This is the title of the web page
This is the title of the web page

Please assign a menu to the primary menu location under menu

State

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ:ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ


ಹೊಸಪೇಟೆ:ಎಸ್ಸಿ, ಎಸ್ಟಿ ಸಮಾಜಗಳ ಮೀಸಲಾತಿ
ಹೆಚ್ಚಳಕ್ಕೆ ಆಗ್ರಹಿಸಿ
ವಿಜಯನಗರ ಜಿಲ್ಲೆ ಸೇರಿದಂತೆ
ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿ
ಕಚೇರಿಗಳಿಗೆ ಜುಲೈ 11ರಂದು
ಮುತ್ತಿಗೆ ಹಾಕಲಾಗುವುದು
ಎಂದು ಹೋರಾಟದ ಸಂಚಾಲಕರಾದ
ಅಂಬಣ್ಣ ಅರೋಲಿಕರ್, ಬಿ.ಎಸ್.
ಜಂಬಯ್ಯ ನಾಯಕ ತಿಳಿಸಿದರು.
ನಗರದ ಶ್ರೀಪುಣ್ಯಾನಂದಪುರಿ
ಕಲ್ಯಾಣ ಮಂಟಪದಲ್ಲಿ ಶನಿವಾರ
ನಡೆದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು, ನ್ಯಾ.
ನಾಗಮೋಹನದಾಸ ವರದಿ
ಅನ್ವಯ ಎಸ್ಸಿಗೆ ಶೇ.17 ಮತ್ತು
ಎಸ್ಟಿಗೆ ಶೇ.7ಕ್ಕೆ ಮೀಸಲಾತಿ

ಹೆಚ್ಚಳ ಮಾಡಬೇಕು ಎಂದು
ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ
ಗುರುಪೀಠದ
ಶ್ರೀಪ್ರಸನ್ನಾನಂದಪುರಿ
ಸ್ವಾಮೀಜಿಯವರು ಬೆಂಗಳೂರಿನ
ಫ್ರೀಡಂ ಪಾರ್ಕ್‍ನಲ್ಲಿ
ನಡೆಸುತ್ತಿರುವ ಪ್ರತಿಭಟನೆ
143ನೇ ದಿನಕ್ಕೆ ಕಾಲಿಟ್ಟಿದೆ.
ಹೀಗಿದ್ದರೂ ರಾಜ್ಯ ಸರ್ಕಾರ
ಬಗ್ಗುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿ
ಕಚೇರಿಗಳಿಗೆ ಮುತ್ತಿಗೆ
ಹಾಕಲಾಗುವುದು. ಜತೆಗೆ
ಜು.12ರಿಂದ ಶಾಸಕರು, ಸಚಿವರ
ಕಾರ್ಯಕ್ರಮಗಳ ಬಳಿ
ಜನಪ್ರತಿನಿಧಿಗಳಿಗೆ ಘೇರಾವ್
ಹಾಕಲಾಗುವುದು. ಸರ್ಕಾರಿ
ಕಾರ್ಯಕ್ರಮಗಳ ಬಳಿಯೂ
ಘೇರಾವ್ ಹಾಕಲಾಗುವುದು.
ಭೂಮಿಪೂಜೆಗೂ ಅವಕಾಶ
ನೀಡಲಾಗುವುದಿಲ್ಲ. ನಮ್ಮ

ಹಕ್ಕು ನಮಗೆ ನೀಡಬೇಕು.
ನ್ಯಾ. ನಾಗಮೋಹನದಾಸ ವರದಿ
ಅನ್ವಯ ಜನಸಂಖ್ಯೆಗೆ
ಅನುಗುಣವಾಗಿ ಉದ್ಯೋಗ ಹಾಗು
ಶಿಕ್ಷಣಕ್ಕೆ ಮೀಸಲಾತಿ
ಹೆಚ್ಚಳಮಾಡಬೇಕು ಎಂದು
ಆಗ್ರಹಿಸಿದರು.
ಹೋರಾಟದ ಸಂಚಾಲಕ ಮರಡಿ
ಜಂಬಯ್ಯ ನಾಯಕ ಮಾತನಾಡಿ,
ಏಪ್ರಿಲ್ 17ರಂದು ನಡೆದ
ಹೋರಾಟದ ವೇಳೆ ಸಾರಿಗೆ ಸಚಿವ ಬಿ.
ಶ್ರೀರಾಮುಲು, ಪ್ರವಾಸೋದ್ಯಮ
ಸಚಿವ ಆನಂದ್ ಸಿಂಗ್ ಅವರು
ಹೋರಾಟಗಾರರ ಹಾದಿ ತಪ್ಪಿಸಿದ್ದಾರೆ.
ಒಂದು ತಿಂಗಳೊಳಗೆ ನ್ಯಾ.
ಸುಭಾಷ್ ಆಡಿ ಆಯೋಗದ ಕುರಿತು
ನಿರ್ಧರಿಸಲಾಗುವುದು ಎಂದು
ಹೇಳಿದ್ದವರು ಈಗ ಗಪ್‍ಚುಪ್
ಆಗಿದ್ದಾರೆ. ಹಾಗಾಗಿ ಶ್ರೀರಾಮುಲು
ಅವರ ಮನೆ ಎದುರು ಕೂಡ

ಜು.3ರಂದು ಪ್ರತಿಭಟನೆ
ನಡೆಸಲಾಗುವುದು ಎಂದು
ತಿಳಿಸಿದರು.
ಮುಖಂಡರಾದ ವೀರಸ್ವಾಮಿ,
ಸೋಮಶೇಖರ ಬಣ್ಣದಮನೆ, ಡಿಸ್
ಮಂಜುನಾಥ, ಸಣ್ಣಮಾರೆಪ್ಪ,
ಮಾರೆಣ್ಣ, ಎಸ್.ಎಸ್. ಚಂದ್ರಶೇಖರ
ಮತ್ತಿತರರಿದ್ದರು.


Gadi Kannadiga

Leave a Reply