ಬೆಳಗಾವಿ:: ರಾಜಸ್ಥಾನದ ಕಿಶನಗಡ ಆಚಾರ್ಯ ಆದಿಸಾಗರ ಅಂತಾರಾಷ್ಟ್ರೀಯ ಜಾಗೃತಿ ಮಂಚವು ಭಗವಾನ್ ಮಹಾವೀರ್ ಅವರ 2550 ನಿರ್ವಾಣ ಮಹೋತ್ಸವದ ನಿಮಿತ್ತ – “ವರ್ತಮಾನ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರ ಅವರ ತತ್ವಗಳ ಪ್ರಸ್ತುತತೆ” ವಿಷಯ ಕುರಿತು ಸರ್ವ ಭಾಷೆಗಳಲ್ಲಿ ರಾಷ್ಟ್ರಮಟ್ಟದ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ ಕನ್ನಡದಲ್ಲಿ 370 ಪ್ರಬಂಧಗಳು ಸಲ್ಲಿತವಾಗಿದ್ದು ಅದರಲ್ಲಿ ಇಲ್ಲಿಯ ಭರತೇಶ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಶಿಂದೊಳ್ಳಿ ಗ್ರಾಮದ ಶ್ರೀ. ಎ. ಎ. ಸನದಿ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ. ಅವರಿಗೆ 50 ಗ್ರಾಂ ಬೆಳ್ಳಿಯ ಪದಕ, ಪ್ರಶಸ್ತಿ ಪತ್ರ ಹಾಗು ಸ್ಮರಣಿಕೆ ನೀಡಿ ಗೌರವಿಸಲಾಗಿದೆ.