ಹುಕ್ಕೇರಿ : ಗ್ರಾಮಗಳ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ಜನಸೇವೆಗೆ ದೊರೆತ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಚುನಾವಣೆ ರಾಜಕೀಯ ಮುಗಿದಿದ್ದು ಈಗ ಏನಿದ್ದರೂ ಗ್ರಾಮಗಳ ಅಭಿವೃದ್ಧಿಯತ್ತ ನಿಮ್ಮ ಚಿತ್ತ ಹರಿಸಬೇಕು ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕಿವಿಮಾತು ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಸಾರಾಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರ ಸಮಸ್ಯೆ ಮತ್ತು ಅಹವಾಲುಗಳಿಗೆ ತ್ವರಿತ ಪರಿಹಾರ ಕಲ್ಪಿಸಿ ಗ್ರಾಮೀಣ ಶಕ್ತಿ ಕೇಂದ್ರಕ್ಕೆ ಬಲ ತುಂಬಬೇಕು ಎಂದು ಕರೆ ನೀಡಿದರು.
ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪಂಚಾಯತಿಗಳಿಗೆ ಸರ್ಕಾರ ಅಧಿಕಾರ ನೀಡಿದ್ದು ಆ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಹೆಚ್ಚುವರಿ ಅನುದಾನದ ಬೇಡಿಕೆಯಿದ್ದರೆ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಹಾಗೂ ತಮ್ಮನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.
ಹೊಸದಾಗಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಪಡೆದವರ ಜವಾಬ್ದಾರಿ ಹೆಚ್ಚಿಸಿದ್ದು ಗ್ರಾಮಗಳ ಹಿತ ಕಾಪಾಡಬೇಕು. ಹಿರಿಯರ ಮಾರ್ಗದರ್ಶನ, ಸದಸ್ಯರ ಸಲಹೆ-ಸೂಚನೆ, ಸಿಬ್ಬಂದಿ ವರ್ಗದ ಸಹಕಾರದಿಂದ ಗ್ರಾಪಂನ್ನು ಮಾದರಿಯನ್ನಾಗಿ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸಲಹೆ ಮಾಡಿದರು.
ಪ್ರಜಾಪ್ರಭುತ್ವದ ಯಶಸ್ವಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಬಲ ತುಂಬುವಲ್ಲಿ ಗ್ರಾಪಂಗಳು ಮಹತ್ತರ ಕೊಡುಗೆ ನೀಡುತ್ತಿವೆ. ಪಂಚಾಯತ್‌ರಾಜ್ ವ್ಯವಸ್ಥೆ ಗಟ್ಟಿಯಾಗಿ ನಿಲ್ಲುವಲ್ಲಿ ಗ್ರಾಪಂಗಳು ಅತ್ಯಮೂಲ ಕೊಡುಗೆ ನೀಡುವ ಮೂಲಕ ಸುಭದ್ರ ತಳಪಾಯ ಒದಗಿಸಿವೆ ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ಸಯ್ಯದ ಅಮ್ಮಣಗಿ, ಪಿಡಿಒ ಸಂತೋಷ ಕಬ್ಬಗೋಳ, ಮುಖಂಡರಾದ ಸತ್ಯಪ್ಪಾ ಹಾಲಟ್ಟಿ, ಯಲ್ಲಪ್ಪ ಡಪರಿ, ಮಂಜು ಪಡದಾರ, ದುಂಡಪ್ಪಾ ಹುಂಜಿ, ಬಸವರಾಜ ಹಾಲಟ್ಟಿ, ರಾಮಣ್ಣಾ ಗೋಟೂರೆ, ಉದಯ ಬ್ಯಾಳಿ, ದಾದಾ ದಪ್ಪಾದೂಳಿ, ಅಲಿಸಾಬ ಅಮ್ಮಣಗಿ, ಸಂಜು ಹತ್ತರವಾಟ, ಸತಿಗೌಡ ಪಾಟೀಲ, ಬಸವರಾಜ ಮದಕರಿ, ವಿಲಾಸ ಅಮ್ಮಣಗಿ, ಮಲಗೌಡ ಪಾಟೀಲ, ಜಯಪಾಲ ಹುಲ್ಯಾಗೋಳ, ಮಹಾಂತೇಶ ಬೆಲ್ಲದ, ಗುಲಾಬ ಅಮ್ಮಣಗಿ, ಶ್ರೀಶೈಲ ಶಿರಗಾಂವಿ, ರವಿ ಕೊಚ್ಚರಗಿ, ಬಸವರಾಜ ಕೊಂಕಣಿ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಮಾದರಿ ಗ್ರಾಮ ರೂಪಿಸಲು ಜನಪ್ರತಿನಿಧಿಗಳ ಪಾತ್ರ ಪ್ರಮುಖ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ರಮೇಶ ಕತ್ತಿ ಕಿವಿಮಾತು
ಮಾದರಿ ಗ್ರಾಮ ರೂಪಿಸಲು ಜನಪ್ರತಿನಿಧಿಗಳ ಪಾತ್ರ ಪ್ರಮುಖ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ರಮೇಶ ಕತ್ತಿ ಕಿವಿಮಾತು
Suresh22/07/2023
posted on
