This is the title of the web page
This is the title of the web page

Please assign a menu to the primary menu location under menu

Local News

ಹಡಪದ ಸಮಾಜದ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ


ಬೆಳಗಾವಿ ದಿ 28:-ತ್ತೀಚೆಗೆ  ಬೆಳಗಾವಿ ಜಿಲ್ಲೆಯ ಹಡಪದ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯ ಸಲುವಾಗಿ ಸವದತ್ತಿ ತಾಲೂಕು ಯರಗಟ್ಟಿಯಲ್ಲಿ ಜಿಲ್ಲಾ ಸಮಾಜದ ನೌಕರರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ  ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ  ಗೋಕಾಕದ ಹಿರಿಯ ಸಾಹಿತಿ ಡಾಸಿ ಕೆ ನಾವಲಗಿ ಅಧ್ಯಕ್ಷರಾಗಿ  ಕುಮಾರ ಮುತ್ತಪ್ಪ ನಾವಿ ಶಿಕ್ಷಕರುಉಪಾಧ್ಯಕ್ಷರಾಗಿ  ಸುರೇಶ ನಾವಿ ಶಿಕ್ಷಕರು, ಶ್ರೀಮತಿ ಗಿರಿಜಾ ಹಿಪ್ಪರಗಿ ಶಿಕ್ಷಕಿಯರು,ಪ್ರಧಾನ ಕಾರ್ಯದರ್ಶಿಗಳಾಗಿ  ಮಾರುತಿ ಹಡಪದ ಶಿಕ್ಷಕರು, ಖಜಾಂಚಿಗಳಾಗಿ ವೀರಭದ್ರ ಯರನಾಳ ಆರೋಗ್ಯ ಇಲಾಖೆ   ಸಂಘಟನಾ ಕಾರ್ಯದರ್ಶಿಗಳಾಗಿ  ಶ್ರೀಶೈಲ್ ನಾವಿ ಮತ್ತು ರವೀಂದ್ರ ನಾವಿ,ಸಹ ಕಾರ್ಯದರ್ಶಿಗಳಾಗಿ ಚನ್ನಬಸಪ್ಪ ನಾವಿ ಮತ್ತು ಶರಣಪ್ಪ ಹಡಪದ ಕಾನೂನು ಸಲಹೆಗಾರಾಗಿ  ಮನೋಹರ ಕೋರೆಉಪ ನೋಂದಣಿ ಅಧಿಕಾರಿಗಳು  ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಹಡಪದ ಮಾಧ್ಯಮ ವಕ್ತಾರರಾಗಿ ಧನಂಜಯ ಹಡಪದ ಪತ್ರಕರ್ತರು ಸಲಹಾ ಸಮಿತಿಯಲ್ಲಿ  ಬಿ ಬಿ ವಂದಾಲ ನಿವೃತ್ತ ಪ್ರಾಂಶುಪಾಲರು,ಶಿವಪುತ್ರ ನಾವಲಗಿನಿವೃತ್ತ ಪ್ರಾಂಶುಪಾಲರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಸ್ತುತ ಸಭೆಯಲ್ಲಿ ಸಂಘ ಕೈಗೊಳ್ಳಬೇಕಾಗಿರುವ ಹಲವಾರು ಕಾರ್ಯಚಟುವಟಿಕೆಗಳು ಮತ್ತು ಹಡಪದ ಸಮಾಜದ ಬಡ ಮತ್ತು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅಂತವರನ್ನು ಪ್ರೋತ್ಸಾಹಿಸಿ ಸನ್ಮಾನಿಸಿ ಬಡತನ ರೇಖೆಗಿಂತ ಕೆಳಗಿನ ಮಟ್ಟದ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಮುಂತಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿರ್ಧಾರವನ್ನು ಸಂಘದ ಅಧ್ಯಕ್ಷರು ಮತ್ತು ಉಳಿದ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಹಿರಿಯರ ಸಮ್ಮುಖದಲ್ಲಿ ಕೈಗೊಳ್ಳಲಾಯಿತು.


Gadi Kannadiga

Leave a Reply