This is the title of the web page
This is the title of the web page

Please assign a menu to the primary menu location under menu

Local News

ಮಾಸ್ತಮರಡಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ


ಬೆಳಗಾವಿ ದಿ ೦೪:-ತಾಲೂಕಿನ ಮಾಸ್ತಮರಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಯಲ್ಲಿಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು
ತಾಲೂಕು ವಲಯದ ಬಿ ಆರ್ ಸಿ ಸಮನ್ವಯಾಧಿಕಾರಿ ಗಳಾದಡಾ, ಎಮ್ ಎಸ್ ಮೇದಾರ ಸರ್ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ಮಹತ್ವವಿವರಿಸಿದರು,ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತೆ ವಿಜ್ಞಾನ ಶಿಕ್ಷಕರಿಗೆ ಕರೆ £Ãಡಿದರು, ವಿಜ್ಞಾನ ವಿಷಯದ ಪ್ರಯೋಗ ಮಾಡಿದ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು
ಈ ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕಿನ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶಗೌಡ್ರು ಪಾಟೀಲ, ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯೊ÷್ಯಪಾದ್ಯಾಯರಾದ ಬಸವರಾಜ ಸುಣಗಾರ ರವರು ಭಾಗವಹಿಸಿ ಮಾತನಾಡಿ ವಿಜ್ಞಾನವಸ್ತುಗಳ ಪ್ರದರ್ಶನ ಏರ್ಪಡಿಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರೌಢಶಾಲೆಯ ಕಾರ್ಯ ಶ್ಲಾಘ£Ãಯ ಎಂದರು,ಸರಕಾರಿ ಶಾಲೆಗಳು ಸರ್ವ ಸೌಲಭ್ಯ ಹೊಂದಲು ಸಮುದಾಯದ ಹಾಗೂ ದಾ£ಗಳ ನೆರವು ಅಗತ್ಯ ವೆಂದರುಶಾಲೆಯ ಚಿತ್ರಕಲಾ ಶಿಕ್ಷಕರಾದ ಪ್ರವೀಣಕುಮಾರ ಅಂಗಡಿ ಸೇರಿದಂತೆ ಪ್ರೌಢ ಶಾಲೆಯ ಹಿರಿಯ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ದೇಣಿಗೆ ದೊರಕಲು ಸಹಕಾರ ಮಾಡಿದ ಪ್ರಾಥಮಿಕ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ವಿಜ್ಞಾನ ಶಿಕ್ಷಕರಾದ ಬಸನಗೌಡ ಆರ್ ಪಾಟೀಲ ರನ್ನು ಸನ್ಮಾ£ಸಲಾಯಿತು
ಅಮೇರಿಕಾದಲ್ಲಿ ಇಂಜಿ£ಯರ್ ಯಾಗಿ ಕಾರ್ಯ£ರ್ವಹಣೆ ಮಾಡುತ್ತಿರುವ ಹಾಲಗಿಮರಡಿ ಗ್ರಾಮದ ಪಾಟೀಲ ಬಂಧು ಗಳು ಜಮ್ಮಾ ಜಮ್ಮಾ ಫೌಂಡೇಶನ್ ಮಾಡಿಕೊಂಡು ತಾವು ಕಲಿತ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿ ಗಳನ್ನು ದೇಣಿಗೆ ರೂಪದಲ್ಲಿ £Ãಡುತ್ತಿದ್ದು,ಸದ್ಯ ಮಾಸ್ತಮರಡಿಯ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿಗಳ ವಿಜ್ಞಾನ ಪ್ರಯೋಗದ ಉಪಕರಣ ಗಳನ್ನು ದೇಣಿಗೆ £Ãಡಿದರು, ಅವುಗಳನ್ನು ವಿಜ್ಞಾನ ವಿಷಯದ ಶಿಕ್ಷಕಿಯರಾದ ಶ್ರೀಮತಿ ವಿಜಯಲತಾ ಶಿವಾಜಿರಾವ ಸಾಗರ ರವರು ಸ್ವೀಕರಿಸಿ ಅವುಗಳ ವಿವರಣೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಶಾಲಾ ವಿದ್ಯಾರ್ಥಿಗಳು ವಿಜ್ಞಾನದ ಪ್ರಯೋಗ ಮಾಡಿ ಅವುಗಳ ಉಪಯೋಗ ವಿವರಿಸಿದರು ಪ್ರೌಢಶಾಲೆಮುಖ್ಯೊ÷್ಯಪಾದ್ಯಾಯರಾದ ಶಂಕರ ಕೊಟ್ರಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು


Gadi Kannadiga

Leave a Reply