This is the title of the web page
This is the title of the web page

Please assign a menu to the primary menu location under menu

Local News

ಉಪನ್ಯಾಸಕಿರೊಂದಿಗೆ ಅಸಭ್ಯ ವರ್ತನೆ: ಉಪನ್ಯಾಸಕನಿಗೆ ಧರ್ಮದೇಟು


ಬೆಳಗಾವಿ: ನಗರದ ಸರ್ದಾರ ಪಿಯು ಕಾಲೇಜಿನಲ್ಲಿ ಮಹಿಳಾ ಸಹೋದ್ಯೋಗಿಗಳ ಜೊತೆ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕನಿಗೆ ಕಾಲೇಜಿನ ಆವರಣದಲ್ಲಿಯೇ ಮಹಿಳಾ ಸಿಬ್ಬಂದಿ ಧರ್ಮದೇಟು ನೀಡಿದ್ದಾರೆ

ಪಿಯು ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕ ಅಮೀತ ಬಸವಮೂರ್ತಿಯವರು ನಿತ್ಯ ಕಾಲೇಜಿಗೆ ಮದ್ಯ ಸೇವನೆ ಮಾಡಿಕೊಂಡು ಬಂದು ಉಪನ್ಯಾಸಕಿರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.

ಮಹಿಳಾ ಸಿಬ್ಬಂದಿಯ ಕೊಠಡಿಗೆ ಬಂದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಬಗ್ಗೆ ಕಾಲೇಜಿನ ಮುಖ್ಯಸ್ಥರಿಗೆ ಮೇಲಿಂದ ಮೇಲೆ ದೂರು ನೀಡಿದರು ಪ್ರಯೋಜನವಾಗಿಲ್ಲವಂತೆ ಹೀಗಾಗಿ. ತಾವೇ ಉಪನ್ಯಾಸಕನಿಗೆ ಬೆಂಡತಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ಮಹಿಳಾ ಉಪನ್ಯಾಸಕಿಯರು ದೂರು ನೀಡಿದ್ದಾರೆ.


Gadi Kannadiga

Leave a Reply