This is the title of the web page
This is the title of the web page

Please assign a menu to the primary menu location under menu

State

ಸಲಾಂ… ಈ ಪೀಳಿಗೆಗೆ….


(ಆಗಾಗ ಇಂತಹ ಮನಸ್ಸನ್ನು ಮುದಗೊಳಿಸುವ,ಖುಷಿ ಪಡಿಸುವ ಸಣ್ಣ ಸಣ್ಣ ಲೇಖನಗಳು ವಾಟ್ಸ್ ಆ್ಯಪ್ ನಲ್ಲಿ ಬರುತ್ತಲೇ ಇರುತ್ತವೆ .ಅವನ್ನು ಯಾವ ಪುಣ್ಯಾತ್ಮರು ಕಳಿಸುತ್ತಾರೋ ಗೊತ್ತಿರುವುದಿಲ್ಲ ,ಅವನ್ನು ಯಾರೂ ನಮಗೆ ಬೇಕಾದವರು ನಮಗಾಗಿ ಫಾರ್ವರ್ಡ್ ಮಾಡಿರುತ್ತಾರೆ ,ನಿಜಕ್ಕೂ ಅದ್ಭುತವಾದ ವಿಚಾರಗಳಿರುತ್ತವೆ ,ಖಂಡಿತವಾಗಿ ಅವನ್ನು ನಾವು ನಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಬೇಕಾಗುತ್ತದೆ ,ನಾನೂ ಸಹ ನನ್ನ ಸ್ನೇಹಿತ ನನಗಾಗಿ ಕಳಿಸಿದ ಈ ಉತ್ತಮವಾದ ಲೇಖನವನ್ನು ,ಅದರೆ ಮೂಲ ಲೇಖಕರಿಗೆ 1 ನಮಸ್ಕಾರ ಹೇಳುತ್ತ,ಅದ್ಭುತ ವಿಚಾರಗಳನ್ನ ಹಂಚಿಕೊಂಡಿದ್ದಕ್ಕಾಗಿ ಸಮಾಜದ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತಾ ..)

1950… ರಿಂದ 1970 ರಲ್ಲಿ ಜನಿಸಿದ ಪೀಳಿಗೆ…
ಇದೊಂದು… ವಿಶಷ ಅವಿಸ್ಮಣೀಯ ಪೀಳಿಗೆಯ ಜನ..
ಈಗ ಇವರ ವಯಸ್ಸು..50 ದಾಟಿ , 70ರ ಆಸು ಪಾಸು ಇದ್ದಿರಬೇಕು
ಈ ಪೀಳಿಗೆಯ ವಿಶೇಷ ಅಂದರೆ ,ಬದಲಾಗುತ್ತಿರುವ ಕಾಲಮಾನದಲ್ಲಿ ತಮ್ಮನ್ನು ತಾವೇ ಬದಲಾಯಿಸಿ ಅದರೊಂದಿಗೆ adjust ಮಾಡಿಕೊಳ್ಳುತ್ತಿದ್ದಾರೆ..
ಮತ್ತೊಂದು ವಿಶೇಷ ವೆಂದರೆ , ಈ ಪೀಳಿಗೆಯ ಜನ ಕಾಯಂ ಹೊಸ್ತಿಲ ಮೇಲೆ ಯೇ ಜೀವಿಸುತ್ತಿದ್ದಾರೆ.
1,2,5,10,20 ಪೈಸೆ ಯೊಂದಿಗೆ ವ್ಯವಹಾರ ಮಾಡುತಿದ್ದ ಈ ಜನ ನಿಜವಾಗಿಯೂ ಒಂದು ತರಹದ ಅದೃಷ್ಟ ವಂತರು..(ದುಡ್ಡಿನ ಬೆಲೆ ತಿಳಿದವರು )
೫ಪೈಸೆಗೆ ಒಂದು ಕಪ್ ಚಹಾ ಕುಡಿದ ಈ ಪೀಳಿಗೆ ಈಗ 10ರೂಪಾಯಿ ಗೂ , ಆ ರುಚಿಯ ಚಹಾ ಕಾಣುತ್ತಿಲ್ಲ..
Ink pen, pencil, ball pen ನಿಂದ ಶುರು ಮಾಡಿದ ಇವರ ಜನ ಜೀವನ.. ಈಗ smart phone, Lap top ಮೇಲೆ ಕೈ ಆಡಿಸುವದನ್ನು ಕಲಿತಿದೆ.
Cycle ಮೇಲೆ ಓಡಾಡುತ್ತಿದ್ದ ಈ ಪೀಳಿಗೆ ಈ ಇಳಿ ವಯಸ್ಸಿನಲ್ಲಿ car ನಡೆಸುವದನ್ನು ಕರಗತ ಮಾಡಿಕೊಂಡಿದ್ದಾರೆ.
ತಮ್ಮ ಬಾಲ್ಯವನ್ನು ಅತೀ ಕಷ್ಟ ಕಾರ್ಪಣ್ಯ ಗಳಲ್ಲಿ ಕಳೆದ ಈ ಪೀಳಿಗೆ
ಈಗ ಆಧುನಿಕ ಜನ ಜೀವನ ವನ್ನೂ ಅನುಭವಿಸುತ್ತಿದ್ದಾರೆ.
ಇದೊಂದು ಸುಸಂಸ್ಕೃತ ಪೀಳಿಗೆ..
Tape recorder, pocket radio ದೊಂದಿಗೆ ಶುರು ಮಾಡಿದ ಇವರ ಮನೋರಂಜನೆ ಈಗ satellite TV ವರೆಗೂ ಹೋಗಿದೆ.
Bycycle ನ ಹಳೆಯ tyre ಅನ್ನೇ ಆಟದ ಚಕ್ರದಂತೆ ಬಳಿ ಸುತಿದ್ದ ಈ ಪೀಳಿಗೆ.. ಅದೆಂದೂ ಕೀಳು ಮಟ್ಟದ ಆಟ ಎಂದೂ ಭಾವಿಸಲೇ ಇಲ್ಲ.
ಬೇಸಿಗೆ ದಿನಗಳಲ್ಲಿ, ಮಾವಿನ ಗಿಡದಿಂದ ಕಚ್ಚಾ ಮಾವಿನ ಕಾಯಿ ಕದೆ ಯುವದು ಕಳ್ಳತನ ಎಂದೂ ಇವರು ಭಾವಿಸಲೇ ಇಲ್ಲ.
ಯಾವಾಗ ಬೇಕಾದರೂ ಗೆಳೆಯರ ಮನೆಗೆ ಹೋಗುವುದು, ಅವರ ಜೊತೆ ಹರಟೆ, ಊಟ, ಆಟ ಆಡುವುದು ..ಇದಕ್ಕೆ time table ಯಾವುದೂ ಇಲ್ಲ..
ಇದು ethics ವಿರುದ್ಧ ಎಂದು ಎಂದೂ ಭಾವಿಸಲೇ ಇಲ್ಲ..
ಶಾಲೆಯಲ್ಲಿ, ಓಣಿಯಲ್ಲಿ, ಭೇಟಿಯಾದಾಗ ಅಕ್ಕನ ಗೆಳತಿಯರ ಜೊತೆ ಮನ ಬಿಚ್ಚಿ ಗಪ್ಪಾ ಹೊಡೆಯುವುದು ಈ ಪೀಳಿಗೆಯ ವಿಶೇಷ ವಾಗಿತ್ತು.. ಇದರಲ್ಲಿ ಯಾವ ತರಹದ ಸಂಕೋಚ ಕಾಣುತ್ತಿರಲಲ್ಲ..
ಶಾಲೆಗೆ ಗೆಳೆಯರ parents ಬಂದರೆ , ಕೂಡಲೇ 100km speed ನಿಂದ ಓಡುತ್ತ ಹೋಗಿ ಅವನನ್ನು ಎಳೆದು ತರುವ ಹುಮ್ಮುಸ ಈ ಪೀಳಿಗೆಯಲ್ಲಿ ಇತ್ತು..
ಇದರಲ್ಲಿ ಯಾವ ತರಹದ ego ಅನ್ನಿ, ಅಪಮಾನ ಕಾಣುತ್ತಿರಲಿಲ್ಲ.
ಓಣಿಯ ಮನೆಯಲ್ಲಿ ಮದುವೆ ಅಥವಾ ಇನ್ನಿತರ ಹಬ್ಬ ಹರಿದಿನಗಳಲ್ಲಿ… ಯಾವ ಸಂಕೋಚವಿಲ್ಲದೆ ಕಾರ್ಮಿಕ ನಂತೆ ದುಡಿಯುವುದು ಒಂದು ಹೆಮ್ಮೆಯ ಸಂಗತಿ ಆಗಿತ್ತು..
ಶಾಲೆಯ interval ವೇಳೆಯಲ್ಲಿ,.
ಧಪ್ಪನ ಧುಪ್ಪಿ ಆಡೋದು..
10,20,30….. ಕಣ್ಣು ಮುಚ್ಚಿ, ಮುಖ ಆ ಕಡೆ ಮಾಡಿ ಕೂಗಿ.. ಬಂದೇ.. ಎನ್ನುತ್ತ ಕಣ್ಣು ಮುಚ್ಚಾಲೆ ಆಡೋದು.. ಈ ಪೀಳಿಗೆಯ ಆಟ ಆಗಿತ್ತು .
ಗವಾಸ್ಕರ್, ವಿಶ್ವನಾಥ .. ಇವರ್ ಆಟದ ಚರ್ಚೆ .. ಈ ಇಬ್ಬರಲ್ಲಿ ಯಾರು ಶ್ರೇಷ್ಠ ರು…? ಇದರ ಬಗ್ಗೆ ಗಂಟೆ ಗಟ್ಟಲೆ ಚರ್ಚೆ ಆಗುತಿತ್ತು..
ದಿಲೀಪ ಕುಮಾರ, ದೇವಾನಂದ, ರಾಜ್ ಕಪೂರ್, ರಾಜೇಶ್ ಖನ್ನಾ.. ಇವರ ಚಲನ ಚಿತ್ರ ಗಳ tickets ಅನ್ನು ಕಳ್ಳ ಸಂತೆಯಲ್ಲಿ ಖರೀದಿಸಿ ನೋಡುವ ಈ ಪೀಳಿಗೆ..
ಬಾಡುಗೆಯಲ್ಲಿ VCR ತಂದು ಒಂದೇ ರಾತ್ರಿ ೪/೬ movies ನೋಡುವ ಹುಚ್ಚು ಈ ಪೀಳಿಗೆಯ..
ಎಷ್ಟೇ ಏಟು ತಿಂದರೂ ಗುರುಗಳ complaints ಪಾಲಕರ ಮುಂದೆ ಹೇಳದೆ ಇರೋದು ಈ ಪೀಳಿಗೆಯ ಗುಣ ಧರ್ಮ ಎನ್ನಿ…
ಇಂತಹ… ಈ ಪೀಳಿಗೆ…
೫೦… ರಿಂದ ೭೦ರಲ್ಲಿ ಹುಟ್ಟಿ ಬೆಳೆದ ಈ ಪೀಳಿಗೆ… ಒಂದು ವಿಶೇಷ ಪೀಳಿಗೆ.
ಈಗ ಇದೆಲ್ಲ ನೆನಸಿದರೆ…
ಇದೇನು ಕನಸಿನ ಪೀಳಿಗೆಯೇ…?
ಹೀಗೆ ಅನಿಸುವುದು… ಇಂದಿನ ಯುವ ಪೀಳಿಗೆಗೆ..
ಅಲ್ಲವೇ…?
ಧನ್ಯ… ನಾನೂ ಬೆಳೆದಿದ್ದು… ಇದೇ..
೫೦.. ರಿಂದ ೭೦ರ ಪೀಳಿಗೆಯ ಒಂದು ಪ್ರಾಣಿ..
ಸಲಾಂ… ಈ ಪೀಳಿಗೆಗೆ…

(ಅಬ್ದುಲ್ ಗಣಿ ಮೋಮಿನ್ ಅವರು ಕಳಿಸಿದ್ದು )


Gadi Kannadiga

Leave a Reply