ಖಾನಾಪುರ: ತಾಲೂಕಿನ ಬೀಡಿ ಹೋಬಳಿಯ ಮಾಸ್ಕೆನಟ್ಟಿ ಗ್ರಾಮದ ಸುತ್ತಮುತ್ತ ಸೋಮವಾರ ಒಂದು ಘಂಟೆಗೂ ಹೆಚ್ಚು ಸುರಿದ ಗುಡುಗು ಸಹಿತ ಭಾರಿ ಮಳೆ ಬಿರುಗಾಳಿಗೆ ಮಾಸ್ಕೆನಟ್ಟಿ ಗ್ರಾಮದ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ತಾಲೂಕಿನ ಭೂರಣಕಿ ಮಾಸ್ಕೆನಟ್ಟಿ ಗ್ರಾಮಗಳಲ್ಲಿ ಗಾಳಿಯ ರಭಸಕ್ಕೆ ಸುಮಾರು ಒಂಭತ್ತರಿಂದ ಹತ್ತು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಕೂಡಾ ಮಳೆಗೆ ಹಾಳಾಗಿವೆ. ಕೆಲವರು ರಾತ್ರಿ ಕಳೆಯಲು ಇತರರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು.ಇನ್ನೂ ಪ್ರಕೃತಿ ವಿಕೋಪದಡಿ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಆಸ್ರಿ ಪಾಸ್ತಿ ಹಾನಿಯಾದ ನಾಗರಿಕರಿಗೆ ಪರಿಹಾರ ನೀಡಬೇಕು ಎಂದು ಸಮಾಜ ಸೇವಕ ವಿಜಯ ಕೋಲಕಾರ ತಹಸೀಲ್ದಾರರನ್ನು ಒತ್ತಾಯಿಸಿದ್ದಾರೆ.