ಯಮಕನಮರಡಿ:- ಕಳೆದ ೧೫ ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಕುರಿತು ಕನ್ನಡಿ ಹಿಡಿದು ತೋರಿಸುವ ಅಗತ್ಯವಿಲ್ಲ. ವಿರೋಧಿಗಳಿಗೆ ಮಾಡಿರುವ ಅಭಿವೃದ್ದಿ ಕಾರ್ಯಗಳು ಕಣ್ಣಿಗೆ ಕಾಣುವುದಿಲ್ಲ ನನ್ನನ್ನು ಸೋಲಿಸುವುದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರ ದಿ. ೩೦ ರಂದು ಮಣಗುತ್ತಿ ಗ್ರಾಮದಲ್ಲಿ ೨೦೨೨-೨೩ ನೇ ಸಾಲಿನ ಲೆಕ್ಕಶಿರ್ಷಿಕೆ ೫೦:೫೪ ಯೋಜನೆಯಡಿಯಲ್ಲಿ ಮಂಜೂರಾದ ೪೦ ಲಕ್ಷರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಒಳಚರಂಡಿ £ರ್ಮಾಣ ಕಾಮಗಾರಿ ಮತ್ತು ೨೦೨೨-೨೩ನೇ ಸಾಲಿನ ತಾಲೂಕಾ ಪಂಚಾಯತ ೧೫ನೇ ಹಣಕಾಸು ಅನುದಾನದಡಿಯಲ್ಲಿ £ರ್ಮಿಸಲಾದ ಎರಡು ಅಂಗನವಾಡಿ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳ ಮೂಲಭೂತ ಸಮಸ್ಯೆಗಳನ್ನು ಸ್ಪಂದಿಸಿ ರಸ್ತೆ, ರೈತರಿಗೆ £Ãರಾವರಿ ಸೌಲಭ್ಯ, ಶಿಕ್ಷಣ ಮೊದಲಾದ ಅಭಿವೃದ್ದಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ಯುವಕರಿಗೆ ಉದ್ಯೋಗ ಸಮಸ್ಯೆ ಉಂಟಾಗಿದ್ದು, ಜನರು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತಿದ್ದು,ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದತ್ತ ವಾಲುತ್ತಿದ್ದಾರೆ. ಜನರ ಸುರಕ್ಷೆ ಮತ್ತು ಅಭಿವೃದ್ದಿ ಕಾರ್ಯಗಳಿಗಾಗಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕು ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬಾರದಿದ್ದರೂ ಮತದಾರರು ವಿಜಯಶಾಲಿಯಾಗಿ ಮಾಡಿದ್ದು ಇತಿಹಾಸವಾಗಿದೆ. ಈ ಬಾರಿ ಚುನಾವಣೆ ಯಾವ ರೀತಿ ಆಡುವದನ್ನು ನಮಗೆ ಗೊತ್ತಿದ್ದು, ಗೆಲ್ಲುವದಂತ್ತು £ಶ್ಚಿತ. ಅಧಿಕ ಮತಗಳಿಂದ ಗೆಲುವಿಗಾಗಿ ರಣತಂತ್ರವನ್ನು ರೂಪಿಸಲಾಗುತ್ತಿದೆ. ಬಿಜೆಪಿಯವರು ಸೋಲಿಸುವ ಮಾತನ್ನು ಬಿಟ್ಟು, ಅಭಿವೃದ್ದಿ ಕಾರ್ಯಗಳ ಕುರಿತು ಮಾತನಾಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಮಣಗುತ್ತಿ ಗ್ರಾಮದ ಕಾಂಗ್ರೇಸ್ ಮುಖಂಡರಾದ ಸುರೇಶ ಬೆಣ್ಣಿ ಮಾತನಾಡಿ ನನ್ನ ೨೨ ವರ್ಷ ರಾಜಕೀಯ ಜೀವನದಲ್ಲಿ ಇಷ್ಟೊಂದು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ಶಾಸಕರನ್ನು ಕಂಡಿಲ್ಲ. ಶಾಸಕರು ಗ್ರಾಮದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಈಗ ಚುನಾವಣೆ ಸಮೀಸುತ್ತಿದ್ದಂತೆ ಗ್ರಾಮಗಳಲ್ಲಿ ಬೊಂಬಾಯಿಮಿಟಾ ಮಾರಾಟ ಮಾಡುವರು ಬರುತ್ತಿದ್ದು, ಅವರ ಸುಳ್ಳು ಭರವಸೆಗಳಿಗೆ ಮರುಳಾಗದೆ ಯಮಕನಮರಡಿ ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಶಾಸಕರನ್ನು ಮತ್ತೊಮ್ಮೆ ಬೆಂಬಲಿಸಬೇಕೆಂದು ಹೇಳಿದರು. ಇನ್ನೋರ್ವ ಕಾಂಗ್ರೇಸ್ ಮುಖಂಡರು ಮಣಗುತ್ತಿ ಗ್ರಾ.ಪಂ. ಸದಸ್ಯ ಮಹಾ£ಂಗ ಶಿರಗುಪ್ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಣಗುತ್ತಿ ಗ್ರಾ.ಪಂ. ಅಧ್ಯಕ್ಷೆ ಶಾಲಾ ಸುರೇಶ ಬೆಣ್ಣಿ, ಜಿ.ಪಂ. ಮಾಜಿ ಸದಸ್ಯೆ ಮ£Ãಷಾ ಪಾಟೀಲ, ಹುಕ್ಕೇರಿ ಸಿಡಿಪಿಓ ಮಂಜುನಾಥ ಪರಸನ್ನವರ, ಎ.ಸಿ.ಡಿ.ಪಿ.ಒ ಹೊಳೆಪ್ಪಾ ಎಚ್. ಗಣ್ಯರಾದ ಪ್ರಮೋದ ರಗಶೆಟ್ಟಿ, ಈರಣ್ಣಾ ದೇಸಾಯಿ, ದಯಾನಂದ ಪಾಟೀಲ, ಕಿರಣಸಿಂಗ ರಜಪೂತ, ಮತ್ತು ಶರದ ಪಾಟೀಲ, ಜಿಂಜಾರ ಪಾಟೀಲ, ಉಜ್ವಲಾ ಪಾಟೀಲ, ರಮೇಶ ಸಕಾರಾಮ ಪಾಟೀಲ, ಡಿಕ್ಕು ಮೆಂಡೊಳ್ಳೆ, ಸತ್ತೆಪ್ಪಾ ಶಿವನಾಯ್ಕ, ಬಸವರಾಜ ಧರನಟ್ಟಿ, ಅರ್ಜುನ ಘಸ್ತಿ, ಕಾಡೇಶ ಮೇಕಳಿ, ಹಾಗೂ ಸಮಸ್ತ ಗ್ರಾಮಸ್ಥರು ಅಂಗನವಾಡಿ ಮೇಲ್ವಿಚಾರಕಿ ಶೋಬಾ ಗಂಗನ್ನವರ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸು£Ãಲ ಹುಕ್ಕೇರಿ ಸ್ವಾಗತಿಸಿ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ನನ್ನನ್ನು ಸೋಲಿಸುವುದು ಬಿಜೆಗಿರ ಕೇವಲ ಭ್ರಮೆ ; ಸತೀಶ ಜಾರಕಿಹೊಳಿ