ಕೊಪ್ಪಳ ,: ತಾಲೂಕು ಕಾಮನೂರು ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಯಶಸ್ವಿಯಾಗಿ ನೂರು ದಿನವನ್ನು ಕೆಲಸವನ್ನು ಮಾಡಿದ ಪ್ರಯುಕ್ತ ಸಭೆಯನ್ನು ಉದ್ದೇಶಿಸಿ ಎ ಐ ಡಿ ವೈ ಓ ರಾಜ್ಯ ಸಮಿತಿ ಸದಸ್ಯರಾದ ಶರಣು ಗಡ್ಡಿ ಮಾತನಾಡುತ್ತ ಹೇಳಿದರು.
ಗ್ರಾಮೀಣ ಭಾಗದ ಕೂಲಿಕರಾರಿಗೆ ನರೇಗಾ ಯೋಜನೆ ಆಸರೆಯಾಗಿದೆ. ಮುಂಗಾರು ಮಳೆ ಕೊರತೆ ಯಿಂದ ರೈತರಿಗೆ ಮತ್ತು ಕೂಲಿಕರರಿಗೆ ಕೆಲಸವಿಲ್ಲ ಆಗಾಗಿ 200 ದಿನ ಮಾನವ ದಿನಗಳೆಂದು ಘೋಷಿಸಿಬೇಕು. ಬೆಲೆ ಏರಿಕೆಯ ಈ ದಿನಗಳಲ್ಲಿ ಸರಕಾರ ಕೊಡುವ ರೂ. 316/- ಸಾಕಾಗುವದಿಲ್ಲ ಕೂಲಿ ಮೊತ್ತವನ್ನು ರೂ. 600/- ಕ್ಕೆ ಏರಿಕೆಮಾಡಬೇಕೆಂದು ಸರಕಾರವನ್ನು ಆಗ್ರಹಿಸಿದರು. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿಗೆ ಇಟ್ಟಿರುವ 90 ಸಾವಿರ ಕೋಟಿಯಲ್ಲಿ 40, ಸಾವಿರ ಕೋಟಿಯಷ್ಟು ದುಡ್ಡನ್ನು ಕಡಿಮೆ ಮಾಡಿ ಕಾರ್ಮಿಕರಿಗೆ ಅನ್ಯಾಯವೆಸಗಿದೆ. ಕೇವಲ 26 ಜನಕ್ಕೆ 10 ಲಕ್ಷ ಕೋಟಿಯಷ್ಟು ಹೊಸಲಾಗದ ಸಾಲವೆಂದು ಸರ್ಕಾರದ ಹಣಕಾಸು ಸಚಿವರು ಇತ್ತೀಚಿಗೆ ಕೇಂದ್ರ ಬಜೆಟ್ಟಿನಲ್ಲಿ ಘೋಷಣೆ ಮಾಡಿರುವುದು ಬಂಡವಾಳ ಶಾಹಿ ಪರ ಕೆಲಸ ಮಾಡುತ್ತಿದೆ. ದೇಶದಲ್ಲಿ ಈ ನೆರೆಗೆ ಯೋಜನೆಯಲ್ಲಿ ಸಾಕಷ್ಟು ನಿರುದ್ಯೋಗ ಯುವ ಜನರು ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರ್, ಡಿಗ್ರಿ, ಅತಿಥಿ ಉಪನ್ಯಾಸಕರು, ಉನ್ನತ ಶಿಕ್ಷಣ ಮುಗಿಸಿದಂತವರಿಗೆ ಈ ಕೆಲಸ ಅನಿವಾರ್ಯವಾಗಿದೆ ಎಂದು ಕೇಳಿದರು.
ಈ ಸಂಧರ್ಭದಲ್ಲಿ ಎ ಐ ಡಿ ವೈ ಓ ಸಂಘಟನೆ ಜಿಲ್ಲಾ ಅಧ್ಯಕ್ಷರು ಅದ ರಮೇಶ ವಂಕಲಕುಂಟಿ ಮಾತನಾಡಿ, ಲೇಬಗೇರಿ ಗ್ರಾಮ ಪಂಚಾಯತಿ ಸಿಬ್ಬಂದಿ ಗಳ ಇಂದು ನಮ್ಮ ಊರಿಗೆ 100 ದಿನ ಕೆಲಸವನ್ನು ನೀಡಿ ಯಶಸ್ವಿ ಗೊಳಿಸಿದ್ದಾರೆ. ಕೂಲಿಕಾರರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದರು. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ.
ಮಳೆ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಜಾತಿ ಮತ ಪಂಥ ಬೇದಗಳನ್ನು ಮರೆತು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡುವಂತಾಗಿದೆ ಎಂದರು.
ಈ ಸಂಧರ್ಭದಲ್ಲಿ ಗ್ರಾಮ ಪಂ, ಸದಸ್ಯರಾದ ಮಲ್ಲಪ್ಪ ತುಬಾಕಿ, ಕಾಯಕ ಬಂದುಗಳಾದ ಅಂಬಮ್ಮ, ಮೇಟ್ ಗಳಾದ ಶಾಂತಮ್ಮ ವಂಕಲಕುಂಟಿ, ಸೋಮವ್ವ ಹರಿಜನ, ಕೂಲಿಕಾರರದ ಹನುಮಪ್ಪ, ನಾಗಪ್ಪ, ಹುಲಿಗೆಮ್ಮ, ಮುತ್ತು, ಬಾಳೆಶ್ ಶಾರದಾ, ಮಂಜವ್ವ, ಇತರರು ಇದ್ದರು.