This is the title of the web page
This is the title of the web page

Please assign a menu to the primary menu location under menu

Local News

ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ


ಕೊಪ್ಪಳ ಜನವರಿ ೦೫ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜನಜಾಗೃತಿ ಕಲಾ ರಂಗ ಸಂಸ್ಥೆ(ರಿ) ಕುಷ್ಟಗಿ ಕಲಾತಂಡದ ಮೂಲಕ ಜಿಲ್ಲೆಯ ಕುಕನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಕುಕನೂರು ತಾಲ್ಲೂಕು ಪಿ.ಆರ್.ಡಿ ಸಹಾಯಕ ನಿರ್ದೇಶಕರಾದ ವೆಂಕಟೇಶ್ ವಂದಾಲ ಅವರು ತಮಟೆ ಬಾರಿಸುವ ಮೂಲಕ ಕುಕನೂರು ತಾ.ಪಂ ಕಚೇರಿ ಆವರಣದಲ್ಲಿ ಜನವರಿ ೦೫ ರಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರ ಮತ್ತು ಜನರ ನಡುವಿನ ಸಂಪರ್ಕದ ಕೊಂಡಿಯಾಗಿ ಪ್ರತಿಯೊಬ್ಬರಿಗೂ ಯೋಜನೆಗಳ ಮನವರಿಕೆ ಮಾಡಿಕೊಡುವ ಕಲಾತಂಡದವರ ಕಾರ್ಯ ನಿಜಕ್ಕೂ ಶ್ಲಾö್ಯಘನೀಯವಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಗ್ರಾ.ಪಂ.ಗಳು ಅಗತ್ಯ ಸಹಕಾರ ನೀಡಬೇಕು. ಗ್ರಾಮದ ಸಾರ್ವಜನಿಕರು ಸಹ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಜನಜಾಗೃತಿ ಕಲಾ ರಂಗ ಸಂಸ್ಥೆ(ರಿ) ಕುಷ್ಟಗಿ ಕಲಾತಂಡದ ಮುಖ್ಯಸ್ಥರಾದ ಶರಣಪ್ಪ ವಡಿಗೇರಿ, ಗಿರಿಧರ್ ಜೋಶಿ, ಲಕ್ಷ್ಮಣ್ ಚರಳ್ಳಿ, ಚನ್ನಬಸಪ್ಪ ಸಣ್ಣ ಕರದ್, ಪಕೀರಪ್ಪ ಮೂಲಿಮನಿ ಸೇರಿದಂತೆ ತಾಲೂಕ ಪಂಚಾಯತ್ ಸಿಬ್ಬಂದಿ ವರ್ಗ, ಕಲಾತಂಡದ ಸದಸ್ಯರು ಭಾಗವಹಿಸಿದ್ದರು.
*ಜ. ೧೪ ರವರೆಗೆ ಕಾರ್ಯಕ್ರಮ:* ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ೨೦೨೨-೨೩ನೇ ಸಾಲಿನಲ್ಲಿ ಜನಜಾಗೃತಿ ಕಲಾ ರಂಗ ಸಂಸ್ಥೆ(ರಿ) ಕುಷ್ಟಗಿ ಕಲಾತಂಡದ ಮೂಲಕ ಜ.೫ ರಿಂದ ಜ.೧೪ ರವರೆಗೆ ಕುಕನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.


Gadi Kannadiga

Leave a Reply