ಸವದತ್ತಿ : ವಿಶ್ವಾಸ ವೈದ್ಯ ಅರಿಗೆ ಜನರ ಅಭುತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಮಾಜಮುಖಿ ಕೆಲಸಗಳ ಮೂಲಕ ಜನರ ಪ್ರೀತಿ ಗಳಿಸಿರುವ ಅವರ ಗೆಲುವು £ಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ. ಯರ್ಝರ್ವಿ, ಮಾಡಮಗೇರಿ ಗ್ರಾಮಗಳಿಗೆ ಚುನಾವಣೆ ಪ್ರಚಾರಾರ್ಥ ಭೇಟಿ £Ãಡಿ ಮಾತನಾಡಿದ ಅವರು ಜನ ಬಿಜೆಪಿ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ದಿನ£ತ್ಯದ ವಸ್ತುಗಳ ಬೆಲೆಯಲ್ಲಿ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡಬಲ್ ಇಂಜಿನ್ ಸರ್ಕಾರದ ೪೦% ಕಮಿಷನ್ ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಮಾತನಾಡಿ, ಕ್ಷೇತ್ರದಲ್ಲಿ ಜನ ಪ್ರೀತಿಯಿಂದ ಮನೆ ಮಗನಂತೆ ಸ್ವಾಗತಿಸುತ್ತಿದ್ದಾರೆ. ಇತಿಹಾಸ ಸೃಷ್ಟಿಸುವ ಗುರಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿಕ್ಷಣ ಹಾತೊರೆಯುತ್ತಿದ್ದೆನೆ. ಇದೇ ಪ್ರೀತಿ, ಆಶೀರ್ವಾದ ಸದಾ ನನ್ನ ಮೇಲಿರಲಿ. ಮೇ ೧೦ರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ನನ್ನನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿದರು.
ಈ ವೇಳೆ ಹೊನ್ನಪ್ಪ ಖಂಡ್ರೆ, ಛಾಯಪ್ಪ ಹುಂಡೇಕರ, ಲಕ್ಷ÷್ಮಣ ಕುಂಟಿರಾಪ್ಪಗೋಳ, £Ãಲಕಂಠ ಸಿದ್ದಬಸಣ್ಣವರ,ಸುರೇಶ ಬಡಗಿಗೌಡ್ರ,ಉಮೇಶ ಬಾಳಿ, ಮಹಾಂತೇಶ ಉಪ್ಪಿನ,ಶಂಕರ ಇಟ್ನಾಳ ಹಾಗೂ ಇ£್ನತರ ಪ್ರಮುಖರು ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.