ಹೊಸಪೇಟೆ(ವಿಜಯನಗರ),ಆ.೨೧: ೨೦೨೩-೨೪ನೇ ಸಾಲಿನ ವಿಜಯನಗರ ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳು hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅ.೧೦ರ ಒಳಗಾಗಿ ಅರ್ಜಿ ಸಲ್ಲಿಸಿ, ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಆರ್‌ಡಬ್ಲೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯ ಯು.ಆರ್.ಡಬ್ಲೂö್ಯ ಹಾಗೂ ತಾಲ್ಲೂಕ ಪಂಚಾಯತಿಯ ಎಮ್‌ಆರ್‌ಡಬ್ಲೂö್ಯಗಳಿಗೆ ಸಲ್ಲಿಸಬೇಕು.
ಮಾಹಿತಿಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೊಸಪೇಟೆ ಮೊ.೯೯೪೫೨೫೨೯೯೧, ಹೂವಿನಹಡಗಲಿ ಮೊ.೯೯೦೦೮೯೦೪೦೩, ಹಗರಿಬೊಮ್ಮನಹಳ್ಳಿ ಮೊ.೯೭೪೧೧೮೫೯೨೪, ಕೂಡ್ಲಿಗಿ ಮೊ.೯೭೩೧೭೪೭೮೩೨ ಹಾಗೂ ಹರಪನಹಳ್ಳಿ ಮೊ.೯೧೧೦೨೪೬೪೫೫ ಸಂಪರ್ಕಿಸಬಹುದು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂ.೦೮೩೯೨-೨೬೭೮೮೬ ಮೂಲಕ ಸಂಪರ್ಕಿಸಬಹುದು.
Gadi Kannadiga > State > ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ
ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ
Suresh21/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023