ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ದೇವಲತ್ತಿ ವಲಯದ ಗಾಡಿಕೊಪ್ಪ ಮತ್ತು ಚಿಕ್ಕಹಟ್ಟಿಹೊಳಿ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶೌಚಾಲಯ ಬಳಕೆ, ಬಾಲ್ಯ ವಿವಾಹ, ಶುದ್ಧ ಕುಡಿಯುವ ನೀರಿನ ಬಳಕೆ, ಯೂಟ್ಯೂಬ್ ಚಾನಲ್ ಬಳಕೆ ಬಗ್ಗೆ ಬೀದಿ ನಾಟಕ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರು ಸತೀಶ್ ನಾಯ್ಕ ಸರ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ಮಹಿಳೆಯರು ಸಬಲೀಕರಣ ಹೊಂದಲು ಸಾಕಷ್ಟು ಮಾಹಿತಿಗಳ ಕೊರತೆ ಇದೆ ಆ ಮಾಹಿತಿಯನ್ನು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಪೂರೈಸಿ ಬದಲಾವಣೆಯಾಗಬೇಕೆಂದು ಕುಟುಂಬದಲ್ಲಿ ಅನುಷ್ಠಾನ ಮಾಡಬೇಕೆಂದು ಮಾಹಿತಿ ನೀಡಿದರು.
ಶಿಗ್ಗಾವಿ ಜೋಡಿ ಬಸವ ಕಲಾತಂಡದವರಿಂದ ಬೀದಿ ನಾಟಕ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳು ಗಣಪತಿ ನಾಯ್ಕ, ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಬಸವರಾಜ್ ಸೊಪ್ಪಿನಮಠ, ಒಕ್ಕೂಟದ ಅಧ್ಯಕ್ಷರಾದ ರುದ್ರವ್ವಾ ಹಟ್ಟಿಹೋಳಿ, ಊರಿನ ಗಣ್ಯರಾದ ಚಂದ್ರು ಆರೇರ್, ಪಾರೀಶ ಹಣಬರಟ್ಟಿ, ರಾಘವೇಂದ್ರ ಆರೇರ್, ದೇವೇಂದ್ರ ತಳವಾರ,ಸೇವಾ ಪ್ರತಿನಿಧಿ ಗಿರಿಜಾ ತಳವಾರ, ಹಾಗೂ ಕೇಂದ್ರದ ಸದಸ್ಯರು ಮತ್ತು ಸ್ವ ಸಹಾಯ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ವಲಯದ ಮೇಲ್ವಿಚಾರಕರಾದ ಯದುನಂದನ್ ಎಲ್ ಅವರು ಸ್ವಾಗತಿಸಿದರು ಸೇವಾ ಪ್ರತಿನಿಧಿ ಗಿರಿಜಾ ತಳವಾರ ವಂದಿಸಿದರು ಜ್ಞಾನವಿಕಾಸ ಸಮನ್ವಯಾಧಿಕಾರಿ ಸುರೇಖಾ ಕೋಳಿ ನಿರೂಪಣೆ ಮಾಡಿದರು.
Gadi Kannadiga > Local News > ಮಹಿಳಾ ಜ್ಞಾನ ವಿಕಾಸದಿಂದ ಜಾಗೃತಿ ಕಾರ್ಯ :ಸತೀಶ್ ನಾಯ್ಕ
ಮಹಿಳಾ ಜ್ಞಾನ ವಿಕಾಸದಿಂದ ಜಾಗೃತಿ ಕಾರ್ಯ :ಸತೀಶ್ ನಾಯ್ಕ
Suresh08/08/2023
posted on
