ಮೂಡಲಗಿ: ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಐಪಿಎಲ್ ನಂತಹ ಕ್ರಿಕೆಟ್ ಕ್ರೀಡೆಯನ್ನು ಗ್ರಾಮ ಮಟ್ಟದಲ್ಲಿ ನಾಗನೂರು ಪ್ರೀಮಿಯರ್ ಲೀಗ್ ಹೆಸರಿನಡಿ ಆಯೋಜನೆ ಮಾಡಿದ್ದು ಪ್ರಶಂಶ£Ãಯ ಸಂಗತಿಯಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರದಂದು ಸಂಜೆ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ನಾಗನೂರು ಪ್ರೀಮಿಯರ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಹರಾಜು ಪ್ರಕ್ರೀಯೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಕೆಟ್ ಎಂಬುದು ಕೇವಲ ಒಂದು ಕ್ರೀಡೆಯಲ್ಲ ಅದರಿಂದ ದೈಹಿಕ ಕಸರತ್ತಿನ ಜೊತೆಗೆ ತಾಳ್ಮೆ, ಗುರಿ, ನಾಯಕತ್ವ ಹಾಗೂ ಆಟಗಾರರ ನಡುವೆ ಸಹೋದರರ ಭಾವ ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. ಎನ್‌ಪಿಎಲ್ ಆಯೋಜನೆಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ಸಂತಸ ತಂದಿದ್ದು, ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಡಿ ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂದು ಶುಭ ಹಾರೈಸಿದರು.
ನಾಗನೂರ ಪಟ್ಟಣದ ಮುಖಂಡರಾದ ಪರಸಪ್ಪ ಬಬಲಿ ಹಾಗೂ ಸತ್ಯಪ್ಪ ಕರವಾಡಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಐಪಿಎಲ್‌ನ್ನು ನಾಚಿಸುವ ರೀತಿಯಲ್ಲಿ ಇವತ್ತು ನಮ್ಮ ಗ್ರಾಮದಲ್ಲಿ ಎನ್‌ಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ, ಒಟ್ಟಾರೆ ಆರು ತಂಡಗಳಿದ್ದು ಜಿಲ್ಲೆಯಾದ್ಯಂತ ಅನೇಕ ಕ್ರೀಡಾ ಪ್ರೇಮಿಗಳು ಆಗಮಿಸುತ್ತಿದ್ದಾರೆ, ಎನ್‌ಪಿಎಲ್ ನಂತಹ ಕ್ರಿಕೆಟ್ ಕ್ರೀಡೆಯನ್ನು ಗ್ರಾಮೀಣ ಮಟ್ಟದಲ್ಲಿ ನಡೆಯಲು ಸಹಕರಿಸಿದ ಶಂಕರಗೌಡ ಹೊಸಮ£, ಎನ್‌ಪಿಎಲ್ ಸಂಘಟಕರು, ಗ್ರಾಮದ ಹಿರಿಯರು ಹಾಗೂ ಕ್ರೀಡೆಗೆ ಸದಾ ಬೆನ್ನೆಲುಬಾಗಿ £ಂತಿರುವ ಕ್ಷೇತ್ರದ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರ ತುಂಬಾ ಇದೆ ಎಂದು ಪ್ರಶಂಶಿಸಿದರು.
ಪ್ರಭಾ ಶರ‍್ಸ £ರ್ದೇಶಕ ಕೆಂಚನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಶಂಕರ ಹೊಸಮ£, ಗಜಾನನ ಯರಗಣವಿ, ಸುಭಾಸ ಕುರಬೇಟ್, ಮೋಹನ ಗಾಡಿವಡ್ಡರ, ತಮ್ಮಣ್ಣ ನಾಯಕವಾಡಿ, ಸಿದ್ದಣ್ಣ ಯಾದವಾಡ, ಬಾಬುಸಾಬ್ ಚೌಧರಿ ಸೇರಿದಂತೆ ಗ್ರಾಮದ ಹಿರಿಯರು, ಎನ್‌ಪಿಎಲ್ ಸಂಘಟಕರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.