This is the title of the web page
This is the title of the web page

Please assign a menu to the primary menu location under menu

State

ತಳಸಮುದಾಯಗಳ ಪರ ಗಟ್ಟಿ ಧ್ವನಿ ಸಾವಿತ್ರಿ ಬಾ ಫುಲೆ


ಲಿಂಗಸೂಗೂರು: ಸಾವಿತ್ರಿ ಬಾ ಫುಲೆಯವರು ವಿಧವೆಯರಿಗೆ ತಲೆ ಬೋಳಿಸುವ ಮತ್ತು ಬಾಲ್ಯವಿವಾಹದಂಥ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿ, ತಳ ಸಮುದಾಯಗಳ ಪರ ನಿಂತು ಸಮಾನತೆಗಾಗಿ ಹೋರಾಡಿದ ದಿಟ್ಟ ಮಹಿಳೆಯಾಗಿದ್ದಾರೆಂದು ಎಂದು ಪ್ರಾಧ್ಯಾಪಕ ಬಸವರಾಜ ಖೈರವಾಡಗಿ ಅಭಿಮತ ವ್ಯಕ್ತಪಡಿಸಿದರು.

ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಭಾರತದ ಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಕಾಲದಲ್ಲಿ ತರಬೇತಿ ಪಡೆದು ಸ್ತ್ರೀ ಸಂಕುಲಕ್ಕೆ ಶಿಕ್ಷಣದ ರಹದಾರಿ ತೋರಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ವೈ ಮಾತನಾಡಿ, ಸಮಾಜದಿಂದ ಅನೇಕ ಸಂಕಷ್ಟಗಳು, ಅವಮಾನಗಳು ಅನುಭವಿಸಿದರೂ ಎದೆಗುಂದದೆ ಮಹಿಳೆಯರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದ ಸಾವಿತ್ರಿ ಬಾ ಫುಲೆ ಅವರು ಜಿಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ, ಸಮಾಜ ಸುಧಾರಣೆಗಾಗಿಯೇ ಬದುಕು ಸವೆಸಿದ್ದರು ಎಂದು ಗುಣಗಾನ ಮಾಡಿದರು.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸರೋಜಿನಿದೇವಿ ಆರ್. ಪಾಟೀಲ ಸಾವಿತ್ರಿ ಬಾ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಾಧ್ಯಾಪಕರಾದ ಶ್ರೀಮತಿ ಶಾಂತಮ್ಮ ಪಾಟೀಲ, ಬೀರಪ್ಪ ಜಗ್ಗಲ್, ಅಕ್ಷತಾ, ನಿರುಪಾದಿ ಖೈರವಾಡಗಿ, ಅನಿಲಕುಮಾರ ಮಿಶ್ರಾ, ದುರ್ಗಾಸಿಂಗ್, ಶರಣಮ್ಮ ಪಾಟೀಲ್, ಸರಸ್ವತಿ ಕಂದಕೂರು ಇದ್ದರು.

ವರದಿಗಾರರು:-ವೀರಭದ್ರಯ್ಯ.ಬಿ.ಹಿರೇಮಠ.
ಲಿಂಗಸಗೂರು


Gadi Kannadiga

Leave a Reply