This is the title of the web page
This is the title of the web page

Please assign a menu to the primary menu location under menu

Local News

ಸಾಹಿತಿ ಯ. ರು ಪಾಟೀಲ ಅವರ ಹನ್ನೆರಡು ಕೃತಿಗಳ ಲೋಕಾರ್ಪಣೆ


ಬೆಳಗಾವಿ:ನಗರದ ಸಾಹಿತ್ಯ ಭವನದಲ್ಲಿ ರವಿವಾರ ಸಾಹಿತಿ ಯ ರೂ ಪಾಟೀಲ ಅವರ ಹನ್ನೆರಡು ಕೃತಿಗಳ ಬಿಡುಗಡೆ ಹಾಗೂ ಆರು ಕೃತಿಗಳ ಪರಿಚಯವನ್ನು ಮಾಡಿಕೊಡಲಾಯಿತು.

ಸಾಹಿತಿಗಳ ಹನ್ನೆರಡು ಕೃತಿಗಳನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಭಯಹಸ್ತದಿಂದ ಬಿಡುಗಡೆ ಮಾಡಿ, ಸಾಹಿತಿಗಳಿಗೆ ಹಾಗೂ ಇಡೀ ಸಮಾಜಕ್ಕೆ ಇಂತಹ ಬರವಣಿಗೆಯಿಂದ ಒಳ್ಳೆಯದಾಗಲಿ ಎಂದು ಆಶೀರ್ವಚನ ನೀಡಿದರು.

ಯ ರು ಪಾಟೀಲ್ ಅವರು ಕರೋನಾ ಬಿಡುವಿನ ಸಮಯದಲ್ಲಿ ಬರೆದ ಹನ್ನೆರಡು ಕೃತಿಗಳು ಈ ಕೆಳಗಿನಂತಿವೆ,, ಕಂದಾಯ ಲೋಕ, ಜಲದಗ್ನಿ, ತ್ಯಾಗಶ್ರೀ, ಅಮಟುರು ಬಾಳಪ್ಪ, ಚರಿತ್ರೆಯಲ್ಲಿ ಮರೆಯಾದವರು, ಹೊರನಾಡ ವಚನಕಾರರು, ಸಾಹೇಬ್ರ ನಾಯಿ, ಬೆಳಗಾವಿ ಆಳಿದ ರಾಣಿಯರು, ಸಾವಿಂಗೆ ಸಂಗಡವಾರು?, ಕಲ್ಯಾಣ ಮರುಪ್ರವೇಶ, ಮುಕ್ತಿ ಸಿಕ್ಕಿತು ಭಕ್ತಿ ಹೋಯಿತು.. ಹೀಗೆ ಹನ್ನೆರಡು ವಿವಿಧ ಶೈಲಿಯ ಕೃತಿಗಳನ್ನು ರಚಿಸಿ, ಈ ದೀನಾ ಲೋಕಾರ್ಪಣೆ ಮಾಡಲಾಯಿತು.

ಸ್ಥಳೀಯ ಕವಿಯತ್ರಿಗಲಾದ ಡಾ ಗುರುದೇವಿ, ಡಾ ಕೆಂಪನ್ನವರ, ಪ್ರಿಯವಂದಾ, ಡಾ ರತ್ನಾ, ಡಾ ಜ್ಯೋತಿ ಬಾದಾಮಿ ಇವರೆಲ್ಲ, ಆಯ್ದ ಆರು ಕೃತಿಗಳ ಪರಿಚಯ ಮಾಡಿಕೊಡುತ್ತ, ಅವುಗಳ ಮೌಲ್ಯ, ವಿಷಯ ಸ್ವಾರಸ್ಯ, ಸಾಹಿತ್ಯಕ ಪ್ರಭುದ್ಧತೆ ಮತ್ತು ಮೂಡಿಬಂದ ಕಲ್ಪನೆಗಳನ್ನು ಸೊಗಸಾಗಿ ವಿಶ್ಲೇಷಿಸಿ ಪರಿಚಯಿಸಿದರು.


Gadi Kannadiga

Leave a Reply