ಬೆಳಗಾವಿ: ಮಾರ್ಚ್-೯: ಬರುವ ಶನಿವಾರ ಮಾರ್ಚ್ ೧೧ ರಂದು ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಿ. ಎಡ್. ಕಾಲೇಜು ಇವುಗಳ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ಹಿರಿಯ ಸಾಹಿತಿ ಎ. ಎ. ಸನದಿ ಅವರ ಎರಡು ಕೃತಿಗಳು ಲೋಕಾರ್ಪಣೆ ಆಗಲಿವೆ. ರೂಪಸೇನ ಕೃತಿಯನ್ನು ಧಾರವಾಡ ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ, ಸಾಹಿತಿ
ಡಾ. ಕೆ. ಆರ್. ದುರ್ಗಾದಾಸ್ ಹಾಗೂ ಮನುಷ್ಯರದೇನೂ ಗ್ಯಾರಂಟಿ ಇಲ್ಲ ಅನುವಾದಿತ ಕಥಾಸಂಕಲನವನ್ನು ಬೆಳಗಾವಿಯ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಲೋಕಾರ್ಪಣೆ ಮಾಡಲಿದ್ದು, ಕೃತಿ ಕುರಿತು ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರೀ ಅವರು ಮಾತನಾಡಲಿದ್ದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಪಿ. ಜಿ. ಕೆಂಪಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪ್ರಾ. ಬಿ. ಎಸ್. ಗವಿಮಠ ಆಗಮಿಸಲಿದ್ದು ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಮರಾಠೆ, ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಿ. ಧಾರವಾಡ ಉಪಸ್ಥಿತರಿರಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಂಕರ ಬಾಗೇವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮಾ. ೧೧ ರಂದು ಸಾಹಿತಿ ಎ. ಎ. ಸನದಿ ಅವರ ಕೃತಿ ಲೋಕಾರ್ಪಣೆ