ಬೆಳಗಾವಿ: ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ ಬಾಳೇಕುಂದ್ರಿ ಕೆಎಚ್ ಗ್ರಾಮದ ಪಾಟೀಲ ಗಲ್ಲಿ, ಶಿವಾಜಿ ಗಲ್ಲಿ ಹಾಗೂ ಲಕ್ಷಿ÷್ಮÃ ಗಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ಕೈಗೊಳ್ಳುವ ಮೂಲಕ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, “ಕ್ಷೇತ್ರದ ಬಹುತೇಕ ಒಳರಸ್ತೆಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕೇವಲ ಸಂಚಾರ, ಸಾಗಾಟಕ್ಕಷ್ಟೇ ಅಲ್ಲದೆ, ತುರ್ತು ಸ್ಥಿತಿಯಲ್ಲಿ ನೆರವಿನ ವಾಹನಗಳು ಸಕಾಲಕ್ಕೆ ತಲುಪುವುದಕ್ಕೂ ಈ ರಸ್ತೆಗಳು ಸಹಾಯಕಾರಿಯಾಗುತ್ತಿದ್ದು ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಾರ್ವಜನಿಕರೂ ಜವಾಬ್ದಾರಿ ವಹಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಜೈನುಲ್ ಕುಡಚಿ, ಪ್ರವೀಣ ಮುರಾರಿ, ಸೈಬಾಜ್ ಶೇಖ್, ಚಂದ್ರಕಾಂತ ಧರೆಣ್ಣವರ, ಮಾರುತಿ ಸುಳಗೇಕರ್, ವಿಠ್ಠಲ ಕುರುಬರ, ರಂಜಿತ್ ಪಾಟೀಲ ಪವನ ಜಾಧವ್, ರವಿ ಬಾಳುನವರ, ನಿಲೇಶ ಚಂದಗಡ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ಬಾಳೇಕುಂದ್ರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ