This is the title of the web page
This is the title of the web page

Please assign a menu to the primary menu location under menu

Local News

ಸಂತೋಷ ಹೊಂಗಲ ಅವರಿಗೆ ರಾಜ್ಯ ಮಟ್ಟದ “ಚರ್ಮಶಿಲ್ಪಿ” ಪ್ರಶಸ್ತಿ


ಬೆಳಗಾವಿ ೨- ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲೀಡ್ಕರ್) ಇತ್ತೀಚಿಗೆ ಅರಮನೆ ಮೈದಾನ ತ್ರಿಪುರ ವಾಸನಿಯಲ್ಲಿ ನಡೆದ ರಾಜ್ಯಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮಕುಶಲ ವಸ್ತು ಪ್ರದರ್ಶನದಲ್ಲಿ ಬೆಳಗಾವಿಯಿಂದ ಸಂತೋಷ ಹೊಂಗಲರವರು ಭಾಗವಹಿಸಿ ಅತ್ಯುತ್ತಮ ನೈಪುಣ್ಯತೆಯಿಂದ ವಿಶೇಷ ವಿನ್ಯಾಸಗೊಳಿಸಿದ ಗುಣಮಟ್ಟದ ಪಾದರಕ್ಷೆ ತಯಾರಿಸುವುದಕ್ಕೆ ಅತ್ಯುತ್ತಮ “ಚರ್ಮ ಶಿಲ್ಪಿ” ಪ್ರಶಸ್ತಿ ನೀಡಿ ಪ್ರಶಂಶಿಸಿ ೩೦,೦೦೦ ರೂಪಾಯಿ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು ವಸ್ತು ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಮಂತ್ರಿಗಳಾದ ಗೋವಿಂದ ಕಾರಜೋಳರವರು ಸಂತೋಷ ಹೊಂಗಲರವರು ಉತ್ಪಾದಿಸಿದ ಪಾದರಕ್ಷೆಯನ್ನು ಉಪಸ್ಥಿತರ ಮುಂದೆ ಪ್ರದರ್ಶಿಸಿ ಪ್ರಶಂಸಿದರು. ಸಂತೋಷ ಹೊಂಗಲರವರಿಗೆ ಈ ಹಿಂದೆಯೂ ಅನೇಕ ಪ್ರಶಸ್ತಿಗಳಿಂದ ಸನ್ಮಾನಿಸಿ ಗೌರಿಸಲಾಗಿದೆ ಇವರಿಗೆ ಎಲ್ಲ ಕಡೆಯಿಂದ ಅಭಿನಂದಿಲಾಗುತ್ತಿದೆ


Gadi Kannadiga

Leave a Reply