ಬೆಳಗಾವಿ ೧೭- ರಂಗಸಂಪದ ಬೆಳಗಾವಿಯವರಿಂದ ರಾಜೇಂದ್ರ ಕಾರಂತರ ರಚಿಸಿದ ‘ಮರಣ ಮೃದಂಗ’ ನಾಟಕ ಪ್ರದರ್ಶನದ ಪೂರ್ವ ತಯಾರಿ ನಡೆದಿದೆ. ಡಾ. ಅರವಿಂದ ಕುಲಕರ್ಣಿ ನಿರ್ದೇಶಿಸಲಿದ್ದು ಈ ನಾಟಕದಲ್ಲಿ ಪಾತ್ರ ಮಾಡ ಬಯಸುವ ಕಲಾವಿದರು ಇದೇ ದಿ. ೨೦ ರವಿವಾರ ಬೆಳಿಗ್ಗೆ ಸರಿಯಾಗಿ ೧೧.೩೦ ಗಂಟೆಗೆ ಚನ್ನಮ್ಮ ವೃತ್ತ ಹತ್ತಿರವಿರುವ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಆಡಿಷನ್ ಏರ್ಪಡಿಸಿದ್ದಾರೆ. ಆಸಕ್ತ ಕಲಾವಿದರು ಹೆಚ್ಚಿನ ವಿವರಗಳಿಗಾಗಿ ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷರು ರಂಗಸಂಪದ ಬೆಳಗಾವಿ ಇವರನ್ನು ಮೊ. ಸಂಖ್ಯೆ ೯೮೪೫೦೨೫೬೩೮ ಗೆ ಕರೆಮಾಡಿ ಸಂಪರ್ಕಿಸಬಹುದೆಂದು ರಂಗಸಂಪದದ ಕಾರ್ಯದರ್ಶಿ ಪ್ರಸಾದ ಕಾರಜೋಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ನಾಟಕಕ್ಕಾಗಿ ಕಲಾವಿದರ ಆಯ್ಕೆ