India

ಮರಗಳ ಉಳಿಸಿ, ಪರಿಸರವನ್ನು ಉಳಿಸಿ, ಜೀವ ಉಳಿಸಿ;ತುಪ್ಪಿನ ಮಠದ ಶ್ರೀಗಳು

WhatsApp Group Join Now
Telegram Group Join Now

 

ಸೋಲಾಪುರ:-ಮಗುವಿನಂತೆ ಮರಗಳನ್ನು ಬೆಳೆಸಿರಿ, ಮರಗಳನ್ನು ಉಳಿಸಿ, ಪರಿಸರವನ್ನು ಉಳಿಸಿ, ಜೀವ ಉಳಿಸಿ ಎಂದು ತುಪ್ಪಿನ ಮಠದ ಶ್ರೀ ಡಾ.|| ಅಭಿನವ ಬಸವಲಿಂಗ ಮಹಾಸ್ವಾಮಿಗಳು ನುಡಿದರು.
 ಅವರು ೧೫ ರಂದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ನಾಗಣಸೂರದಲ್ಲಿ ೫ನೇಯ ಪಟ್ಟಾಬಿಷೇಕ ಮಹೊತ್ಸವದಲ್ಲಿ ಮಾತನಾಡುತ್ಸತಿದ್ದರು .
ಪಟ್ಟಾಬಿಷೇಕ ಮಹೊತ್ಸವ
ಸರಳ ರೀತಿಯಲ್ಲಿ, ಶ್ರೀ ಮಠದ ಬಕ್ತರ ಸಮ್ಮುಖದಲ್ಲಿ ನೆರೆವೇರಿತು.
ಮುಂದುವರಿದ ಡಾ.|| ಅಭಿನವ ಬಸವಲಿಂಗ ಮಹಾಸ್ವಾಮಿಗಳು ನೆರೆದಂತಹ ಭಕ್ತರಿಗೆ ವರ್ಷಕ್ಕೊಂದು ಮರ ನೆಟ್ಟು ಅವುಗಳನ್ನ ಮಗುವಿನಂತೆ ಬೆಳೆಸಿ ಅಂತ ಹೇಳಿದರು. ಯಾಕೆಂದರೆ ಬರುವ ದಿನಗಳಲ್ಲಿ ಬಿಸಿಲಿನ ತಾಪಮಾನವು ಹೆಚ್ಚುತ್ತಾ ಹೊಗುತ್ತೆ ವಿನಃ ಕಡಿಮೆ ಆಗುವುದಿಲ್ಲ ಆದ್ದರಿಂದ ಒಂದೊಂದು ಮರ ನೆಡುವುದರಿಂದ ನಮಗೆ ಮುಂಬರುವ ದಿನಗಳಲ್ಲಿ ಪ್ರಕೃತಿಯಿಂದ ಒಳ್ಳೆಯ ಹವಾಮಾನ, ಹಣ್ಣು ಹಂಪಲು, ಆಹಾರ ನೆರಳು ಬೆಕು ಅಂದರೆ ಒಂದು ಮರ ನೆಡಬೇಕು ಅಂತ ಹೇಳಿದರು. ಮತ್ತು ನಮ್ಮ ಜೀವನದ ಉಳಿವಿಗಾಗಿ ಮರಗಳು ಬಹಳ ಮುಖ್ಯ. ನಾವು ಮರಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಮರಗಳು ಇಲ್ಲದೆ ಮಾನವ ಜೀವನ ಅಸಾಧ್ಯ. ಆದರೆ, ಈ ದಿನಗಳಲ್ಲಿ ಜನರು ವಿಶ್ರಾಂತಿಗೆ ಮರಗಳನ್ನು ಕತ್ತರಿಸುತ್ತಿದ್ದಾರೆ, ಅದು ಮುಂದುವರಿದರೆ, ನಮ್ಮೊಂದಿಗೆ ಉಳಿದಿರುವ ಮರಗಳಿಲ್ಲದೇ ಒಂದು ದಿನ ಖಂಡಿತವಾಗಿ ನಾವು ನೆರಳಿಗಾಗಿ ನೆರಳುವ ಸಮಯ ಬಂದೆ ಬರುತ್ತದೆ ಎಂದು ಹೇಳಿದರು. ಮತ್ತು ಮರಗಳು ಧೂಳನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಪ್ರತಿದಿನ ಗಾಳಿಯಲ್ಲಿ ತೇಲುತ್ತಿರುವ ಕಣಗಳನ್ನು ಕಲುಷಿತಗೊಳಿಸುತ್ತವೆ. ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಮೂಲಕ, ಅವುಗಳು ನಮ್ಮನ್ನು ಉಸಿರಾಡುವುದನ್ನು ಮತ್ತು ಅವರೊಂದಿಗೆ ನಮಗೆ ಹಾನಿಯಾಗದಂತೆ ತಡೆಯುತ್ತವೆ. ಮರಗಳು ಕೇವಲ ಮಣ್ಣಿನ ಸವೆತವನ್ನು ನಿಲ್ಲಿಸಬಹುದು. ಆದ್ದರಿಂದ, ನಾವು ಮರಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಾವು ಒಂದನ್ನು ಕತ್ತರಿಸುವಾಗ ನಾವು ಮೂರು ಮರದ ಮೊಳಕೆ ಮಾಡಬೇಕು. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿಯ ದನಿ ಕಿವಿಗೆ ಕೆಳಲು ಸಿಗುತ್ತಿಲ್ಲ , ಬೇವಿನ ರೀತಿಯ ಔಷಧೀಯ ಮರಗಳು ನೊಡಲು ಉಳಿದಿಲ್ಲ,  ಮರಗಳು ತಾಯಿ ಭೂಮಿಯು ನಮಗೆ ಒದಗಿಸಿದ ಅತ್ಯುತ್ತಮ ವಸ್ತುಗಳಲಲ್ಲಿ ಒಂದಾಗಿದೆ. ಮರಗಳ ಅನುಕೂಲಗಳು ಮತ್ತು ಪ್ರಯೋಜನಗಳು ಶ್ರೀಗಳು ಮಾತನಾಡುವಾಗ ಭಾವುಕರಾಗಿ ಭಕ್ತರಿಗೆ ಹೇಳಿದರು. ಮತ್ತು ಅವುಗಳ ಪ್ರಯೋಜನೆಗಳು ಅನೇಕರಿಗೆ ತಿಳಿಸಿದರು.
.
WhatsApp Group Join Now
Telegram Group Join Now

Related Posts

No Content Available