ಬೆಳಗಾವಿ: ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಹಿನ್ನೆಲೆ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ 144 ಕಲಂ ಅಡಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಬೆಳಗಾವಿಯ ಜ್ಯೋತಿ ಪದವಿ ಪೂರ್ವ ಕಾಲೇಜು, ಬೆನೆನ್ ಸ್ಮಿಥ ಪದವಿ ಪೂರ್ವ ಕಾಲೇಜು, ಆರ್ ಎಲ್ ಎಸ್ ಪದವಿ ಪೂರ್ವ ಕಾಲೇಜು, ಲಿಂಗರಾಜ ಪದವಿ ಪೂರ್ವ ಕಾಲೇಜು, ಜಿ ಎ ಪದವಿ ಪೂರ್ವ ಕಾಲೇಜು, ಆರ್ ಪಿ ಡಿ ಪದವಿ ಪೂರ್ವ ಕಾಲೇಜು, ಜಿ ಎಸ್ ಎಸ್ ಪದವಿ ಪೂರ್ವ ಕಾಲೇಜು, ಗೋಗಟೆ ಪದವಿ ಪೂರ್ವ ಕಾಲೇಜು, ಗೋಮಟೆಶ ಪದವಿ ಪೂರ್ವ ಕಾಲೇಜು, ಇಸ್ಲಾಮಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು, ಸರ್ಕಾರಿ ಚಿಂತಾಮಣರಾವ ಪದವಿ ಪೂರ್ವ ಕಾಲೇಜು, ಸರ್ಕಾರಿ ಸರಸ್ವತಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ವಡಗಾವಿ, ಆದರ್ಶ ಪದವಿ ಪೂರ್ವ ಕಾಲೇಜು ವಡಗಾವಿ, ಮರಾಠಾ ಮಂಡಳ ಪದವಿ ಪೂರ್ವ ಕಾಲೇಜು, ಭರತೇಶ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಕೆ ಕೆ ಕೊಪ್ಪ, ಜೆ ಎ ಸವದತ್ತಿ ಪದವಿ ಪೂರ್ವ ಕಾಲೇಜು ನೆಹರು ನಗರ, ಎಸ್ ಎಸ್ ಪದವಿ ಪೂರ್ವ ಕಾಲೇಜು ಶಿವಬಸವನಗರ, ಎಸ್ ಜಿ ವ್ಹಿ ಎಸ್ ಮಹೇಶ ಪದವಿ ಪೂರ್ವ ಕಾಲೇಜು ಮಾಳ ಮಾರುತಿ ಬಡಾವಣೆ, ಸರ್ಕಾರಿ ಸರದಾರ್ಸ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ ಯಾವುದೇ ರೀತಿಯ ಮಾರಕ, ಸ್ಫೋಟಕ ವಸ್ತುಗಳನ್ನು ಹೊತ್ತೊಯ್ಯಲು, ಮೆರವಣ ಗೆ ನಡೆಸಲು ಅನುಮತಿ ಇಲ್ಲ. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಬೋರಲಿಂಗಯ್ಯ ಎಂ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.