This is the title of the web page
This is the title of the web page

Please assign a menu to the primary menu location under menu

Local News

ಜನರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸುವಲ್ಲಿ ಸಿಎಸಸಿ ವಿಎಲ್ಇಗಳ ಪಾತ್ರ ಮಹತ್ತರ: ಮಲ್ಲಿಕಾರ್ಜುನ ಕರೆರುದ್ರನ್ನವರ


ಬೆಳಗಾವಿ; ನಗರದ ರೇನಾಲ್ಟ್ ಶೋರುಮನಲ್ಲಿ ಮಿಲನ್ ಉತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಸಿಎಸಸಿ ಸಂಯೋಜನಾಧಿಕಾರಿ ಮಲ್ಲಿಕಾರ್ಜುನ ಕರೆರುದ್ರನ್ನವರ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಇಡೀ ದೇಶದಲ್ಲಿ ಸಿಎಸಸಿ ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ. ಒಂದೇ ಸೂರಿನಡಿಯಲ್ಲಿ ಜನರಿಗೆ ಎಲ್ಲ ಸೌಲಭ್ಯಗಳು ಒಂದೇ ಸ್ಥಳದಲ್ಲಿ ಸಿಗುತಿವೆ. ಸರ್ಕಾರದ ಯಾವುದೇ ಯೋಜನೆ ಬಂದರು ನೇರವಾಗಿ ಜನರ ಮನೆ ಭಾಗಿಲಿಗೆ ತಲುಪಿಸುವ ಮೂಲಕ ಅಚ್ಚುಕಟ್ಟಾಗಿ ಸಿಎಸಸಿ ಕೆಲಸ ಮಾಡುತ್ತಿದೆ. ಇಂದು ರೇನಾಲ್ಟ್ ಸಂಸ್ಥೆಯ ಸಾವಿರ ಕಾರಗಳು ಸೇಲ್ ಆಗಲು ವಿಎಲ್ಇಗಳ ಪರಿಶ್ರಮವೇ ಮುಖ್ಯ ಕಾರಣ ಎಂದರು. ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಹಾಗೂ ಎರಡನೇ ರಾಜ್ಯಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ದೇಶದ್ಯಂತ ಮೊಬೈಲ್ ನೆಟ್ವರ್ಕ್ ಇರದ ಊರುಗಳಲ್ಲಿ ಸಿಎಸಸಿ ಕೇಂದ್ರಗಳು ಕಾರ್ಯನಿರ್ವಹಿಸುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ ಅವರು ವಿಎಲ್ಇಗಳ ಜೊತೆ ಸೇವೆಗಳ ಬಗ್ಗೆ ಸಂವಾದ ನಡೆಸಿದರು. ಮುಂಬರುವ ದಿನಗಳಲ್ಲಿ ರೇನಾಲ್ಟ್ ಹಾಗೂ ಸಿಎಸಸಿ ವತಿಯಿಂದ ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಕಾರ ಬುಕ್ ಮಾಡುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿ ಮಾಡೋಣ ಎಂದು ಹೇಳಿದರು. ತಾನಾಜಿ ಕೋಳಿ ಕಾರ್ಯಕ್ರಮ ನಿರೂಪಿಸಿದರು, ರೇನಾಲ್ಟ್ ಸೇಲ್ಸ್ ಮ್ಯಾನೇಜರ್ ಸಾಗರ ಉಳ್ಳಿಗೇರಿ, ಸಿಎಸಸಿ ವಿಎಲ್ಇಗಳು, ರೇನಾಲ್ಟ್ ಸಂಸ್ಥೆಯ ಸಿಬ್ಬಂದಿ ವರ್ಗದವರು, ಎಚ್.ಡಿ.ಎಫ್.ಸಿ, ಎಲ್.ಐ.ಸಿ, ಪ್ರತಿನಿಧಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply