This is the title of the web page
This is the title of the web page

Please assign a menu to the primary menu location under menu

Local News

ಸಾವರ್ಕರ್ ತಂಟೆಗೆ ಬಂದ್ರೆ ಹುಷಾರ್: ಪ್ರಮೋದ ಮುತಾಲಿಕ


ಬೆಳಗಾವಿ : ವೀರ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖ ಕ್ರಾಂತಿಕಾರಿ. ಕಾಂಗ್ರೆಸ್ ಮತ್ತು ಮುಸ್ಲಿಮರ ವಿರೋಧಿಯಲ್ಲ, ಅವರ ಬಗ್ಗೆ ವಿವಾದಾತ್ಮಕವಾಗಿ ಅವರು ಮಾತನಾಡಿಯೂ ಇಲ್ಲ ಅಂತರ ಕ್ರಾಂತಿಕಾರಿಯ ಭಾವಚಿತ್ರ ಮುಟ್ಟಿದರೆ ಕೈ ಕತ್ತರಿಸಬೇಕಾಗುತ್ತದೆ ಎಚ್ಚರ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಗುಡುಗಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ವೀರ ಸಾವರಗಕರ ಒಬ್ಬ ಅಪ್ರತಿಮ ಕ್ರಾಂತಿಕಾರಿ, ಹೋರಾಟಗಾರ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಪಾಗಿಟ್ಟವರು ಎಂದು ಇತಿಹಾಸವೇ ಹೇಳುತ್ತದೆ. ದೇಶಕ್ಕಾಗಿ 23 ವರ್ಷ ಜೈಲುವಾಸ ಅನುಭವಿಸಿದ್ದಾರೆ. ಅವರಿಗೆ ಅಪಮಾನ ಮಾಡುವುದನ್ನು ದೇಶದ ಭಾರತೀಯರಾದ ನಾವು ಸಹನೆ ಮಾಡುವುದಿಲ್ಲ. ಯಾರೂ ಯಾವುದೇ ಸಂದರ್ಭದಲ್ಲಿ ಸಾವರ್ಕರ್ ಫೋಟೋ ಅವಮಾನ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನವರಿಗೆ ರಾಜೀವ ಗಾಂಧಿ, ಇಂದಿರಾ ಗಾಂಧಿ, ಮಹಾತ್ಮ ಗಾಂಧಿ, ರಾಹುಲ್ ಗಾಂಧಿ ಬಿಟ್ಟರೆ ಉಳಿದವರು ಹೋರಾಟಗಾರು ಅಲ್ಲ ಎಂದು ತಿಳಿದುಕೊಂಡಿದ್ದಾರೆ.  ಲಕ್ಷಾಂತರ ಜನರ ಪ್ರಾಣಾರ್ಪಣೆಯಿಂದ ಸ್ವಾತಂತ್ರ್ಯ  ಸಿಕ್ಕು 75 ವರ್ಷವಾಗಿದೆ. ಇಂದಿರಾ ಗಾಂಧಿ ಅವರು ಪ್ರಧಾನಿ ಇದ್ದಾಗ ಸಾವರ್ಕರ್ ಅವರು ಅಪ್ರತಿಮ ದೇಶಭಕ್ತ ಎಂದು ಪತ್ರ ಬರೆದಿದ್ದಾರೆ. ಅಂಚೆ ಚೀಟಿಯನ್ನು ಪೋಸ್ಟೆಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ.  ಸಿದ್ದರಾಮಯ್ಯನವರು, ಕಾಂಗ್ರೆಸ್ ಕಾರ್ಯಕರ್ತರಿಗೆ  ಬುದ್ಧಿ ಇಲ್ಲವಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮತ್ತು ಮುಸ್ಲಿಂರು ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದರು. ಅವಹೇಳನ ಮಾಡಿದರು. ಈ ಹಿನ್ನೆಲೆಯಲ್ಲಿ ಅಪ್ರತಿಮ ಕ್ರಾಂತಿಕಾರಿ ದೇಶ ಭಕ್ತ. 23 ವರ್ಷಗಳ ಕಾಲ ಜೈಲಿನಲ್ಲಿದ್ದ ಮಹಾನ್ ಪುರಷನಿಗೆ ಅವಮಾನ ಮಾಡುವುದನ್ನು ನಾವು ಸಹನೆ ಮಾಡದೆ, ಅದರ ವಿರುದ್ಧ ಅವರಿಗೆ ಉತ್ತರ ನೀಡಲು ಸಾವರ್ಕರ್ ಅವರ ಭಾವ ಚಿತ್ರವನ್ನು ಕರ್ನಾಟಕದ ಎಲ್ಲ ಸಾರ್ವಜನಿಕ ಗಣೇಶ ಮಂಡಳದಲ್ಲಿ ಅದನ್ನು ಪ್ರದರ್ಶನ ಮಾಡುವ ನಿಟ್ಟಿನಲ್ಲಿ 10 ಸಾವಿರ ಮಂಡಳಿಗೆ ಕೊಡುವ ನಿರ್ಧಾರ ಮಾಡಿದ್ದೇವೆ ಎಂದರು.


Gadi Kannadiga

Leave a Reply