This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ನೂರು ಕೋಟಿ ರೂ. ಅನುದಾನ ಮತ್ತು ಬೆಳಗಾವಿ ಗಡಿ ಜಿಲ್ಲೆಯ ಕನ್ನಡ ಅಭಿವೃದ್ಧಿ ಚಟುವಟಿಕೆಗಳಿಗೆ 100 ಕೋಟಿ ರೂ. ಅನುದಾನ ನೀಡಲಿ – ಡಾ. ಸೋಮಶೇಖರ್


 

ಬೆಳಗಾವಿ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನ್ನಡ ಅಭಿವೃದ್ಧಿ
ಚಟುವಟಿಕೆಗಳಿಗಾಗಿ 2 ನೂರು ಕೋಟಿ ರೂ ಗಳನ್ನು ಮತ್ತು ಗಡಿ ಜಿಲ್ಲೆಯಾದ ಬೆಳಗಾವಿ
ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಪ್ರತ್ಯೇಕವಾಗಿ ಸರಕಾರ 1ನೂರು
ಕೋಟಿ₹ಅನುದಾನ ನೀಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ
ಅಧ್ಯಕ್ಷ ಡಾ ಸೋಮಶೇಖರ್ ಹೇಳಿದರು.
ಅವರೆಂದೂ ಬೆಳಗಾವಿಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹುಕ್ಕೇರಿ
ಹಿರೇಮಠದ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಟಾನ ದಿಂದ ಭಾರತ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಡಿ ಕನ್ನಡ
ಸಾಂಸ್ಕೃತಿಕ ಉತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾ ಡುತ್ತಿದ್ದರು .
ಸರ್ಕಾರ ಈ ವರ್ಷ ನೀಡಿರುವ ಕೇವಲ 15 ಕೋಟಿ₹ಅನುದಾನ ಯಾವುದಕ್ಕೂ ಸಾಲದು
,6ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಹತ್ತೊಂಬತ್ತು ಜಿಲ್ಲೆಗಳ 63
ತಾಲ್ಲೂಕುಗಳಲ್ಲಿ ಗಡಿ ಭಾಗದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಬಲಾಢ್ಯ
ಗೊಳ್ಳಬೇಕಾಗಿದೆ ಕನ್ನಡ ಶಾಲಾ ಕಟ್ಟಡಗಳಿಗೆ ಆದ್ಯತೆ ಮತ್ತು ಮೂಲಭೂತ ಸೌಕರ್ಯಗಳನ್ನು
ನೀಡಬೇಕಿದೆ ಹೀಗಾಗಿ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ
ಅಗತ್ಯವಿದೆ ಎಂದು ಹೇಳಿದ ಅವರು ತಮಗೆ ಲಭ್ಯವಿರುವ ಸೀಮಿತ ಅನುದಾನದಲ್ಲಿ ರಾಜ್ಯದ
4ನೂರು ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಗಡಿ ಅಭಿವೃದ್ದಿ
ಪ್ರಾಧಿಕಾರದಿಂದ ಅನುದಾನವನ್ನು ನೀಡಲಾಗಿದೆ ಎಂದರು .
ಗಡಿ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿ ಚಟುವಟಿಕೆಗಳಿಗಾಗಿ ವಿಶೇಷವಾಗಿ
1ನೂರು ಕೋಟಿ ರೂಪಾಯಿಗಳನ್ನು ಸರ್ಕಾರ ಅನುದಾನವಾಗಿ ನೀಡಬೇಕು ಇದಕ್ಕಾಗಿ ಸ್ಥಳೀಯ
ಶಾಸಕರಾದ ಬೆನಕೆ ಅವರು ವಿಶೇಷ ಪ್ರಯತ್ನ ಮಾಡಬೇಕು ಎಂದು ಅವರು ವಿನಂತಿಸಿದರು .
ಕನ್ನಡಿಗರು ಮತ್ತು ಮರಾಠಿಗರು ಅಣ್ಣತಮ್ಮಂದಿರಿದ್ದಂತೆ ಈ ಸಂದರ್ಭದಲ್ಲಿ ಕನ್ನಡ
ವಿರೋಧಿ ಚಟುವಟಿಕೆಗಳು ನಡೆಯಬಾರದು ಈ ಹಿನ್ನೆಲೆಯಲ್ಲಿ ಎಲ್ಲರೂ ಕಾಳಜಿ ವಹಿಸಬೇಕು
ಎಂದು ಅವರು ಹೇಳಿದರು ಹುಕ್ಕೇರಿ ಹಿರೇಮಠದ ಶ್ರೀಗಳ ಸಮಾಜಮುಖಿ ಕಾರ್ಯಕ್ರಮಗಳು
ಕನ್ನಡಪರ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ
ಶ್ರೀಗಳು ಧಾರ್ಮಿಕ ಪೋಷಕರಿದ್ದಂತೆ ಎಂದು ಬಣ್ಣಿಸಿದರು .
ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೆಳಗಾವಿ ಶಾಸಕ ಅನಿಲ್ ಬೆನಕೆ ಅವರು ಬೆಳಗಾವಿಯಲ್ಲಿ
ಕನ್ನಡ ಪರ ಅಭಿವೃದ್ಧಿ ಚಟುವಟಿಕೆಗಳಿಗೆ ಸರ್ಕಾರದಿಂದ 1ನೂರು ಕೋಟಿ₹ಅನುದಾನ
ತರುವುದಕ್ಕಾಗಿ ತಾವು ವಿಶೇಷ ಪ್ರಯತ್ನ ಮಾಡುವುದಾಗಿ ಮತ್ತು ಹಿಂದೆ
ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು . ತಾವು 2ಕನ್ನಡ ಶಾಲೆಗಳನ್ನು
ದತ್ತು ಪಡೆದಿರುವುದಾಗಿ ಹೇಳಿದರಲ್ಲದೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದೇ ಅತ್ಯಂತ
ಶ್ರೇಷ್ಠ ಸಂಸ್ಕೃತಿಯ ಉಳಿಕೆಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತವೆ ಎಂದ ಅವರು
ಹುಕ್ಕೇರಿ ಶ್ರೀಗಳು ಕೊರೋನಾ ಕಾಲದಲ್ಲಿ ಮಾಡಿದ ಸಮಾಜ ಮುಖಿ ಕಾರ್ಯವನ್ನು ಸ್ಮರಿಸಿದರು
.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮಾತನಾಡಿ
ಗಡಿಭಾಗದಲ್ಲಿರುವ ಬಹಳಷ್ಟು ಕನ್ನಡ ಶಾಲೆಗಳ ಸ್ಥಿತಿಗತಿ ಅತ್ಯಂತ ಕೆಟ್ಟದಾಗಿದೆ
ಸ್ವಂತ ಕಟ್ಟಡ ಇಲ್ಲದೆ ಕನ್ನಡ ಶಿಕ್ಷಕರು ಇಲ್ಲದೆ ಕನ್ನಡ ವಿದ್ಯಾರ್ಥಿಗಳು
ಅನಿವಾರ್ಯವಾಗಿ ಮರಾಠಿ ಕಲಿಯುವಂತಾಗಿದೆ ಎಂದು ಹೇಳಿದರು .ತಾವು ಗಡಿ ಭಾಗಕ್ಕೆ ಭೇಟಿ
ನೀಡಿದಾಗ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವುದೇ ತಪ್ಪೆ ಎಂದು ಪೋಷಕರು
ಪ್ರಶ್ನಿಸಿದರೆಂದು ಹೇಳಿದ ಅವರು ಸರ್ಕಾರದೊಂದಿಗೆ ಮಹಿಳಾ ಸಂಘಟನೆಗಳವರು ಸಹ ತಮಗೆ ಸಮಯ
ಸಿಕ್ಕಾಗಲೆಲ್ಲ ಹೋಗಿ ಕನ್ನಡ ಶಾಲೆಗಳಿಗೆ ಅಂಗನವಾಡಿಗಳಿಗೆ ಕನ್ನಡ ಕಲಿಸುವ ಕೆಲಸ
ಮಾಡಬೇಕು ಎಂದರು .
ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರೆಲ್ಲ ಆತ್ಮೀಯರಾಗಿದ್ದೇವೆ ಎಂದು ಹೇಳಿದ ಅವರು
ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕಿನಲ್ಲಿ ಅಲ್ಲಿನ
ಮರಾಠಿಗರು ತನು ಮನ ಧನದಿಂದ ಸಹಾಯ ಮಾಡಿದ್ದನ್ನು ಅವರು ಸ್ಮರಿಸಿಕೊಂಡರು .
ಮಾಹಿತಿ ಹಕ್ಕು ಆಯುಕ್ತರಾದ ಶ್ರೀಮತಿ ಬಿ ಬಿ ಗೀತಾ ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಎಂ
ಜಿ ಹಿರೇಮಠ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ
ಸಾಂದರ್ಭಿಕವಾಗಿ ಮಾತನಾಡಿದರು .
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ
ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಕನ್ನಡ ಸಂಘಟನೆಗಳ ಕ್ರಿಯಾ
ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ
ಪ್ರಕಾಶ್ ಮತ್ತಿಹಳ್ಳಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಇಂದು ನಿಧನರಾದ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್
ಮತ್ತು ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ಅವರುಗಳಿಗೆ ಸಭೆಯೂ 1ನಿಮಿಷ ಮೌನ
ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿತು .


Gadi Kannadiga

Leave a Reply