This is the title of the web page
This is the title of the web page

Please assign a menu to the primary menu location under menu

Local News

ಸೈನಿಕ ತರಬೇತಿ ಶಾಲೆಗೆ ಎಸ್‍ಸಿ.ಎಸ್‍ಟಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ


ಬೆಳಗಾವಿ :  2022-23ನೇ ಸಾಲಿನ ಬೆಳಗಾವಿ ನಗರದ ಸದಾಶಿವ ನಗರದಲ್ಲಿ ನಡೆಯುತ್ತಿರುವ ಸೈನಿಕ ತರಬೇತಿ ಶಾಲೆಯಲ್ಲಿ ಸೈನಿಕ ಶಾಲೆ ವಿಜಾಪೂರ(ವಿಜಯಪೂರ)ದಲ್ಲಿ ಪ್ರವೇಶಕ್ಕಾಗಿ ಪರೀಕ್ಷಾ ಪೂರ್ವ ತರಬೇತಿ ನೀಡಲು ಏಪ್ರಿಲ್ 01 2010 ರಿಂದ ಮಾರ್ಚ್ 31 2012ರೊಳಗೆ ಜನ್ಮ ಪಡೆದಿರುವ ಹಾಗೂ ವಾರ್ಷಿಕ ವರಮಾನ 2 ಲಕ್ಷ 50 ಸಾವಿರ ಒಳಗಿರುವ ಮತ್ತು 2022-23ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಪ್ರತಿಭಾವಂತ ಗಂಡು ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಗೆ ಆಯ್ಕೆಯಾಗಿ ಪ್ರವೇಶ ಪಡೆದ ವಿಧ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ, ಉಚಿತವಾದ ಕಲಿಕಾ ಸಾಮಗ್ರಿ ಹಾಗೂ ಶುಚಿ ಸಂಭ್ರಮ ಕಿಟ್ ನೀಡಲಾಗುವುದು. ಹೊದಿಕೆ ಸೌಲಭ್ಯ ಮತ್ತು ಶೂ ಸಾಕ್ಸ ವಿತರಣೆ ಸೇರಿದಂತೆ ಇನ್ನೀತರ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು.

ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಏಪ್ರಿಲ್ 24 2022ರಿಂದ ಮೇ 16 2022ರೊಳಗಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಮೇ 20 2022ರೊಳಗಾಗಿ ಸಂಜೆ 5 ಗಂಟೆಯೊಳಗೆ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು/ಜಂಟಿ ನಿರ್ದೇಶಕರು ಕಚೇರಿಗೆ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply