ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಕಿಲಾರಹಟ್ಟಿಯ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ದಿನಾಂಕ 10-07-2023 ರಂದು ಶಾಲಾ ಸಂಸತ್ ಚುನಾವಣೆ ನಡೆಯಿತು. ಈ ಸದರಿ ಚುನಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸುವ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಖಾತೆಗಳನ್ನು ಹಂಚಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಖ್ಯೋಪಾಧ್ಯಾಯರಾದ ಶ್ರೀ ರಾಮೇಶ್ವರ ವಿ. ಡಾಣಿ ಅವರು ಪ್ರಮಾಣವಚನ ಬೋಧಿಸಿದರು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಮಾನನಗೌಡ ಕೇರಿಹಾಳ, ಮುಖ್ಯೋಪಾಧ್ಯಾಯರಾದ ಶ್ರೀಯುತ ರಾಮೇಶ್ವರ ವಿ. ಡಾಣಿ, ಸಾಕ್ಷರತಾ ಸಂಘದ ಸಂಚಾಲಕರಾದಂತಹ ಶ್ರೀ ರಮೇಶ ಹುನಗುಂದ, ಶಿಕ್ಷಕರಾದ ಶ್ರೀ ಪ್ರಲ್ಹಾದ್ ಜಾಧವ್, ದೈಹಿಕ ಶಿಕ್ಷಕರಾದ ಶ್ರೀ ಪಿಡ್ಡನಗೌಡ ಹಳೆಗೌಡ್ರು, ಶಿಕ್ಷಕಿಯರಾದ ಶ್ರೀಮತಿ ದೊಡ್ಡಮ್ಮ ಪಾಟೀಲ್ ಹಾಗೂ ಕುಮಾರಿ ಶಾಹಿನ್ ರವರು ಅಭಿನಂದಿಸಿದರು.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ಹಂಚಿಕೆಯಾದ ಖಾತೆಗಳ ವಿವರ
ಹನುಮಂತಿ ತೆಮ್ಮಿನಾಳ (ಪ್ರಧಾನ ಮಂತ್ರಿ) ರಾಹುಲ್ ಜಾದವ್ (ಉಪ ಪ್ರಧಾನಮಂತ್ರಿ) ಶಿಲ್ಪ ಕಳಮಳ್ಳಿ (ಸಾಂಸ್ಕೃತಿಕ ಮಂತ್ರಿ) ಅಂಜಪ್ಪ ಕುಶೇಕಾಳ (ಕ್ರೀಡಾ ಮಂತ್ರಿ) ಭಾಗ್ಯಮ್ಮ ಸಂಕನಾಳ (ಶಿಕ್ಷಣ ಮತ್ತು ವಾರ್ತಾ ಮಂತ್ರಿ) ಮನೋಜ್ ಚಿನ್ನರಾಠೋಡ್ (ಪ್ರವಾಸ ಮಂತ್ರಿ) ಯಶೋಧ ಚಿನ್ನರಾಠೋಡ್ (ಸ್ವಚ್ಛತಾ ಮಂತ್ರಿ) ಶರಣಬಸವ ಘಟ್ಟೇರ್ (ತೋಟಗಾರಿಕೆ ಮತ್ತು ನೀರಾವರಿ ಮಂತ್ರಿ) ದ್ಯಾಮಣ್ಣ ಕುಶೇಕಾಳ (ಗ್ರಂಥಾಲಯ ಮಂತ್ರಿ) ಸಂಜನಾ ಬೋಗಾಪುರ (ಆಹಾರ ಮತ್ತು ಆರೋಗ್ಯ ಮಂತ್ರಿ) ಪಾರ್ವತಿ ಬಿಂಗಿ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ).ಈ ರೀತಿ ಆಯ್ಕೆ ಮಾಡಲಾಗಿದೆ ಎಂದು ಶಾಲಾ ಮುಖ್ಯೋಪಾದ್ಯಾಯರು,ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ