This is the title of the web page
This is the title of the web page

Please assign a menu to the primary menu location under menu

Local News

ಅಮೃತ ಮಹೋತ್ಸವ ಆಚರಣೆ ಮತ್ತು ಡಾ. ವೀಣಾ ಕಲ್ಮಠ ಅವರ “ಜೀವದೊಡತಿಯ ಗೈರುಹಾಜರಿಯಲ್ಲಿ” ಕವನ ಸಂಕಲನ ಬಿಡುಗಡೆ


ಬಾಗಲಕೋಟೆ: ಆತ್ಮ ಸ್ವಾತಂತ್ರ‍್ಯದಿಂದ ನಿಜವಾದ ಸ್ವಾತಂತ್ರ‍್ಯ ಅನುಭವಿಸಲು ಸಾಧ್ಯ. ಭಾರತದ ಅಭಿವೃದ್ಧಿ ಮತ್ತು ಆತ್ಮ ವಿಶ್ವಾಸ ಬೆಳೆಸುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಪ್ರಮುಖವಾದದ್ದು. ಧರ್ಮ ಎನ್ನುವುದು ಒಡೆದು ಆಳುವುದಕ್ಕಾಗಿ ಇಲ್ಲ. ಅದು ಸಮಾಜ ಸೇವೆ ಮತ್ತು ಜನರಲ್ಲಿ ಅರಿವು ಮೂಡಿಸುವ ಒಂದು ಅಸ್ತ್ರ ಎಂದು ಜಗತ್ತಿಗೆ ಸಾರಿದ್ದಾರೆಂದು ಹಿರಿಯ ವಿದ್ವಾಂಸಕರಾದ ಗುರುಪಾದ ಮರಿಗುದ್ದಿ ಹೇಳಿದರು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಹಾಗೂ ಕನ್ನಡ ಸ್ನಾತಕೋತ್ತರ ವಿಭಾಗದ ಕನ್ನಡನುಡಿ ವೇದಿಕೆ ಅಡಿಯಲ್ಲಿ ಡಾ. ವೀಣಾ ಕಲ್ಮಠ ಅವರ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತದ ಬಗ್ಗೆ ತಾತ್ಸಾರ ಭಾವನೆಗಳಿದ್ದ ಸಂದರ್ಭದಲ್ಲಿ ಇಡೀ ಜಗತ್ತಿನ ದೃಷ್ಟಿಕೋನ ಬದಲಿಸಿ ವಿಶ್ವವೇದಿಕೆಯಲ್ಲಿ ಭಾರತದ ಭವ್ಯತೆಯನ್ನು ಸಾರಿದ ಏಕೈಕ ವ್ಯಕ್ತಿ ಎಂದರೆ ಸ್ವಾಮಿ ವಿವೇಕಾನಂದರು.

ಕೇವಲ ಸನ್ಯಾಸತ್ವನ್ನು ಅಷ್ಟೇ ಬೋಧಿಸದೇ ಎಲ್ಲ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದರು. ಇಡೀ ಜಗತ್ತನ್ನೇ ಸಂಚರಿಸಿ ಅದ್ಯಯನ ಮಾಡಿ ಸನಾತನ ಚಿಂತನೆಗಳ ಮೂಲಕ ಭಾರತಿಯರನ್ನು ಚೇತರಿಸುವ ಕೆಲಸಮಾಡಿದರು. ಅಮೇರಿಕಾದಲ್ಲಿ ಏರ್ಪಡಿಸಿದ್ದ ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡಿಮೆ ಸಮಯದಲ್ಲಿಯೇ ತಮ್ಮ ವಿಚಾರ ದಾರೆಯ ಮೂಲಕ ಭಾರತದ ಪ್ರಾಮುಖ್ಯತೆಯನ್ನು ಜಗತ್ತಗೆ ಸಾರಿದರು. ಧರ್ಮ ಎನ್ನುವುದು ಒಡೆದು ಆಳುವುದಕ್ಕಾಗಿ ಇಲ್ಲ, ಸಮಾಜ ಸೇವೆ ಮತ್ತು ಜನರಲ್ಲಿ ಅರಿವು ಮೂಡಿಸುವ ಒಂದು ಅಸ್ತ್ರ ಎಂದು ಜಗತ್ತಿಗೆ ಸಾರಿದರು. ಮನುಷ್ಯನ ಆತ್ಮ ಸ್ವಾತಂತ್ರ‍್ಯದಿಂದ ನಿಜವಾದ ಸ್ವಾತಂತ್ರ‍್ಯ ಸಿಗಲು ಸಾಧ್ಯ ಎಂದು ಸಂದೇಶ ಸಾರಿದ್ದು ವಿವೇಕಾನಂದರು ಎಂದರು.

ಅಂತರರಾಷ್ಟ್ರದಲ್ಲಿ ಅವರು ಮಾಡಿದ ಭಾಷಣಗಳಿಂದ ಬಂದಂತಹ ಹಣದಿಂದ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆ ಕಟ್ಟಬೇಕೆಂದು ಕನಸು ಕಟ್ಟಿಕೊಂಡಿದ್ದರು. ಅದರಂತೆಯೇ ರಾಮಕೃಷ್ಣ ಮಿಷನ್ ಕಟ್ಟಿ ಸಮಾಜ ಸೇವೆ ಮಾಡಿದರು. ಪ್ರಮುಖ ವಿದ್ವಾಂಸಕರಾದ ಮ್ಯಾಕ್ಸ್ ಮುಲ್ಲರ ಅವರು ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಬರೆಯಲು ಪ್ರೇರಣೆಯಾದದ್ದು ವಿವೇಕಾನಂದರು. ಇಡೀ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಸಾರ ಒಂದೇ ಎಂದು ಜಗತ್ತಿಗೆ ಸಾರುವ ತತ್ವವನ್ನು ವಿವೇಕಾನಂದರು ಇಟ್ಟುಕೊಂಡಿದ್ದರು ಎಂದರು. ರಾಮಕೃಷ್ಣ ಆಶ್ರಮ ಸ್ಥಾಪಿಸಲು ರಚಿಸಿಕೊಂಡ ದ್ಯೆಯಗಳನ್ನೇ ಮುಂದೆ ವಿಶ್ವಸಂಸ್ಥೆ ಸ್ಥಾಪಿಸುವಾಗ ಬಳಸಿಕೊಂಡಿದ್ದು ಐತಿಹಾಸಿಕ ಘಟನೆಯಾಗಿದೆ. ಭಾರತದ ಬಗ್ಗೆ ಪಾಶ್ಚ್ಯಾತರ ದೃಷ್ಟಿಕೋನವನ್ನು ಬದಲಿಸಿ ಜಾಗತೀಕರಣವನ್ನು ವಿಶ್ವ ಮಟ್ಟದಲ್ಲಿ ಸಾರಿದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದರು.

ಜೀವದೊಡತಿಯ ಗೈರು ಹಾಜರಿಯಲ್ಲಿ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಬಳಿಕ ಪುಸ್ತಕದ ಕುರಿತು ಡಾ. ಬಸವರಾಜ ಕುಂಬಾರ ಅವರು ಮಾತನಾಡಿ ಡಾ.ವೀಣಾ ಕಲ್ಮಠ ಅವರು 2004ರಿಂದ ಕವಿತೆ ರಚನೆಯನ್ನು ಪ್ರಾರಂಭಿಸಿ ಇದೀಗ ಜೀವದೊಡತಿಯ ಗೈರುಹಾಜರಿಯಲ್ಲಿ ಎಂಬ ಕವನ ಸಂಕಲನ ಬರೆದಿರುವುದು ಹೆಮ್ಮಯ ಸಂಗತಿ. ಕಾವ್ಯದಲ್ಲಿ ಭಾವನೆಗಳು ವ್ಯಕ್ತವಾಗಬೇಕು, ಓದುಗರನ್ನು ತರ್ಕಕ್ಕೆ ನೂಕಬೇಕು ಈ ಎರಡು ಅಂಶಗಳು ಈ ಕವನ ಸಂಕಲನದಲ್ಲಿದೆ ಎಂದರು.

ಹೆಣ್ಣಿನ ಜೀವನ, ಇತಿಹಾಸದ ಸಂಗತಿ, ಸಂಸ್ಕೃತಿಯ ಬಗ್ಗೆ, ಪ್ರೇಮ ಪ್ರಸಂಗಗಳು, ಒಲವಿನ ಭಾವನೆಗಳ ಕುರಿತಾದ ಸುಂದರವಾದ ಕವಿತೆಗಳಿದ್ದು ನಮ್ಮ ಬದುಕಿಗೆ ಹತ್ತಿರವಾದ ಕವನಗಳಾಗಿವೆ. ಇಂತಹ ಪುಸ್ತಕಗಳನ್ನು ಓದುವುದು ಅವಶ್ಯಕ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ವಿಜಯಕುಮಾರ ಕಟಗಿಹಳ್ಳಿಮಠ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ವಿಚಾರ ದಾರೆಗಳು ಎಲ್ಲರಲ್ಲೂ ಬೆಳೆಯಬೇಕು ಎನ್ನುವ ಕಾರಣಕ್ಕಾಗಿ ಅವರ ಜೀವನ ಉಪನ್ಯಾಸದ ಮೂಲಕ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಗಿದೆ. ಇನ್ನು ಪ್ರತಿಯೊಬ್ಬ ಪುರುಷನಲ್ಲಿಯೂ ಒಬ್ಬಳು ಒಡತಿ ಇರುತ್ತಾಳೆ ಅವಳು ಪುರುಷನ ಜೀವನಕ್ಕೆ ದಾರಿಯಾಗಿರುತ್ತಾಳೆ ಇದೇ ಕಾರಣಕ್ಕೆ ಜೀವದೊಡತಿಯ ಗೈರುಹಾಜರಿಯಲ್ಲಿ ಎಂಬ ಪುಸ್ತಕ ಬರೆದಿದ್ದಾರೆ. ಡಾ. ವೀಣಾ ಕಲ್ಮಠ ಅವರ ಶಬ್ದ ಸಂಗ್ರಹ ಸಾಮರ್ಥ್ಯ ಪ್ರಬಲವಾಗಿದ್ದು ಲೋಕದ ಆಗು ಹೋಗುಗಳ ಬಗ್ಗೆ ಕವಿತೆಗಳನ್ನು ರಚಿಸಿದ್ದಾರೆ ಎಂದರು.

ಪ್ರಾದ್ಯಾಪಕಿ ಡಾ.ವೀಣಾ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೇಶಕ್ಕೆ ಸ್ವತಂತ್ರ ಸಿಕ್ಕು 75 ವರ್ಷಗಳು ಕಳೆದಿದ್ದು ಇದೊಂದು ವಿಶೇಷ ದಿನವಾಗಿದೆ. ಈ ಅಮೃತ ಮಹೋತ್ಸವ ದಿನವೇ ಕವನ ಸಂಕಲನ ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ ಎಂದರು.

ಬಳಿಕ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪಿಯುಸಿ ವಿಭಾಗದ ವಿದ್ಯಾರ್ಥಿನಿಯರಿಂದ ದೇಶ ಭಕ್ತಿ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ, ಐಕ್ಯೂಎಸಿ ಸಂಯೋಜಕರಾದ ಎ. ರಾಠೋಡ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply