ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಡಿ.ತಳವಾರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ.ಸುರೇಶ ಜಿ.ನಾಯಿಕ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕ ವ್ಹಿ.ಎಸ್.ಸೊಂಟಿ ಅವರು ಸೇವಾ ನಿವೃತಿ ಹೊಂದಿದ ಪ್ರಯುಕ್ತ ಮೂಡಲಗಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಸತ್ಕರಿಸಿ ಬೀಳ್ಕೋಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲಕರ ಮತ್ತು ನಿರ್ದೇಶಕರಾದ ಆರ.ಪಿ.ಸೋನವಾಲಕರ, ಅಜ್ಜಪ್ಪ ಗಿರಡ್ಡಿ, ಪ್ರದೀಪ ಲಂಕೆಪ್ಪಣವರ ಅನೀಲ ಸತರಡ್ಡಿ, ರವಿ ನಂದಗಾಂವ ಅವರು ನಿವೃತ ಪ್ರಾಚಾರ್ಯ ಹಾಗೂ ಪ್ರಾಧ್ಯಪಕರನ್ನು ಸಂಸ್ಥೆಯಿಂದ ಶಾಲಾ ಹೊದಿಸಿ ಫಲ ಪುಷ್ಪಗಳೊಂದಿಗೆ ಗೌರವ ಪೂರ್ವಕ ಸತ್ಕಾರವನ್ನು ನೆರವೇರಿಸಿದರು.
ಸತ್ಕಾರ ಸ್ವೀಕರಿದ ಪ್ರೊ.ಸುರೇಶ ನಾಯಕ ಮಾತನಾಡಿ, ೩೬ ವರ್ಷಗಳ ಅಖಂಡ ಸೇವೆಯಲ್ಲಿ ನನಗೆ ಸಿಕ್ಕ ಕೆಸ ಕಾರ್ಯಗಳನ್ನು ಅಚ್ಚುಕಟ್ಟತನದಿಂದ ಮಾಡಿದ ಸೇವಾ ತೃಪ್ತಿ ಇದೆ ಎಂದ ಅವರು ಸಂಸ್ಥೆಯು ನೀಡಿದ ಅವಕಾಶಕ್ಕೆ ಚೀರಋಣಿಯಾಗಿರುವದಾಗಿ ಹೇಳಿದರು.
ಪ್ರಾಚಾರ್ಯ ಎಸ್.ಡಿ.ತಳವಾರ ಮಾತನಾಡಿ,ಸಂಸ್ಥೆ ನಮಗೆ ಅನ್ನ ಹಾಗೂ ಅಧೀಕಾರವನ್ನು ನೀಡಿ ನಮಗೆ ಸೇವಾ ಬಾಗ್ಯವನ್ನು ನೀಡಿದ್ದು ಅದನ್ನು ನನ್ನ ಜೀವನದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.
ಶಿಕ್ಷಕ ವ್ಹಿ.ಸ್.ಸೊಂಟಿ ಮಾತನಾಡಿ, ೧೫ ವರ್ಷಗಳ ನನ್ನ ಸೇವಾ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯಿಂದ ಇರುವುದಾಘಿ ಹೇಳಿದರು. ಪ್ರೊ.ಜಿ.ವ್ಹಿ.ನಾಗರಾಜ ಮತ್ತಿತರರು ನಿವೃತ ಶಿಕ್ಷಕರ ಕುರಿತು ಮಾತನಾಡಿದರು. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ನಿವೃತಿ ಹೊಂದಿದ ಪ್ರಾಧ್ಯಾಪಕ ನಿವೃತಿ ಜೀವನದಲ್ಲಿ ದೇವರು ಆಯುಷ್ಯ, ಆರೋಗ್ಯ ನೆಮ್ಮದಿಯನ್ನು ನೀಡಿಕರುಣಿಸಲೆಂದು ಸಂಸ್ಥೆಯ ಪರವಾಘಿ ಹಾರೈಸಿದರು.
ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಕೆ.ಕಂಕಣವಾಡಿ ಸ್ವಾಗತಿಸಿದರು, ಪ್ರೊ.ಭೀಮಪ್ಪ ಗಡಾದ ನಿರೂಪಿಸಿದರು, ಡಾ.ಸುರೇಶ ಚಿತ್ರಗಾರ ವಂದಿಸಿದರು.
Gadi Kannadiga > Local News > ಮೂಡಲಗಿ ಶಿಕ್ಷಣ ಸಂಸ್ಥೆಯ ನಿವೃತ ಪ್ರಾದ್ಯಾಪಕರಿಗೆ ಸತ್ಕಾರ
ಮೂಡಲಗಿ ಶಿಕ್ಷಣ ಸಂಸ್ಥೆಯ ನಿವೃತ ಪ್ರಾದ್ಯಾಪಕರಿಗೆ ಸತ್ಕಾರ
Suresh01/08/2023
posted on
