ಬೆಂಗಳೂರು: ಪೇಸಿಎಂ ಬಳಿಕ ಸೇ-ಸಿಎಂ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ವಚನಭ್ರಷ್ಟರಾದ ಬಿಜೆಪಿ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ. ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತಂತೆ ಇಂದು ಟ್ವಿಟ್ ಮಾಡಿದ್ದು, ಮ್ಯಾನೇಜ್ಮೆಂಟ್ ಸರ್ಕಾರ. ಬ್ಲಾಕ್ಮೇಲ್ ಸರ್ಕಾರ. 40% ಕಮಿಷನ್ ಸರ್ಕಾರ. ತಳ್ಳುವ ಸರ್ಕಾರ. ಸಿಡಿ ಸರ್ಕಾರ. ಇವೆಲ್ಲವೂ ಬಿಜೆಪಿಯವರೇ ತಮ್ಮ ಸರ್ಕಾರಕ್ಕೆ ನೀಡಿದ ಬಿರುದುಗಳು! ವಚನಭ್ರಷ್ಟತೆಯ ಬಗ್ಗೆ, ವೈಫಲ್ಯದ ಸತ್ಯದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಕಮಿಷನ್ ನೀಡಬೇಕೇ ಬಿಜೆಪಿ ಎಂದು ಒತ್ತಾಯಿಸಿದೆ.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ. ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು, ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ, ಯಾವ ಸಚಿವರೂ ಕೇಳಲಿಲ್ಲ. ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ ಎಂದು ಕೇಳಿದೆ.