This is the title of the web page
This is the title of the web page

Please assign a menu to the primary menu location under menu

Local News

ಸಂಭ್ರಮದಿಂದ ಜರುಗಿದ ಸಹಸ್ರ ದೀಪೋತ್ಸವ ಕಾರ್ಯಕ್ರಮ


ಯರಗಟ್ಟಿ : ಕಾರ್ತಿಕೋತ್ಸವದ ನಿಮಿತ್ಯ ಪಟ್ಟಣದ ವೀಭದ್ರೇಶ್ವರ ದೇವಸ್ಥಾನ, ಮರಡಿ ಬಸವೇಶ್ವರ ದೇವಸ್ಥಾನ, ಶ್ರೀಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರುಗಿತು. ಮಹಿಳೆಯರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ದೀಪಹಚ್ಚಿ ಭಕ್ತಿಯ ಪರಾಕಾಷ್ಠೆ ಮೇರೆದರು ಮತ್ತು ದೇವರಲ್ಲಿ ತಮ್ಮ ಈಷ್ಠಾರ್ತಗಳನ್ನು ಈಡೆರಿಸುವಂತೆ ಭಕ್ತಿಯಿಂದ ಬೇಡಿಕೊಂಡರು. ಶ್ರೀ ವೀರಭದ್ರೇಶ್ವರ, ಮರಡಿಬಸವೇಶ್ವರ ಹಾಗೂ ಮಹಾಂತ ದುರದಿಂಡೇಶ್ವರ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆಸಲ್ಲಿಸಿದರು. ನಂತರ ಮಹಾ ಪ್ರಸಾದ ಜರುಗಿತು. ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಕುಮಾರ ಹಿರೇಮಠ, ಈರಣ್ಣ ಹಿರೇಮಠ, ಈರಣ್ಣಾ ಮಠಪತಿ, ಶ್ರೀಶೈಲ ವಾಲಿ, ರಾಜು ಕತ್ತಿಶೆಟ್ಟಿ, ವಿ. ಎಂ. ಮರಡಿ, ಎಂ. ಬಿ. ವಾಲಿ, ಬಸಯ್ಯ ಹಿರೇಮಠ, ಶಿವಾನಂದ ಪಟ್ಟಣಶೆಟ್ಟಿ, ಮಹಾಂತೇಶ ಜಕಾತಿ, ಮಹಾದೇವ ಚಂದರಗಿ, ಮೋಹನ ಹಾದಿಮನಿ, ಹಾಗೂ ತೋರಣಗಟ್ಟಿಯ ಪುರವಂತರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.


Gadi Kannadiga

Leave a Reply