ಯರಗಟ್ಟಿ: ಪಟ್ಟಣದ ಸ್ವಯಂ ಸೇವಕರು ಹಾಗೂ ಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಿತು.
ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಕುಂಕುಮಾರ್ಚಣೆ ಬಿಲ್ವಾರ್ಚಣೆ ಮಾಡಲಾಯಿತು. ನಂತರ ದೇವಸ್ಥಾನ ಆವರಣದಿಂದ ಆರಂಭವಾದ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರದ ಮೆರವಣಿಗೆ ಪ್ರಮುಖ ವಿವಿಧ ವಾದ್ಯಮೇಳಿಂದ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ರಾಮ ನಾಮ ಜಪ ಜೈಘೋಷಣೆ ಮೊಳಗಿದವು ನಂತರ ಮಹಾಪೂಜೆ ಹಾಗೂ ಮಹಾ ಅನ್ನ ಪ್ರಸಾದ ಸೇವೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಗಂಗಪ್ಪ ಬಾರ್ಕಿ, ಗೋವಿಂದ ಪೂಜೇರ, ಸಂತೋಷ ವಾಲಿ, ಮಂಜುನಾಥ ಕೊಪ್ಪದ, ಶಿವನಾಯ್ಕ ಬೂದಿಗೊಪ್ಪ, ವಿಠ್ಠಲ ಪೂಜೇರ, ಹಾಗೂ ಪಟ್ಟಣದ ಮಹಿಳೆಯರು, ಹಿರಿಯರು ಪ್ರಮುಖರು ಮತ್ತು ಸುತ್ತಮುತಲ್ಲಿನ ಗ್ರಾಮಗಳ ಹನುಮಮಾಲಧಾರಿಗಳಾದ ಉಪಸ್ಥತರಿದ್ದರು.
Gadi Kannadiga > Local News > ಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ