This is the title of the web page
This is the title of the web page

Please assign a menu to the primary menu location under menu

Local News

ಜನವರಿ ನಂತರ ಬದಲಾವಣೆ ಪರ್ವ ಆರಂಭ : ಸತೀಶ್ ಜಾರಕಿಹೊಳಿ


ಬೆಳಗಾವಿ: ಹುಟ್ಟುಹಬ್ಬವನ್ನು ಪಕ್ಷದ ವತಿಯಿಂದ ಮಾಡುತ್ತಿಲ್ಲ. ಆದರೆ ವೈಯಕ್ತಿಕವಾಗಿ ಮಾಡುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಆಗಲ್ಲ ಎಂದು ಸಿದ್ದರಾಮೋತ್ಸವದ ಆಚರಣೆ ಬಗ್ಗೆ ‌ಕೆಪಿಸಿಸಿ ಕಾರ್ಯಾಧ್ಯಕ್ಷ ‌ಸತೀಶ್​ ಜಾರಕಿಹೊಳಿ‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿದ್ದಾಗ ವ್ಯಕ್ತಿ ಪೂಜೆ ಆಗಬಾರದು ಒಪ್ಪುತ್ತೇನೆ. ಹೊರಗಡೆ ಇದ್ದಾಗ ಎಲ್ಲಾ ಪಕ್ಷದಲ್ಲಿ ಪೂಜೆ ಆಗುತ್ತದೆ.ಪಕ್ಷದ ಹೊರಗಡೆ ವ್ಯಕ್ತಿ ಪೂಜೆ ಇರುತ್ತದೆ ಇದನ್ನು ಯಾರು ತಪ್ಪಿಸಲು ಆಗಲ್ಲ ಎಂದಿದ್ದಾರೆ.

ಇನ್ನು ಮುಂದಿನ ಚುನಾವಣೆಯಲ್ಲಿ ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸತೀಶ್​​ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಗೊಂದಲ್ಲ ಇಲ್ಲ. ಒಬ್ಬರು ಸ್ಥಳೀಯರಿಗೆ ಅವಕಾಶ ಇದೆ.

ಜನವರಿ ನಂತರ ಬದಲಾವಣೆ ಪರ್ವ ಆರಂಭವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ ಸ್ಥಾನ ಸಿಗಲಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಗೆಲುವಿನ ಸಾಧ್ಯತೆ ಇದೆ ಎಂದಿದ್ದಾರೆ.


Gadi Kannadiga

Leave a Reply