This is the title of the web page
This is the title of the web page

Please assign a menu to the primary menu location under menu

State

ವಿಶ್ವ ರಂಗಭೂಮಿ ದಿನಾಚರಣೆ – 2022ರ ಅಂಗವಾಗಿ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ


ಕಂಪ್ಲಿ :ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ 28 ಮಾರ್ಚ್ 2022 ರಂದು ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ಮಾವಿನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ – 2022ರ ಅಂಗವಾಗಿ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭವನ್ನು ಪ್ರೋ.ಎನ್ ಶಾಂತನಾಯ್ಕ್ ನೇರವೇರಿಸಿ ಇಂದಿನ ಕಾಲದಲ್ಲಿ ಮಕ್ಕಳು ಆಧುನಿಕ ಯುಗದಲ್ಲಿ ನಡೆಯುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ ಏನೆಂಬುದು ತಿಳಿಯದೆ ಹಿಂದಿನ ಕಾಲದಲ್ಲಿ ಬೀಸುವ ಕಲ್ಲಿನ ಪದ,ಸೋಬಾನೆ ಪದ,ನಾಟಿ ಪದ,ಜನಪದರು ಬಹಳಷ್ಟು ಜನಪದ ಸಾಹಿತ್ಯ ಮತ್ತು ಗೀತೆಗಳನ್ನು ಹಾಡುವುದರಲ್ಲಿ ಮತ್ತು ಕಾಯಕ ಮಾಡುವುದರಲ್ಲಿ ತೋಡುಗುತ್ತಿದ್ದಾರು.ಆದರೆ ಇಂದಿನ ಕಾಲದಲ್ಲಿ ಜಂಗಮವಾಣಿಗೆ ಜೋತು ಬಿದ್ದು ಕಲೆ, ಸಾಹಿತ್ಯ, ಹಾಡು,ಕುಣಿತ ಎಲ್ಲವೂ ಮೂಲೆ ಗುಂಪಾಗಿ ಸೇರಿ ನಶಿಸಿ ಹೋಗಿದ್ದವೆ ಎಂದು ಪ್ರಸ್ತಾಪಿಸಿದರು.

ನಮ್ಮ ಭಾರತ ದೇಶ ಕಲೆ ಮತ್ತು ಸಾಹಿತ್ಯ ಸಂಸ್ಕೃತಿ ದೇಶ ಮಾವಿನಹಳ್ಳಿ ಬಯಲಾಟದ ತವರೂರು ಮೂರುರಿಂದ ಐದು ನಿಮಿಷದವರೆಗೆ ಎಂ ಎ , ಪಿಹೆಚ್ ಡಿ ಪಡೆದವರು ಹೇಳದ ದೊಡ್ಡಾಟ ಬಯಲಾಟದ ಮಾತುಗಳನ್ನು ದೀರ್ಘವಾಗಿ ಮತ್ತು ಸುದೀರ್ಘವಾಗಿ ಹೇಳುವುದು ನೋಡಿದರೆ ಅವರ ಕಲೆಗೆ ಯಾವುತ್ತು ಒಂದು ಚೋರು ಧಕ್ಕೆಯಾಗದಂತೆ ಕಲೆಯನ್ನು ಪೋಷಿಸುತ್ತಾರೆ.ಬಯಲಾಟವನ್ನು ಆಡುವಾಗ ಅವರು ಧರಿಸುವ ವೇಷಭೂಷಣ ಎಷ್ಟು ಚೆಂದವಾಗಿ ಕಾಣುತ್ತದೆ ಎಂದರೆ ನೋಡುವ ನಯನಕ್ಕೆ ಮತ್ತು ಕೇಳುವ ಕರ್ಣಕ್ಕೆ ಎಷ್ಟು ಆನಂದವನ್ನು ಉಂಟಾಗುತ್ತದೆ ಎಂದರೆ ಅನುಭವಿಸಲಾಗದ ಆನಂದ ಉಂಟಾಗುತ್ತದೆ ಎಂದು ಮುಖ್ಯ ಅತಿಥಿಗಳಾಗಿ ಶ್ರೀ ಪ್ರವೀಣ್ ಕುಮಾರ್ ತಿಳಿಸಿದರು.

ಇತಿಹಾಸವನ್ನು ಕೆದಕಿ ನೋಡಿದರೆ ಎಲ್ಲಿ ಸಾಂಸ್ಕೃತಿಕ ಕಲೆಗೆ ಬೆಲೆ ಇತ್ತು ಎಂದರೆ ಯಾವ ದೇಶ, ರಾಜ್ಯ, ಸಂಪೂರ್ಣವಾಗಿ ಶಾಂತವಾಗಿತ್ತು ಅಲ್ಲಿ ಕಲೆ ಮತ್ತು ಸಾಹಿತ್ಯ ಸಮೃದ್ಧಿಯಾಗಿ ಬೆಳೆದಿತ್ತು.ನಾಟಕದ ಬಗ್ಗೆ ಮತ್ತು ಸಂಸ್ಕೃತಿ ಬಗ್ಗೆ ಒಲವು ತೋರಿಸಿದರೆ ಸಹಕಾರ, ಸಹಭಾಳ್ವೆ ಇದೆ ಎಂಬುದು ಎದ್ದು ಕಾಣುತ್ತದೆ. ನಾಟಕಗಳು ಕೇವಲ ನಮ್ಮ ಮನರಂಜನೆಗಾಗಿ ಎಂದು ತಿಳಿದು ಕೊಂಡೀದೀವಿ ಆದರೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಒಂದು ತಲೆ ಮಾರಿನಿಂದ ಮತ್ತೊಂದು ತಲೆ ಮಾರಿಗೆ ವರ್ಗಾವಹಿಸುವಂತಹ ಮಾಧ್ಯಮ ಮಾವಿನಹಳ್ಳಿ ಗ್ರಾಮದ ಜನರು ಕಲೆ ಮತ್ತು ಸಾಹಿತ್ಯ ಬಗ್ಗೆ ಆಸಕ್ತಿಯಿಂದ ಬೆಳೆಸುವುದು ನೋಡಿದರೆ ಎಷ್ಟು ಆನಂದ ಆಗುತ್ತದೆ ಎಂದರೆ ನನಗೆ ಹೇಳಲಾಗದಷ್ಟು ಖುಷಿಯಾಗಿದೆ ಈಗೆ ನಿಮ್ಮ ಆಸಕ್ತಿ ಸದಾ ಇರಲಿ ಎಂದು ಶ್ರೀ ಕೊಟ್ರೇಶ ರವರು ಹೇಳಿದರು.

ಕಲೆ ಎಂಬುದು ಎಲ್ಲಾರಿಗೂ ಇರಲ್ಲ ಈ ಕಲೆಯನ್ನು ಒಪ್ಪಿಕೊಂಡು ಪ್ರೋತ್ಸಾಹ ಮಾಡಿ ಈ ಭವ್ಯವಾದ ವೇದಿಕೆಯನ್ನು ಹಾಕಿ, ಮಾವಿನಹಳ್ಳಿಯಲ್ಲಿರುವ ಮನಸ್ಸುಗಳು ಮಾವಿನಹಣ್ಣಿನಂತಿರುವ ಮನಸ್ಸುಗಳು ಅಂತಹ ಮನಸ್ಸುಗಳಲ್ಲಿ ತಂದೆ ತಾಯಿ ಮತ್ತು ಮಾವಿನಹಳ್ಳಿ ಗ್ರಾಮದ ರೈತರು ಮತ್ತು ಗುರು ಹಿರಿಯರ ಹಾಗೂ ಸಾರ್ವಜನಿಕ ನಿಮ್ಮೆಲ್ಲರ ಆರ್ಶಿವಾದದಿಂದ ತಾನು ನಾಟಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮಾವಿನಹಳ್ಳಿ ಗ್ರಾಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲೇ ಎಂದು ನನ್ನ ಸಹೋದರ ಹೇಮೇಶ್ವರ ಎಂದು ಶ್ರೀ ನವೀನ ಕುಮಾರ ಧರಣ್ಣಿ ಹೇಳಿದರು

ಮನು ಕುಲಕ್ಕೆ ನಾಟಕ ಅತ್ಯಂತ ಸ್ಪೂರ್ತಿದಾಯಕ ಹಾಗೂ ಮಾರ್ಗದರ್ಶನ ನಮ್ಮನ್ನು ನಮ್ಮ ತಿಳಿಸತಕ್ಕಂತದ್ದು ನಾಟಕ ಇಲ್ಲಿ ನಾಲ್ಕು ಪದಗಳು ಇವೆ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ ಗ್ರಾಮೀಣ ಎಂದರೆ ನೆಮ್ಮದಿಯ ತಾಣ ನಿಷ್ಕಲ್ಮಶವಾದ ಮನಸ್ಸುಗಳು, ನಿಷ್ಕಲ್ಮಶವಾದ ವಾತಾವರಣ,ಸಹೋದರತ್ವ ಮನೋಭಾವ,ಒಬ್ಬರ ಒಬ್ಬರು ರಕ್ತಸಂಬಂಧಿಗಳು ಹಾಗದಿದ್ದರೂ ಕೂಡಾ ಪಕ್ಕದ ಮನೆಯವರನ್ನು ಸಂಬಂದಿಕರ ತನದಿಂದ ನೋಡುವ ತಾಣ ಗ್ರಾಮೀಣ, ಸಂಜೆ ಎಂದರೆ ಸಾಮಾನ್ಯವಾಗಿ ಗ್ರಾಮೀಣದಲ್ಲಿ ಕಾಯಕದ ಮುಕ್ತಾಯದ ಹಂತ ತನ್ನ ಕಾಯಕವನ್ನು ಮುಗಿಸಿ ನೆಮ್ಮದಿಯ ತಾಣವನ್ನು ಮನೆಗೆ ಸೇರುವಂತದ್ದು. ಇವತ್ತು ಏನಾಗುತ್ತದೆ ಎಂದರೆ ಮನುಷ್ಯನ ಜೀವನ ಸಂಜೆಯ ನಂತರವೂ ದುಡಿಮೆಯನ್ನು ಅವಲಂಭಿಸುತ್ತಾನೆ. ಏಕೆಂದರೆ ಬದುಕು ಅಷ್ಟು ಸುಸ್ಥರವಾಗುತ್ತದೆ. ಸಂಸ್ಕೃತಿ ಎಂದರೆ ಮನುಷ್ಯ ಜೀವನವನ್ನು ಈಗೆ ಮಾಡಬೇಕು.ಈಗೆ ಇರಬೇಕು ಎಂಬುದು ಸಂಸ್ಕೃತಿ. ಉತ್ಸವ ಎಂದರೆ ಯಾರಿಗೆ ಉತ್ಸಾಹ ಇರುತ್ತದೆ ಅಂತವರು ಮಾತ್ರ ಉತ್ಸವ ಮಾಡಲು ಸಾಧ್ಯ.ಹಾಗಾಗಿ ಮಾವಿನಹಳ್ಳಿ ಗ್ರಾಮದಲ್ಲಿ ಎಲ್ಲಾರಿಗೂ ಉತ್ಸಾಹ ಎದ್ದು ಕಾಣುತ್ತದೆ.ಇಂತಹ ಉತ್ಸವಕ್ಕೆ ಕಾರಣಿಭೂತರಾದ ನಮ್ಮ ಶಿಷ್ಯರಾದ ಕೆ ಹೇಮೇಶ್ವರವರು.ಅದರ ಜೊತೆಗೆ ನಾಟಕವನ್ನು ವೇದಿಕೆ ಮೇಲೆ ಪ್ರದರ್ಶಿಸುವುದರಿಂದ ಜನರೆಲ್ಲಾ ಒಂದು ಕಡೆ ಸೇರುವುದರಿಂದ ನಮಗೆ ಸಂತೋಷವಾಗುತ್ತದೆ.ಆದರೆ ಶಹರದಲ್ಲಿ ನಾಟಕ ಮಾಡುವುದು ಬಹಳ ಸುಲಭ,ಹಣ ಖರ್ಚು ಮಾಡುವುದು ಬಹಳ ಸುಲಭ,ಆದರೆ ಜನ ಸಂಗ್ರಹ ಮಾಡುವುದು ಬಹಳ ಕಷ್ಟ,ಅದಕ್ಕಾಗಿ ಬ್ರಹ್ಮ ನಾರಧನಿಗೆ ಪ್ರಪಂಚದಲ್ಲಿ ಯಾರಾರು ಏನು ಮಾಡುತ್ತಾರೆ ಎಂದು ನೋಡಲು ಕಳುಹಿಸಿದ ಎಲ್ಲಾ ಜೀವೀಗಳು ಸಮೃದ್ಧಿಯಾಗಿ ಇದ್ದವೆ.ಆದರೆ ಮನುಷ್ಯನ ಮಾತ್ರ ನೆಮ್ಮದಿ ಜೀವನ ಇಲ್ಲದೆ ಕೋರುಗುತ್ತಾನೆ.ಆದಕ್ಕಾಗಿ ಸಂಗೀತ ಮತ್ತು ಸಾಹಿತ್ಯ ಎಂಬ ಎರಡು ವರ ಕೊಟ್ಟ ಅದು ಎರಡು ಸೇರಿರುವುದು ನಾಟಕದಲ್ಲಿ ಪ್ಯಾನ್ ಗಾಳಿಗೆ ಮತ್ತು ನೈಸರ್ಗಿಕ ಗಾಳಿಗೆ ಬಹಳಷ್ಟು ವ್ಯತ್ಯಾಸ ಇದೆ ಅದೇ ರೀತಿ ಸಿನಿಮಾಕ್ಕೆ ಮತ್ತು ನಾಟಕ್ಕೂ ಬಹಳಷ್ಟು ವ್ಯತ್ಯಾಸ ಇದೆ.ಪ್ಯಾನ್ ಆ ಕೋಣೆಯಲ್ಲಿ ಮಾತ್ರ ಬೀಸುತ್ತದೆ,ನೈಸರ್ಗಿಕ ಗಾಳಿ ಎಲ್ಲಾ ಕಡೆ ಇರುತ್ತದೆ ಖುಷಿ, ಸಂತೋಷವನ್ನುಂಟು ಮಾಡುತ್ತದೆ.ಪ್ಯಾನ್ ಗಾಳಿ ಹಾಗೆ ಸಿನಿಮಾ, ನೈಸರ್ಗಿಕ ಗಾಳಿಯಂತೆ ನಾಟಕ.ನಾಟಕಗಳು ಮನಸ್ಸನ್ನು ಅರಳುಸುತ್ತೇವೆ.ತಾಂತ್ರಿಕವಾಗಿ ಇರುವಂತಹ ಸಿನಿಮಾಗಳು ಮನಸ್ಸನ್ನು ಕೇರಳಿಸುತ್ತಾವೆ ಎಂದು ಅಧ್ಯಕ್ಷತೆ ವಹಿಸಿದ ರವೀಂದ್ರ ಎಂ ಹಿರೇಮಠ ತಿಳಿಸಿದರು.

ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ:

ಸಮೂಹ ನೃತ್ಯ : ಭೂಮಿಕ ಮತ್ತು ತಂಡದವರಿಂದ
ಸುಗುಮ ಸಂಗೀತ : ಪುರುಷೋತ್ತಮ ಡಿ ಮತ್ತು ತಂಡದವರಿಂದ
ನಾಟಕ : ಮೌಢ್ಯಕ್ಕೆ ಕೊನೆ ಎಂದು?
ಗಂಗಮ್ಮ ಕಾಳೆನವರ ತಂಡದವರಿಂದ

ಈ ಕಾರ್ಯಕ್ರಮದಲ್ಲಿ ಪ್ರೋ ಎನ್ ಶಾಂತನಾಯ್ಕ, ರವೀಂದ್ರ ಎಂ ಹಿರೇಮಠ, ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಹಳ್ಳಿ ಮುಖ್ಯೋಪಾಧ್ಯಾಯರು ಪ್ರವೀಣ್ ಕುಮಾರ್ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮಪ್ಪ ಕ್ಯಾಂಪ್ ಮುಖ್ಯೋಪಾಧ್ಯಾಯರು ಕೊಟ್ರೇಶ್ ,ರಾಯಲ್ ಶಿಕ್ಷಣ ಮಹಾವಿದ್ಯಾಲಯದ ಶ್ರೀ ಮೋಹನ ಕುಮಾರ, ನವೀನಕುಮಾರ ಧರಣ್ಣಿ,ಜೆ ಬಸವರಾಜ, ಚಂದ್ರಶೇಖರ್ ,ಹುಲಿಯಪ್ಪ ಡಿ, ಪುರುಷೋತ್ತಮ ಡಿ, ಬಿ ಕೆ ಸಿದ್ದಪ್ಪ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷರು ಬಿ ಕೆ ಗುರು ಮಹಾಂತೇಶ, ಹಾಗೂ ಕಾರ್ಯದರ್ಶಿ ಕುರುಬರ ಹೇಮೇಶ್ವರ ಹಾಗೂ ಮಾವಿನಹಳ್ಳಿಯ ರೈತ ಬಾಂಧವರು, ಗುರು ಹಿರಿಯರು, ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply