This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಸಾಹಿತಿ ಚಂದ್ರಕಾಂತ ಕುಸನುರ ಸವಿನೆನಪಿನ ಕಾರ್ಯಕ್ರಮ


ಬೆಳಗಾವಿ: ನಗರದ ಸಾಹಿತ್ಯ ಭವನದಲ್ಲಿ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಇಂದು ಭಾನುವಾರ ಸಾಹಿತಿ ಕುಸನೂರ್ ಅವರ ಸಾಹಿತ್ಯಗಳ, ಚಿಂತನೆಗಳ, ಮರು ವಿಶ್ಲೇಷಿಸುವ, ನೆನಪಿಸುವ, ವಿನೂತನ ಕಾರ್ಯಕ್ರಮ ಜರುಗಿತು…

ಕಾರ್ಯಕ್ರಮದಲ್ಲಿ ಕುಸುನೂರ್ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ರಾಮಕೃಷ್ಣ ಮರಾಠೆ ಅವರಿಂದ ಪ್ರಾಸ್ತಾವಿಕ ನುಡಿ, ಹಾಗೂ ಸ್ವಾಗತ ನೆರವೇರಿಸಿ ಕುದುನುರ ಅವರ ವ್ಯಕ್ತಿತ್ವದ ಕೆಲ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾದ ಫ್ರೊ ರಾಘವೇಂದ್ರ ಪಾಟೀಲ, ಅದ್ಯಕ್ಷರು ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನ ಬೆಳಗಾವಿ, ಇವರು ಮಾತನಾಡಿ, ಕೂಸನುರ ಅವರ ಸಾಹಿತ್ಯ ಹೇಗೆ ಎಲ್ಲರ ಜೀವನಕ್ಕೂ ಅನ್ವಯ ಆಗುತ್ತೆ ಹಾಗೂ ಅವರ ವಾಡನಾಟದ ಕೆಲ ವಿಚಾರ, ನೆನಪುಗಳನ್ನು, ಬಿಚ್ಚಿಟ್ಟರು.. ಅವರ ಕಥೆ ಕವನ ಕಾದಂಬರಿಗಳ ಬಗ್ಗೆ ಮಾತನಾಡುತ್ತಾ ಭಾರತ ದೇಶದ ಕುರಿತಾದ ಅವರ ಬರವಣಿಗೆ ಮನ ಮುಟ್ಟುವಂತಿತ್ತು ಎಂದರು.

ರಂಜಾನ್ ಹಬ್ಬಗಳಲ್ಲಿ ಸರ್ಕೂರ್ಮ ಸವಿಯಲು ಮುಸ್ಲಿಂ ಮನೆಗಳಲ್ಲಿ ಹಿಂದೂಗಳೇ ಹೆಚ್ಚಿರುತ್ತಿರುತ್ತಿದ್ದರು, ಅದೇ ರೀತಿ ದೀಪಾವಳಿಯಲ್ಲಿ ಹಿಂದೂಗಳ ಮನೆಯಲ್ಲಿ ಮುಸ್ಲಿಮರೇ ಹೆಚ್ಚಿರುತ್ತಿದ್ದರು, ಆದರೆ ಈಗ ಎಲ್ಲಾವೂ ಮಾಯವಾಗಿ ಎಲ್ಲೆಡೆ ಚೋರರೆ ಇದ್ದಾರೆ ಎಂಬ ಕುಸುನುರ ಅವರ ಸಹಬಾಳ್ವೆಯ ಹಾಗೂ ಅದನ್ನು ಒಡೆಯುವ ಕುತಂತ್ರಿಗಳ ಕುರಿತಾಗಿರುವ ಸಾಹಿತ್ಯವನ್ನು ನೆನಪಿಸಿ ವಿಶ್ಲೇಷಿಸಿದರು..

ಇನ್ನು ಖ್ಯಾತ ಕಲಾವಿದ ಹಾಗೂ ವಿಮರ್ಶಕರಾದ ಕೆ ವಿ ಸುಬ್ರಹ್ಮಣ್ಯಂ ಅವರು ಮಾತನಾಡಿ, ಕುಸನೂರ ಅವರ ಚಿತ್ರಕಲೆಯ ವಿಧವಿಧದ ಆಯಾಮಗಳ ಹಾಗೂ ಅವು ಸಾರುವ ಸಂದೇಶಗಳ ಬಗ್ಗೆ ಮಾತನಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಬೆಳಗಾವಿಯ ಪ್ರಮುಖ ಸಾಹಿತಿಗಳು, ಸಾಹಿತ್ಯಾಸಕ್ತರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.


Gadi Kannadiga

Leave a Reply