This is the title of the web page
This is the title of the web page

Please assign a menu to the primary menu location under menu

State

ಗ್ರಾಮೀಣ ಭಾಗದ ಗ್ರಂಥಾಲಯಗಳು ಮಾದರಿ ಗ್ರಂಥಾಲಯಗಳಾಗಲಿ: ಶಾಸಕ ಬಂಡೆಪ್ಪ ಖಾಶೆಂಪುರ್


ಬೀದರ್     ಜೂ.04 : ಗ್ರಾಮೀಣ ಭಾಗದ ಗ್ರಂಥಾಲಯಗಳು ಮಾದರಿ ಗ್ರಂಥಾಲಯಗಳಾಗಬೇಕು. ಗ್ರಂಥಾಲಯಗಳ ಸದುಪಯೋಗವಾಗಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು‌.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿರ್ಸಿ (ಎ) ಗ್ರಾಮದ ಗ್ರಾಮ ಪಂಚಾಯತಿ ಕಛೇರಿ ಆವರಣದಲ್ಲಿ ಶನಿವಾರ ಸಂಜೆ ನಡೆದ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗುವ ಲೈಬ್ರರಿಗಳು ಗ್ರಾಮೀಣ ಭಾಗದ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಉಪಯೋಗವಾಗಬೇಕು. ಅವುಗಳನ್ನು ಗ್ರಾಮೀಣ ಭಾಗದವರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ರಾಷ್ಟ್ರ ಅಭಿವೃದ್ಧಿ ಆಗಬೇಕು ಎಂದರೆ ಮೊದಲಿಗೆ ಹಳ್ಳಿಗಳ ಅಭಿವೃದ್ಧಿ ಆಗಬೇಕೆಂದು ಗಾಂಧೀಜಿಯವರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಹಳ್ಳಿಗಳ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು. ಹನ್ನೆರಡನೆಯ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ನಾವು ಏನಾದರೂ ಕ್ರಾಂತಿ ಮಾಡಬೇಕಾದರೆ ಶಿಕ್ಷಣದಲ್ಲಿಯೇ ಕ್ರಾಂತಿ ಮಾಡಬೇಕಾಗಿದೆ. ಶಾಲೆಗಳು ಚನ್ನಾಗಿರಬೇಕು. ಶಾಲೆಗಳಲ್ಲಿ ಕಲೆಯುವ ವಾತಾವರಣ ನಿರ್ಮಾಣವಾಗಬೇಕು. ಶಾಲೆಗಳಲ್ಲಿ ಗ್ರಂಥಾಲಯಗಳು ಇರಬೇಕು. ಶಿಕ್ಷಣ ಸುಧಾರಣೆಯೆ ನಮ್ಮ ಮೊದಲನೇ ಆದ್ಯತೆಯಾಗಬೇಕು.

ಡಿಜಿಟಲ್ ಲೈಬ್ರರಿಯಲ್ಲಿ ತಂಪು ವಾತಾವರಣಕ್ಕಾಗಿ ಎಸಿ ಕೂಡಿಸುವ ಕೆಲಸ ಮಾಡಬೇಕಾಗಿದೆ. ಓದುವ ಮಕ್ಕಳಿಗೆ ತಂಪು ವಾತಾವರಣ ಇರಬೇಕು. ಅದಕ್ಕಾಗಿ ಹಣ ಸಾಕಾಗಿಲ್ಲ ಎಂದರೆ ನಮ್ಮ ಬಳಿ ಬನ್ನಿ. ನಾನು ನಮ್ಮ ಕ್ಷೇತ್ರದ ಇಪ್ಪತ್ತೆಂಟು ಪ್ರೌಢ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನು ನೀಡಿದ್ದೆನೆ. ಒಂದೊಂದು ಕ್ಲಾಸ್ ರೂಮ್ ಗೆ ಆರರಿಂದ ಏಳು ಲಕ್ಷ ರೂ. ಅನುದಾನ ನೀಡಿದ್ದೇನೆ. ಡಿಜಿಟಲ್ ಕ್ಲಾಸ್ ರೂಮ್ ಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

ಗ್ರಾಮಸ್ಥರು ಲೈಬ್ರರಿಗೆ ಭೇಟಿ ನೀಡಿ ಓದುವ ರೀತಿಯಲ್ಲಿ ಲೈಬ್ರರಿ ನಿರ್ಮಾಣವಾಗಬೇಕು. ಐಎಎಸ್, ಕೆಎಎಸ್ ತರಬೇತಿಗೆ ಸಂಬಂಧಿಸಿದಂತ ಪುಸ್ತಕಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ನಮ್ಮ ಹಳ್ಳಿಗಳಲ್ಲಿ ಎಷ್ಟೋ ಮಕ್ಕಳು ಐಎಎಸ್, ಕೆಎಎಸ್ ಗೆ ಪ್ರಯತ್ನ ಮಾಡುತ್ತಿರುತ್ತಾರೆ. ಅಂತವುಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ. ಲೈಬ್ರರಿಯಲ್ಲಿನ ನ್ಯೂನತೆಗಳನ್ನು ಪಟ್ಟಿ ಮಾಡಿ ನನಗೆ ಕಳಿಸಿಕೊಟ್ಟರೆ ಅದರ ಅಭಿವೃದ್ಧಿಗೆ ನಾನು ಪ್ರಯತ್ನಿಸುತ್ತೇನೆ.

ವಿದೇಶಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಸಿಗುತ್ತಿಲ್ಲ. ಅಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಿವೆ. ಆ ನಿಟ್ಟಿನಲ್ಲಿ ನಾವು ಸಾಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಶಿಕ್ಷಣಕ್ಕೆ ಹೊತ್ತು ಕೊಡಬೇಕು, ಶಿಕ್ಷಣವನ್ನು ಎಲ್ಲರೂ ಪಡೆಯಬೇಕು ಎಂಬುದು ಅಂಬೇಡ್ಕರ್ ರವರ ಕನಸು ಕೂಡ ಇತ್ತು. ಅದರಂತೆ ನಾವೆಲ್ಲರೂ ಶಿಕ್ಷಣಕ್ಕೆ ಹೊತ್ತು ಕೊಡುವ ಕೆಲಸ ಮಾಡಬೇಕು. ಮಕ್ಕಳು ಓದುವ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು‌. ಪೋಷಕರು, ಪಾಲಕರು ಮಕ್ಕಳನ್ನು ಲೈಬ್ರರಿಗಳಿಗೆ ಕಳಿಸಬೇಕು. ಆ ಮೂಲಕ ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆರವರು ಹೇಳಿದರು.

ಈ ಸಂದರ್ಭದಲ್ಲಿ ಬೀದರ್ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗದಿಗೆಪ್ಪಾ ಕುರಕೋಟೆ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ ಚಿಟನಳ್ಳಿ, ಉಪಾಧ್ಯಕ್ಷೆ ಶಾಂತಮ್ಮಾ ಬಸವರಾಜ್ ಜಾನಾ, ಸಂಜುಕುಮಾರ್ ಹೆಚ್ ಕಾಡವಾದ, ಲಕ್ಷ್ಮೀ ಬಿರಾದಾರ, ಸಿದ್ದಾರ್ಥ ಎ ಭಾವಿಕಟ್ಟಿ ಸೇರಿದಂತೆ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಇದ್ದರು.


Gadi Kannadiga

Leave a Reply