ಕುಷ್ಟಗಿ:- ಜ.3 ತಾಲೂಕಿನ ಕಂದಕೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ ಡಿ ಎಮ್ ಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಪಂಪಣ್ಣ ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಹನುಮಂತ ಆರೇರ್, ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಬಡಿಗೇರ, ಸದಸ್ಯರಾಗಿ ಮಾರುತಿ ಹಲಗಿ, ಹನುಮಂತ ತಳವಾರ, ವಿರುಪಾಕ್ಷಯ್ಯ ತಾವರಗೇರಾ, ನಿಂಗಪ್ಪ ಕಾಮನೂರು ,ಶರಣಯ್ಯ ಸಂಕೀನ, ಶರಣಪ್ಪ ಕುರ್ನಾಳ, ಹನುಮಂತ ಸಂಗನಾಳ, ಶಿವಕುಮಾರ ಚೆನ್ನಿ, ರೇಣುಕಮ್ಮ ಚೆಲುವಾದಿ, ರತ್ನಮ್ಮ ದಾಸರ್, ಶಿವಮ್ಮ ಗೋಪಾಳಿ, ಶಾಂತಾ ಗುಮಗೇರಾ, ಮಂಜುಳಾ ಕುಂಬಾರ್,ಶಾರದಾ ಮಡಿವಾಳರ್, ಹುಸೇನಬೀ ಪಿಂಜಾರ, ಇವರುಗಳು ನೂತನ ಎಸ್ ಡಿ ಎಮ್ ಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ
ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಂದಕೂರಪ್ಪ ವಾಲ್ಮೀಕಿ,ಶರಣಪ್ಪ ಗೋಪಾಳಿ, ಶರಬಯ್ಯ ಸಂಕೀನ್,ಚಂದ್ರಹಾಸ,ಭಾವಿಕಟ್ಟಿ,ಬಸವರಾಜ ಕುರ್ನಾಳ,ಬಸವರಾಜ ಗುನ್ನಾಳ,ಭೀಮನಗೌಡ ಪಾಟೀಲ್,ಶರಣಯ್ಯ ಅಬ್ಬಿಗೇರಿ,ಸಲೀಂಸಾಬ ಟೆಂಗುಂಟಿ,ಆಂಜನೇಯ ಹಾದಿಮನಿ ಸೇರಿದಂತೆ ಕಂದಕೂರ ಗ್ರಾಮದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಶೇಖರ್ ಎಸ್ ಗೊರೇಬಾಳ
ಕುಷ್ಟಗಿ.