದ ಮೂರನೇ ವ್ಯಕ್ತಿಯ ಅಭಿಪ್ರಾಯವನ್ನು ಪಡೆದುಕೊಂಡು ಅವರ ಸಮ್ಮತಿಯ ಮೇರೆಗೆ ಮಾತ್ರ ನೀಡಬಹುದು. ಮಾಹಿತಿಯನ್ನು ನೀಡದಿರುವುದನ್ನು ಪ್ರಶ್ನಿಸಿ ನ್ಯಾಯಾಲಯ, ಗ್ರಾಹಕರ ವೇದಿಕೆ ಮತ್ತಿತರ ಕಡೆ ಹೋಗಲು ಕಾಯ್ದೆಯಡಿ ಅವಕಾಶವಿರುವುದಿಲ್ಲ ಎಂದು ಡಾ.ಸಜ್ಜನರ ವಿವರಿಸಿದರು.
ಇದಾದ ಬಳಿಕ ಮಾಹಿತಿ ಹಕ್ಕು ಕಾಯ್ದೆ ಕುರಿತು ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರಲ್ಲದೇ ಸಂದೇಹಗಳನ್ನು ಅವರು ಪರಿಹರಿಸಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Gadi Kannadiga > State > ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರ ಸಕಾಲದಲ್ಲಿ ಮಾಹಿತಿ ಒದಗಿಸಿ: ಡಾ.ಶೇಖರ್ ಸಜ್ಜನರ
ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರ ಸಕಾಲದಲ್ಲಿ ಮಾಹಿತಿ ಒದಗಿಸಿ: ಡಾ.ಶೇಖರ್ ಸಜ್ಜನರ
Suresh01/09/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023