ಮನುಕುಲದ ಒಳಿತಿಗಾಗಿ ಸರ್ವಕಾಲಿಕ ಸತ್ಯವನ್ನೇ ಸಾರಿದ ವಚನಗಳು-ಶಶಿಕಾಂತ ತಾರದಾಳೆ

Murugesh Shivapuji
ಮನುಕುಲದ ಒಳಿತಿಗಾಗಿ ಸರ್ವಕಾಲಿಕ ಸತ್ಯವನ್ನೇ ಸಾರಿದ ವಚನಗಳು-ಶಶಿಕಾಂತ ತಾರದಾಳೆ
WhatsApp Group Join Now

ಬೆಳಗಾವಿ; ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಮಾನವ ಜನಾಂಗದ ಕಲ್ಯಾಣಕ್ಕಾಗಿ, ಮನುಕುಲದ ಒಳಿತಿಗಾಗಿ ಸರ್ವಕಾಲಿಕ ಸತ್ಯವನ್ನೇ ಸಾರಿವೆ. ಅವುಗಳ ಮಹತ್ವವನ್ನು ಅರಿತು ನಾವು ಆತ್ಮ ಶುದ್ಧಿ ಹಾಗೂ ಆತ್ಮೋದ್ಧಾರಕ್ಕಾಗಿಅಲ್ಲದೇ ಜಗದ ಶಾಂತಿಗಾಗಿ ಅನುಷ್ಠಾನಕ್ಕೆ ತಂದು ಕೂಳ್ಳಬೇಕಾಗಿದೆ. ಶರಣರು ತಮ್ಮ ಅನುಭಾವದ ವಚನಗಳ ರಚಿಸಿ,ತಾವು ಅವುಗಳ ಆಶಯದಂತೆ ನಡೆದು ನೆಮ್ಮದಿಯ ಬದಕು ಸಾಗಿಸಿ, ಮುಂದಿನ ಜನಾಂಗಕ್ಕೆ ನೆಮ್ಮದಿಯ ಬದುಕಿನ ದಾರಿ ತಿಳಿಸಿಕೊಟ್ಟಿದ್ದಾರೆ. ನಮ್ಮ ನಡೆಯೊಂದು ಪರಿ, ನುಡಿಯೊಂದು ಪರಿ ಆಗುತ್ತಿರುವದು ವಿಷಾದನೀಯ.ನಮ್ಮ ಬದುಕು ಇನ್ನೊಬ್ಬರಿಗೆ ಆದರ್ಶವಾಗಿರಬೇಕು.”ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದು ಬೆಳಗಾವಿಯ ಅರ್ ಎಲ್ ಎಸ್ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ  ಶಶಿಕಾಂತ ತಾರದಾಳೆ ನುಡಿದರು.

ಅವರು ಇಲ್ಲಿ  ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿಯವರು ನಗರದ ಮಹಾಂತ ಭವನದಲ್ಲಿ ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿ ಯಲ್ಲಿ ಶರಣರ ವಚನಗಳಲ್ಲಿ ಅರಿವು,ಆಚಾರ, ವಿಚಾರ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾ.ಲಿಂ.ಮಹಾಸಭಾದ ಅದ್ಯಕ್ಷರಾದ ಶರಣ ಬಸವರಾಜ ರೊಟ್ಟಿ ನ್ಯಾಯವಾದಿಗಳು ಅವರು ಸೆಪ್ಟೆಂಬರ್‌ ೧ ರಿಂದ ಅಕ್ಟೋಬರ್ ೫ ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬಸವಪರ ಮಠಾದೀಶರ ಒಕ್ಕೂಟ ಹಮ್ಮಿಕೊಂಡ ” ಬಸವ ಸಂಸ್ಕೃತಿಯ ಅಭಿಯಾನ” ಕುರಿತು ಮಾಹಿತಿ ನೀಡಿದ ಅವರು ದಿನಾಂಕ ೧೧/೦೯/೨೦೨೫ ರಂದು ಬೆಳಗಾವಿಯಲ್ಲಿ ಜರುಗಲಿರುವ ಬಸವ ರಥಯಾತ್ರೆಯಲ್ಲಿ ಸರ್ವ ಜನಾಂಗದವರು ಭಾಗವಹಿಸಿ ಅಭಿಯಾನವನ್ನು ಯಶಸ್ವಿ ಗೊಳಿಸಲು ಕೋರಿದರು.
ವೇದಿಕೆಯ ಮೇಲೆ ಪ್ರಸಾದ ದಾಸೋಹಿಗಳಾದ ಶರಣೆ ಗಂಗಮ್ಮ ಮತ್ತು ಶರಣ ಬಸಪ್ಪ ಗುರುವನ್ನವರ ಅವರು ಷಟ್ ಸ್ಥಲ್ ಧ್ವಜಾರೋಹಣ ನೆರವೇರಿಸಿದರು. ಜಾ.ಲಿಂ. ಮಹಾಸಭಾ ಜಿಲ್ಲಾ ಘಟಕದ ಅಶೋಕ ಮಳಗಲಿ ಅವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು.ಡಾ.ಅಡಿವೆಪ್ಪ ಇಟಗಿ ನಿರೂಪಣೆ ಮಾಡಿದರು.
ಶರಣ ಮುರಿಗೆಪ್ಪ ಬಾಳಿ ಜಿಲ್ಲಾ ಖಜಾಂಜಿ ಅವರು ಶರಣು ಸಮರ್ಪಣೆ ಮಾಡಿದರು.
ಎಸ್ ಜಿ. ಸಿದ್ನಾಳ,ಕಟ್ಟಿಮನಿ,ಶಂಕರ ಶೆಟ್ಟಿ,ಚಂದ್ರಪ್ಪ ಬೂದಿಹಾಳ, ಈರಣ್ಣ ಚಿನಗುಡಿ,ಅರವಿಂದ ಪರುಶೆಟ್ಟಿ,ಮಹಾನಂದಾ ಪರುಶೆಟ್ಟಿ,ಸುಜಾತಾ ಮತ್ತಿಕಟ್ಟಿ,ರತ್ನಾ ಬೆನಚಮರ್ಡಿ,ಕಾವೇರಿ ಕಿಲಾರಿ, ಸರಳಾ ಹೇರೆಕರ, ಕೆಂಪಣ್ಣ ರಾಮಾಪೂರಿ ದಂಪತಿ,ಸುಲೋಚನಾ ಮಠದ, ಮಹಾದೇವಿ ಬೂದಿಹಾಳ,ಶೋಬಾ ಶಿವಳ್ಳಿ, ಕರಡಿಮಠ, ಪ್ರೊ ವಿರುಪಾಕ್ಷಿ ದೊಡಮನಿ ಅಲ್ಲದೇ ವಿವಿದ ಬಡಾವಣೆಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!